Koppala: ನರೇಗಾ ಕೆಲಸದವಳನ್ನು ಆವರಿಸಿಕೊಂಡ ದೆವ್ವ, ‘ಏನು ಬೇಕು ಅಂದಾಗ ವಿಮಲ್, ಗುಟ್ಕಾ ಕೊಡಿ ಅಂತು’- ಹೀಗೊಂದು ಹಾಸ್ಯ ಪ್ರಸಂಗ !

Koppala: ನರೇಗಾ ಕೆಲಸಕ್ಕೆಂದು ಬಂದ ಮಹಿಳೆಯನ್ನು ದೆವ್ವವೊಂದು ಆವರಿಸಿಕೊಂಡಿದ್ದು, ಏನು ಬೇಕು ಎಂದು ಕೇಳಿದಾಗ ನನಗೆ ವಿಮಲ್(Vimal), ಗುಟ್ಕಾ ಬೇಕೆಂದು ಕೇಳಿದ ವಿಚಿತ್ರ ಹಾಗೂ ಹಾಸ್ಯದ ಪ್ರಸವೊಂದು ಬೆಳಕಿಗೆ ಬಂದಿದೆ.

 

Money: ಗುಡ್ ನ್ಯೂಸ್: ನಿಮ್ಮ FD ಗೆ ಯಾವ ಬ್ಯಾಂಕ್ ಹೆಚ್ಚು ಬಡ್ಡಿದರ ನೀಡಲಿದೆ ತಿಳಿಯಬೇಕಾ? ಇಲ್ಲಿದೆ ಪ್ರಮುಖ ಬ್ಯಾಂಕ್‌ಗಳ FD ಬಡ್ಡಿದರ ಲಿಸ್ಟ್ !

ಕೊಪ್ಪಳದ (Koppala) ಕೆರೆಹಳ್ಳಿ(Kerehalli) ಗ್ರಾಮದಲ್ಲಿ‌ ನರೇಗಾ ಕಾಮಗಾರಿಯಲ್ಲಿ ಹೂಳೆತ್ತುವ ಕೆಲಸ ಮಾಡುತ್ತಿದ್ದ ‌ವೇಳೆ ಮಹಿಳೆಯನ್ನು ದೆವ್ವವೊಂದು ಆವರಿಸಿಕೊಂಡು ಆಕೆ ವಿಚಿತ್ರವಾಗಿ ವರ್ತಿಸಿದ್ದಾಳೆ. ಪಕ್ಕದಲ್ಲಿದ್ದವರೆಲ್ಲಾ ತಕ್ಷಣ ಗಾಬರಿಗೊಂಡು ಬಂಡಿಹರ್ಲಾಪುರಾ(Bandiharlapura) ಗ್ರಾಮದಲ್ಲಿ ದೆವ್ವ ಬಿಡಿಸುವ ಖಾಜಾ ಸಾಹೇಬ್ ಯಡಿಯಪೂರ (Khajasab Yadiyapura) ಅವರ ಸ್ಥಳಕ್ಕೆ ಕರೆಸಿದ್ದಾರೆ.

ಖಾಜಾ ಸಾಹೇಬ್ ಅವರು ಏನಾಯಿತು, ಯಾಕೆ ಬಂದೆ ಎಂದು ಕೇಳಿದಾಗ ನನಗೆ ವಿಮಲ್ ಕೊಟ್ರೆ ಹೋಗ್ತಿನಿ ಎಂದು ಮಹಿಳೆಗೆ ಆವರಿಸಿಕೊಂಡಿದ್ದ ದೆವ್ವ ವಿಮಲ್‌ ಗುಟ್ಕಾ ಕೇಳಿದೆ. ಈ ವೇಳೆ ತಲೆ ಮೇಲೆ ಕಲ್ಲೊರಿಸಿ ಖಾಜಾ ಸಾಹೇಬ್ ದೆವ್ವ ಬಿಡಿಸಿದ್ದಾನೆ. ಖಾಜಾ ಸಾಹೇಬ್ ಪೂಜೆ ಶುರು ಮಾಡುತ್ತಿದ್ದಂತೆ ನಾನು ಹೋಗ್ತಿನಿ ಬಿಟ್ಟು ಬಿಡು ಎಂದು ದೆವ್ವ ಕಣ್ಣೀರು ಹಾಕಿದೆ.

ವಿಮಲ್ ಗುಟ್ಕಾ ಪ್ರೇಮಿ ದೆವ್ವದ ವರ್ತನೆಗೆ ಜನ ಎದ್ದು ಬಿದ್ದು ನಕ್ಕಿದ್ದಾರೆ. ಕೊನೆಗೆ ದೆವ್ವ ಖಾಜಾ ಸಾಹೇಬನಿಗೆ ಹೆದರಿ ಕೆಲಸದ ಹೆಂಗಸಿನ ಮೈಯಿಂದ ಎಗರಿ ಮಾಯವಾಗಿದೆ.

Kootickal Jayachandran: ದೃಶ್ಯಂ ಸಿನಿಮಾ ನಟನಿಂದ 4 ವರ್ಷದ ಮಗುವಿನ ಮೇಲೆ ಲೈಂಗಿಕ ಕಿರುಕುಳ ಆರೋಪ

Leave A Reply

Your email address will not be published.