Home News KSRTC ಡ್ರೈವರ್ ಕಂ ಕಂಡಕ್ಟರ್‌ ಹುದ್ದೆಗಳಿಗೆ ಅರ್ಜಿ ಹಾಕಿದವರಿಗೆ ಗುಡ್ ನ್ಯೂಸ್

KSRTC ಡ್ರೈವರ್ ಕಂ ಕಂಡಕ್ಟರ್‌ ಹುದ್ದೆಗಳಿಗೆ ಅರ್ಜಿ ಹಾಕಿದವರಿಗೆ ಗುಡ್ ನ್ಯೂಸ್

Hindu neighbor gifts plot of land

Hindu neighbour gifts land to Muslim journalist

KSRTC: ಕೆಎಸ್‌ಆರ್‌ಟಿಸಿ’ಯ (KSRTC) 2020ನೇ ಸಾಲಿನ ಡ್ರೈವರ್ ಕಂ ಕಂಡಕ್ಟರ್‌ ಹುದ್ದೆಗಳ ನೇಮಕಾತಿ ಸಂಬಂಧ, ಚಾಲಕ ಕಂ ನಿರ್ವಾಹಕ ಹುದ್ದೆಗೆ ಹೆಚ್ಚುವರಿಯಾಗಿ ಅರ್ಹರಾದವರ ಪಟ್ಟಿಯನ್ನು ಹಾಗೂ ಅವರು ಯಾವ್ಯಾವ ದಿನಾಂಕದಂದು ಎಷ್ಟು ಗಂಟೆಗೆ ಮೂಲ ದಾಖಲೆಗಳ ಪರಿಶೀಲನೆಗೆ ಹಾಜರಾಗಬೇಕು ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಜೊತೆಗೆ ಅಭ್ಯರ್ಥಿಗಳ ಹೆಸರು ಹಾಗೂ ಅರ್ಜಿ ಸಂಖ್ಯೆ, ದಾಖಲೆಗಳ ಪರಿಶೀಲನೆ ದಿನಾಂಕ, ಹಾಜರಾಗಬೇಕಾದ ಸಮಯವನ್ನು ಅಭ್ಯರ್ಥಿಗಳ ವಿವರ ಪಟ್ಟಿಯಲ್ಲಿ ನೀಡಲಾಗಿದೆ.

ಪುಣೆ ಪೋರ್ಷೆ ಕಾರು ಅಪಘಾತದ ಆರೋಪಿ ವೇದಾಂತ್​ ಅಗರ್ವಾಲ್ ತಂದೆಗೆ ಸೇರಿದ ರೆಸಾರ್ಟ್​ ನಿರ್ನಾಮ!

ಈಗಾಗಲೇ ದಿನಾಂಕ 14-02-2020 ರನ್ವಯ ಚಾಲಕ ಕಂ ನಿರ್ವಾಹಕ ಹುದ್ದೆಗಳ ನೇರ ನೇಮಕಾತಿಗಾಗಿ ಹೊರಡಿಸಲಾಗಿದ್ದ ಅಧಿಸೂಚನೆಯನ್ವಯ ಅರ್ಜಿ ಸಲ್ಲಿಸಿದ್ದ ಅಭ್ಯರ್ಥಿಗಳಿಗೆ ದಿನಾಂಕ 06-03-2024 ರಿಂದ ಮೂಲ ದಾಖಲಾತಿ / ದೇಹದಾರ್ಢ್ಯತೆ ಪರಿಶೀಲನೆಯನ್ನು ನಡೆಸಿದೆ.

ಇದೀಗ ಸದರಿ ಚಾಲಕ ಕಂ ನಿರ್ವಾಹಕ ಹುದ್ದೆಗಳಿಗೆ ಹೆಚ್ಚುವರಿಯಾಗಿ ಅರ್ಹರಾದ ಅಭ್ಯರ್ಥಿಗಳಿಗೆ ಮೂಲದಾಖಲೆಗಳ ಪರಿಶೀಲನೆ ನಡೆಸಲು ಅರ್ಹತಾ ಪಟ್ಟಿಯನ್ನು ಹಾಗೂ ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಸದರಿ ಅಭ್ಯರ್ಥಿಗಳಿಗೆ ದಾಖಲಾತಿ ಪರಿಶೀಲನೆಗೆ ಎಸ್‌ಎಂಎಸ್‌ ಕಳುಹಿಸಿದ್ದು, ಕರೆ ಪತ್ರ ಡೌನ್‌ಲೋಡ್‌ ಮಾಡಿಕೊಳ್ಳಲು ಸಹ ಅವಕಾಶ ನೀಡಿದ್ದು, ಅವರ ಲಿಸ್ಟ್‌ ಅನ್ನು ಒಂದು ಪಿಡಿಎಫ್‌ ಪುಟದಲ್ಲಿ ಬಿಡುಗಡೆ ಮಾಡಲಾಗಿದೆ.

ಚಾಲಕ ಕಂ ನಿರ್ವಾಹಕ ಹುದ್ದೆಗಳಿಗೆ ಮೂಲ ದಾಖಲೆಗಳ ಪರಿಶೀಲನೆ ದಿನಾಂಕ : 13-06-2024 ರಿಂದ 29-06-2024 ರವರೆಗೆ ಇದ್ದು, ಈ ಕುರಿತು ಹೆಚ್ಚಿನ ಮಾಹಿತಿಯನ್ನು ಈಗಾಗಲೇ ಸಂಬಂಧಪಟ್ಟ ಅಭ್ಯರ್ಥಿಗಳಿಗೆ ಎಸ್‌ಎಂಎಸ್‌ ಮೂಲಕ ತಿಳಿಸಿದ್ದು, ಅವರು ನಿಗದಿತ ದಿನಾಂಕದಂದು ತಪ್ಪದೇ ಹಾಜರಾಗಬೇಕು.

ಚಾಲಕ ಕಂ ನಿರ್ವಾಹಕ ಹುದ್ದೆಗಳಿಗೆ ಹೆಚ್ಚುವರಿಯಾಗಿ ಅರ್ಹರಾದವರ ಪಟ್ಟಿ, ದಾಖಲಾತಿ ಪರಿಶೀಲನೆ ವೇಳಾಪಟ್ಟಿಗಾಗಿ ಸಂಸ್ಥೆಯ ಅಧಿಕೃತ ವೆಬ್ಸೈಟ್‌ಗೆ ಭೇಟಿ ನೀಡಿ ಪರಿಶೀಲಿಸಬಹುದು.

Rahul Gandhi: ಸದ್ಯದಲ್ಲೇ ಸಂಸದ ಸ್ಥಾನಕ್ಕೆ ರಾಹುಲ್ ಗಾಂಧಿ ರಾಜೀನಾಮೆ !!