Students: ನಡುರಸ್ತೆಯಲ್ಲೇ ಅಪ್ರಾಪ್ತ ಬಾಲಕನೊಬ್ಬ ಅಪ್ರಾಪ್ತ ಬಾಲಕಿ ಹಣೆಗೆ ಸಿಂಧೂರವಿಟ್ಟ ದೃಶ್ಯ ವೈರಲ್!

Students: ಅಪ್ರಾಪ್ತ ಬಾಲಕನೊಬ್ಬ ಅಪ್ರಾಪ್ತ ವಿದ್ಯಾರ್ಥಿನಿಯೊಬ್ಬಳಿಗೆ ನಡುರಸ್ತೆಯಲ್ಲಿ ಹಣೆಗೆ ಸಿಂಧೂರವಿಟ್ಟಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ವೀಕ್ಷಕರನ್ನು ಆಶ್ಚರ್ಯ ಮೂಡಿಸಿದೆ.

ಸದ್ಯ ಅಪ್ರಾಪ್ತ ಬಾಲಕನೊಬ್ಬ ವಿದ್ಯಾರ್ಥಿನಿಯೊಬ್ಬಳಿಗೆ ಸಿಂಧೂರವಿಟ್ಟಿರುವ ಈ ಘಟನೆ ಯಾವ ಪ್ರದೇಶದಲ್ಲಿ ನಡೆದಿದೆ, ಅವರಿಬ್ಬರೂ ಯಾರು ಮತ್ತು ಯಾವ ಧರ್ಮ ದವರು ಎಂದು ಇನ್ನೂ ತಿಳಿದು ಬಂದಿಲ್ಲ. ಸದ್ಯ ಈ ಘಟನೆಯನ್ನು ಸ್ಥಳದಲ್ಲಿದ್ದವರೊಬ್ಬರು ತಮ್ಮ ಮೊಬೈಲ್ ಕ್ಯಾಮೆರಾದಲ್ಲಿ ಚಿತ್ರಿಸಿದ್ದು ಅಲ್ಲದೇ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ.

ವಿಡಿಯೋ ದಲ್ಲಿ ಶಾಲಾ ಬ್ಯಾಗ್ ಹಾಕಿಕೊಂಡು ತನ್ನ ಸ್ನೇಹಿತೆಯರೊಂದಿಗೆ ಬರುತ್ತಿದ್ದ ವಿದ್ಯಾರ್ಥಿನಿಯ ಹಣೆಗೆ ಈ ಅಪ್ರಾಪ್ತ ಬಾಲಕ ಸಿಂಧೂರವಿಟ್ಟಿದ್ದಾನೆ. ಆಕೆಯೂ ಇದಕ್ಕೆ ಯಾವುದೇ ಪ್ರತಿರೋಧ ತೋರಿಸದಿರುವುದನ್ನು ಗಮನಿಸಿದರೆ ಪರಸ್ಪರ ಒಪ್ಪಿಗೆಯಿಂದಲೇ ನಡೆದಿದೆ ಎಂದು ಹೇಳಬಹುದಾಗಿದೆ. ಅಷ್ಟೇ ಅಲ್ಲ, ಶಾಲಾ ಬಾಲಕಿ ಜೊತೆಯಿದ್ದ ವಿದ್ಯಾರ್ಥಿನಿಯರು (Students) ಕೂಡ ಅವರ ಪಕ್ಕದಲ್ಲೇ ಇದ್ದುದನ್ನು ಗಮನಿಸಬಹುದು.

ಈ ವಿಡಿಯೋ ಈಗ ಫುಲ್ ವೈರಲ್ ಆಗಿದ್ದು ನೆಟ್ಟಿಗರು ಹಲವು ರೀತಿ ಕಮೆಂಟ್ ಮಾಡುತ್ತಿದ್ದಾರೆ. ಮೊದಲೇ ಸಮಾಜದಲ್ಲಿ ಯಾವಾಗ ಏನು ನಡೆಯುತ್ತದೆ ಎನ್ನುವುದು ತಿಳಿಯುವುದಿಲ್ಲ. ಇನ್ನು ಅಪ್ರಾಪ್ತರ ಇಂತಹ ಬೆಳವಣಿಗೆ ಕಂಡಾಗ ಇವರು ತಪ್ಪು ದಾರಿಗೆ ಧುಮುಕುತ್ತಿರುವ ಸೂಚಕ ಎಂದು ಹೇಳಬಹುದು ಎಂದು ಒಬ್ಬರು ಎಚ್ಚರ ನೀಡಿದ್ದಾರೆ.

Leave A Reply

Your email address will not be published.