Home ದಕ್ಷಿಣ ಕನ್ನಡ Mangaluru: ಬಿಜೆಪಿ ಕಾರ್ಯಕರ್ತರಿಗೆ ಚೂರಿ ಇರಿತ ಪ್ರಕರಣ; ಮೂವರು ವಶಕ್ಕೆ

Mangaluru: ಬಿಜೆಪಿ ಕಾರ್ಯಕರ್ತರಿಗೆ ಚೂರಿ ಇರಿತ ಪ್ರಕರಣ; ಮೂವರು ವಶಕ್ಕೆ

Mangaluru

Hindu neighbor gifts plot of land

Hindu neighbour gifts land to Muslim journalist

Mangaluru: ನಿನ್ನೆ ವಿಜಯೋತ್ಸವದಲ್ಲಿ ಪಾಲ್ಗೊಂಡಿದ್ದ ಬಿಜೆಪಿ ಕಾರ್ಯಕರ್ತರಿಗೆ ತಂಡವೊಂದು ಚೂರಿಯಿಂದ ಇರಿದಿರುವ ಘಟನೆಯೊಂದು ಕೊಣಾಜೆ ಠಾಣಾ ವ್ಯಾಪ್ತಿಯ ಬೋಳಿಯಾರು ಸಮೀಪ ನಡೆದಿದೆ. ಈ ಘಟನೆ ರವಿವಾರ ರಾತ್ರಿ ನಡೆದಿದ್ದು, ಸ್ಥಳದಲ್ಲಿ ಬಿಗುವಿನ ವಾತಾವರಣ ಉಂಟಾಗಿತ್ತು.

Cabinet Ministers: ಮೋದಿ ಸಂಪುಟದ 69 ಸಚಿವರ ಪಟ್ಟಿ ಇಲ್ಲಿದೆ !!

ಇನೋಳಿ ಧರ್ಮನಗರದ ಹರೀಶ್‌ ಹಾಗೂ ನಂದನ್‌ ಕುಮಾರ್‌ ಎಂಬುವವರೇ ಚೂರಿ ಇರಿತಕ್ಕೊಳಗಾದವರು . ಗಾಯಗೊಂಡವರನ್ನು ಕೂಡಲೇ ದೇರಳಕಟ್ಟೆ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಒಂದು ಕಡೆ ಪ್ರಧಾನಮಂತ್ರಿಯಾಗಿ ನರೇಂದ್ರ ಮೋದಿ ಪ್ರಮಾಣ ವಚನ ಮಾಡಿದ್ದರೆ, ಇತ್ತ ಮಂಗಳೂರಿನಲ್ಲಿ ದಕ್ಷಿಣ ಕನ್ನಡ ಸಂಸದ ಬ್ರಿಜೇಶ್‌ ಚೌಟ ಅವರ ವಿಜಯೋತ್ಸವ ನಡೆಯುತ್ತಿತ್ತು.

ಬೋಳಿಯಾರು ಬಿಜೆಪಿ ಗ್ರಾಮಸಮಿತಿ ವತಿಯಿಂದ ಚೇಳೂರು, ಬೋಳಿಯಾರು ಮಾರ್ಗದ ಮೂಲಕ ಧರ್ಮನಗರದವರೆಗೆ ವಿಯೋತ್ಸವದ ಮೆರವಣಿಗೆ ಹೋಗುತ್ತಿತ್ತು.

ಈ ರ್ಯಾಲಿ ಮುಗಿದ ನಂತರ ಮನೆಗೆ ತೆರಳಿದ್ದ ಹರೀಶ್‌ ಮತ್ತು ನಂದನ್‌ ಅವರು ಅಂಗಡಿಯಿಂದ ವಸ್ತು ಖರೀದಿಸಲೆಂದು ಬೋಳಿಯಾರು ಕ್ರಾಸ್‌ನತ್ತ ಬಂದಿದ್ದಾರೆ. ಮನೆಗೆ ಮರಳುವಾಗ ಕೇಸರಿ ಶಾಲನ್ನು ಇವರು ಧರಿಸಿದ್ದರು ಇದನ್ನು ಕಂಡ ತಂಡವೊಂದು ಇವರನ್ನು ತಡೆದು ಬೆದರಿಸಿದ್ದು ಮಾತ್ರವಲ್ಲದೇ, ಬೈಕಿನ ಮುಂದೆ ಹರೀಶ್‌ ಅವರ ಹೊಟ್ಟೆಗೆ ಮತ್ತು ನಂದನ್‌ ಅವರ ಬೆನ್ನಿಗೆ ಚೂರಿಯಿಂದ ಇರಿದಿದೆ. ಈ ಕೃತ್ಯ ಮಾಡಿದ ನಂತರ ತಂಡ ಪರಾರಿಯಾಗಿದೆ.

ಬೋಳಿಯಾರು ನಿವಾಸಿ ಪಿಕಪ್‌ ಚಾಲಕ ಕೃತ್ಯ ಎಸಗಿರುವುದು ಎಂದು ಪ್ರಾಥಮಿಕ ತನಿಖೆಯಿಂದ ಪೊಲೀಸರಿಗೆ ತಿಳಿದುಬಂದಿದೆ ಎಂದು ವರದಿಯಾಗಿದೆ. ಪೊಲೀಸರು ಸಿಸಿಟಿವಿ ದೃಶ್ಯಗಳ ಆಧಾರದಲ್ಲಿ ಮೂವರನ್ನು ವಶಕ್ಕೆ ಪಡೆದಿದ್ದು, ಕೊಣಾಜೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

Sumalatha Ambarish: ಪ್ರತಿಷ್ಠಿತ ಬ್ಯಾಂಕ್ ವಿರುದ್ಧ ಹೋರಾಟ – ಬಡ್ಡಿ, ದಂಡ ಸಮೇತ 40 ಲಕ್ಷ ವಸೂಲಿ ಮಾಡಿದ ಸುಮಲತಾ !!