KSRTC Tickets: ಕೆಎಸ್‌ಆರ್‌ಟಿಸಿ ಪ್ರತಿಯೊಬ್ಬ ಪ್ರಯಾಣಿಕರಿಗೆ ಬಂಪರ್ ಗುಡ್ ನ್ಯೂಸ್!

KSRTC Tickets: ಕೆಎಸ್‌ಆರ್‌ಟಿಸಿ ತನ್ನ ಪ್ರಯಾಣಿಕರಿಗೆ ಹೊಸ ಅಪ್‌ಡೇಟ್ ಒಂದನ್ನು ನೀಡಿದ್ದು, ಇದರಿಂದ ಪ್ರಯಾಣಿಕರಿಗೆ ಉತ್ತಮ ಪ್ರಯೋಜನ ಆಗಲಿದೆ. ಹೌದು, ಎಲ್ಲೆಡೆ ಯುಪಿಎ ಬಳಕೆ ಹೆಚ್ಚಾಗಿರುವ ಕಾರಣ ಕೆಎಸ್‌ಆರ್‌ಟಿಸಿ ಕೂಡ ಬಸ್‌ಗಳಲ್ಲಿ ಟಿಕೆಟ್ (KSRTC Tickets) ಕೊಳ್ಳಲು ಯುಪಿಎ ಪಾವತಿಗೆ ಅವಕಾಶ ಮಾಡಿಕೊಡಲಿದೆ. ಇದರಿಂದಾಗಿ ಟಿಕೆಟ್ , ಪಾಸ್ ಕಳೆದು ಹೋದ ಭಯವಿರುವುದಿಲ್ಲ. ಅಲ್ಲದೇ ಹಣವನ್ನು ತೆಗೆದುಕೊಂಡು ಹೋಗುವ ಬಗ್ಗೆ ಚಿಂತಿಸಬೇಕಾಗಿಲ್ಲ.

 

ತುಳಸಿಯನ್ನು ಪೂಜಿಸುವಾಗ ತಪ್ಪದೇ ಈ ಅಂಶ ನೆನಪಿನಲ್ಲಿಡಿ!

ಸದ್ಯ ಈ ಜೂನ್ 25 ರಿಂದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ (ಕೆಎಸ್‌ಆರ್‌ಟಿಸಿ) ಬಸ್‌ಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರು ಯುಪಿಐ, ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‌ಗಳ ಮೂಲಕ ಪಾವತಿಸಬಹುದು. ಮುಖ್ಯವಾಗಿ ಕೆಎಸ್‌ಆರ್‌ಟಿಸಿ ಜೂನ್ 25 ರಿಂದ ನಾಲ್ಕು ಡಿಪೋಗಳಲ್ಲಿ ಎಲೆಕ್ಟ್ರಾನಿಕ್ ಟಿಕೆಟಿಂಗ್ ಯಂತ್ರಗಳ (ಇಟಿಎಂ) ಪ್ರಾಯೋಗಿಕ ಯೋಜನೆಯನ್ನು ಪ್ರಾರಂಭಿಸಲಿದೆ.

ಈಗಾಗಲೇ ಸಾರಿಗೆ ನಿಗಮವು ಪ್ರತಿ ಸಾಧನಕ್ಕೆ ತಿಂಗಳಿಗೆ 645 ರೂಪಾಯಿ ಬಾಡಿಗೆಗೆ 10,245 ಎಲೆಕ್ಟ್ರಾನಿಕ್ ಟಿಕೆಟಿಂಗ್ ಯಂತ್ರಗಳನ್ನು ತೆಗೆದುಕೊಂಡಿದೆ. ಮೊದಲು ಪ್ರಯೋಗ ನಡೆಸಿ ಬಳಿಕ ಎಲ್ಲೆಡೆ ಇದನ್ನು ಜಾರಿಗೆ ತರಲು ಪ್ರಯತ್ನಿಸುವುದಾಗಿ ಕೆಎಸ್‌ಆರ್‌ಟಿಸಿ ಎಂಡಿ ಅನ್ಬು ಕುಮಾರ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ಅಲ್ಲದೇ ಕಂಡಕ್ಟರ್‌ಗಳು ಚಿಲ್ಲರೆ ಕೊಡುವುದಿಲ್ಲ ಎಂಬ ಬಗ್ಗೆಯೂ ಯಾವುದೇ ದೂರುಗಳಿಲ್ಲ. ಇಟಿಎಂ ಗಳೊಂದಿಗೆ, ಪ್ರಯಾಣಿಕರು GPay, PhonePe, Paytm ಮತ್ತು ಅವರ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್‌ಗಳನ್ನು ಬಳಸಿಕೊಂಡು ಪಾವತಿಸಬಹುದು” ಎಂದು ಕೆಎಸ್‌ಆರ್‌ಟಿಸಿ ಎಂಡಿ ಅನ್ಬು ಕುಮಾರ್ ತಿಳಿಸಿದ್ದಾರೆ.

” ಮುಖ್ಯವಾಗಿ ಈ ಯಂತ್ರಗಳನ್ನು ಬಳಸುವ ಕಂಡಕ್ಟರ್‌ಗಳು ಹತ್ತುವ ಮತ್ತು ಇಳಿಯುವ ನಿಲ್ದಾಣಗಳನ್ನು ಆಯ್ಕೆ ಮಾಡಬೇಕು ಮತ್ತು ಪ್ರಯಾಣಿಕರ ಸಂಖ್ಯೆ ಮತ್ತು ಪಾವತಿ ವಿಧಾನವನ್ನು ಆರಿಸಬೇಕಾಗುತ್ತದೆ. ದರವನ್ನು ಯಂತ್ರ ಸ್ವಯಂಚಾಲಿತವಾಗಿ ಲೆಕ್ಕಹಾಕಲಾಗುತ್ತದೆ. ಮೊತ್ತವನ್ನು ಪಾವತಿಸಿದ ನಂತರ ಟಿಕೆಟ್ ಸಿಗುತ್ತದೆ. ಯಂತ್ರಗಳನ್ನು ಲಾಕ್ ಮಾಡಬಹುದು. ಅವುಗಳು ಕಳ್ಳತನವಾದರೆ ಸ್ಮಾರ್ಟ್‌ಫೋನ್‌ನಂತೆ ಟ್ರ್ಯಾಕ್ ಮಾಡಬಹುದು” ಎಂದು ಅಧಿಕಾರಿ ಮಾಹಿತಿ ನೀಡಿದ್ದಾರೆ. ಜೊತೆಗೆ ಇವುಗಳಲ್ಲಿ ಇ-ಪಾಸ್‌ಗಳಂತಹ ಸ್ಮಾರ್ಟ್ ಕಾರ್ಡ್‌ಗಳನ್ನು ಸ್ಕ್ಯಾನ್ ಮಾಡಲು ಮತ್ತು ವ್ಯಾಲಿಡ್ ಮಾಡಲು ಕ್ಯಾಮರಾಗಳಿವೆ. ಒಂದು ವೇಳೆ ಸರ್ಕಾರವು ಶಕ್ತಿ ಯೋಜನೆಯ ಫಲಾನುಭವಿಗಳಿಗೆ ಸ್ಮಾರ್ಟ್ ಕಾರ್ಡ್‌ಗಳನ್ನು ನೀಡಿದರೆ, ಅದನ್ನೂ ಇದರಲ್ಲಿ ಅಳವಡಿಸಿಕೊಳ್ಳಬಹುದು ಎಂದು ಮಾಹಿತಿ ನೀಡಿದ್ದಾರೆ.

Darshan-Pavithra Gowda: ದರ್ಶನ್‌ ಗೆಳತಿ ಪವಿತ್ರಾ ಗೌಡ ಪೊಲೀಸ್‌ ವಶಕ್ಕೆ

Leave A Reply

Your email address will not be published.