Yuvaraj Kumar and Shridevi; ಯುವ ರಾಜ್‌ ಕುಮಾರ್‌-ಶ್ರೀದೇವಿ ದಾಂಪತ್ಯ ಅಂತ್ಯ; ವಿಚ್ಛೇದನಕ್ಕೆ ಅರ್ಜಿ

Yuvaraj Kumar and Shridevi: ನಿವಿ-ಚಂದನ್‌ ಶೆಟ್ಟಿ ವಿಚ್ಛೇದನದ ನಂತರ ಇದೀಗ ನಟ ಯುವರಾಜ್‌ಕುಮಾರ್‌ ಮತ್ತು ಶ್ರೀದೇವಿ ಬೈರಪ್ಪ ಅವರ ಸಂಸಾರದಲ್ಲಿ ಬಿರುಕು ಮೂಡಿದ್ದು, ಇಬ್ಬರೂ ಬೇರೆ ಬೇರೆಯಾಗುವ ನಿರ್ಧಾರ ಮಾಡಿದ್ದು, ಈ ಕುರಿತು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿರುವ ಮಾಹಿತಿ ತಿಳಿದು ಬಂದಿದೆ. ಈ ಮೂಲಕ ದೊಡ್ಮನೆ ಕುಟುಂಬದ ದಂಪತಿಗಳು ವಿಚ್ಛೇದನಕ್ಕೆ ಹೋಗಿರುವುದು ಇದೇ ಮೊದಲು ಎನ್ನಬಹುದು.

3ನೇ ಬಾರಿ ಪ್ರಧಾನಿಯಾದ ಮೋದಿಯ ತಿಂಗಳ ಸಂಬಳ ಎಷ್ಟು ?!ಸಿಗೋ ಸೌಲಭ್ಯಗಳೇನು ?

ಶ್ರೀದೇವಿ ಅವರು ಸುಮಾರು ಆರೇಳು ತಿಂಗಳಿನಿಂದ ದೊಡ್ಮನೆ ಕುಟುಂಬದದಿಂದ ದೂರ ಉಳಿದಿದ್ದು, ಗಂಡ ಹೆಂಡತಿ ಮಧ್ಯೆ ಒಂದು ವರ್ಷದಿಂದ ಕಲಹ ಇತ್ತೆನ್ನಲಾಗಿದೆ.

ಯುವರಾಜ್‌ಕುಮಾರ್‌ ಕಡೆಯಿಂದ ವಿಚ್ಛೇದನಕ್ಕೆ ಪಿಟಿಷನ್‌ ಅರ್ಜಿ ಹಾಕಲಾಗಿದೆ. ಆದರೆ ಶ್ರೀದೇವಿ ಬೈರಪ್ಪ ಅವರ ಮುಂದಿನ ನಡೆ ಏನು ಎಂದು ಇನ್ನೂ ತಿಳಿದು ಬಂದಿಲ್ಲ. ಯುವ ಸಿನಿಮಾದ ಮುಹೂರ್ತದಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದ ದಂಪತಿ, ನಂತರ ಯುವ ರಿಲೀಸ್‌ ಸಮಯದಲ್ಲಿ ಶ್ರೀದೇವಿ ಅವರು ಕಾಣಿಸಿಕೊಂಡಿರಲಿಲ್ಲ.

ರಾಘವೇಂದ್ರ ರಾಜ್‌ಕುಮಾರ್‌ ಅವರ ಕಿರಿಯ ಮಗ ಯುವ ರಾಜ್‌ಕುಮಾರ್‌ ಅವರು ಬಹಳ ಕಾಲದ ಸ್ನೇಹಿತೆ ಶ್ರೀದೇವಿ ಭೈರಪ್ಪ ಅವರನ್ನು 2019 ಮೇ.26 ರಂದು ವಿವಾಹವಾಗಿದ್ದರು.

ವರನಟ ಡಾ.ರಾಜ್‌ಕುಮಾರ್‌ ಮೊಮ್ಮಗ ಯುವ ರಾಜ್‌ಕುಮಾರ್‌ ದೊಡ್ಮನೆಯ ಕುಡಿ. ದೊಡ್ಮನೆಯಲ್ಲಿ ದಾಂಪತ್ಯದಲ್ಲಿ ಬಿರುಕು ಮೂಡಿರುವ  ಘಟನೆ ಮುನ್ನಲೆಗೆ ಬಂದಿರುವುದು  ಇದಿರಬಹುದು. ದೊಡ್ಮನೆ ಕುಡಿಯ ಸಂಸಾರ ಕಲಹ ಕೊನೆಗೆ ವಿಚ್ಛೇದನಕ್ಕೆ ಹೋಗಿರುವುದು ಇದೀಗ ಭಾರೀ ಸುದ್ದಿಯಲ್ಲಿದೆ. ಈ ಮೂಲಕ ಐದು ವರ್ಷದ ದಾಂಪತ್ಯ ಜೀವನ ಅಂತ್ಯ ಆಗಲಿದೆ ಎನ್ನಲಾಗಿದೆ.

ಯುವ ಇದೀಗ ತಮ್ಮ ಪತ್ನಿಗೆ ನೋಟಿಸ್‌ ನೀಡಿದ್ದಾರೆ. ಯುವ ಅವರ ಪತ್ನಿ ಶ್ರೀದೇವಿಯವರು ಸದ್ಯ ವಿದೇಶದಲ್ಲಿದ್ದಾರೆ.

ಒಟ್ಟಾರೆ  ಸ್ಯಾಂಡಲ್‌ವುಡ್‌ನಲ್ಲಿ ಸಿನಿಮಾಗಿಂತ ಹೆಚ್ಚು ತಾರೆಯರ ವಿಚ್ಛೇದನ ಸುದ್ದಿಗಳೇ ಸದ್ದು ಮಾಡುತ್ತಿದೆ.

ನಕಲಿ ಸಿಬಿಐ ಗ್ಯಾಂಗ್ ನಿಂದ ಹಿರಿಯ ಅಧಿಕಾರಿಗೆ ಮಹಾ ವಂಚನೆ – 15 ನಿಮಿಷದಲ್ಲಿ ಹಿಂದಿರುಗಿಸುವುದಾಗಿ 85 ಲಕ್ಷ ರೂ. ಪಂಗನಾಮ !!

 

Leave A Reply

Your email address will not be published.