Car Loan: ಈ ಬ್ಯಾಂಕುಗಳು ಶೂನ್ಯ-ಡೌನ್ ಪಾವತಿ ಮೇಲೆ ಕಾರ್ ಸಾಲ ನೀಡುತ್ತೆ! ಇಲ್ಲಿದೆ ಮಾಹಿತಿ!

Car Loan: ಸ್ಪರ್ಧಾತ್ಮಕ ಜಗತ್ತಿನಲ್ಲಿ ನಮಗೆ ಬೇಕು ಬೇಕಾದ ಕಾರುಗಳ ಆಯ್ಕೆಗಳು ಹಲವಾರು ರೀತಿಯಲ್ಲಿ, ಅನುಕೂಲ ದರದಲ್ಲಿ ಲಭ್ಯ ಇದೆ. ಇನ್ನು ಕಾರಿನಲ್ಲಿ ಆರಾಮದಾಯಕವಾಗಿ ಮತ್ತು ಸೇಫ್ ಆಗಿ ಕುಟುಂಬ ಸಮೇತ ಪ್ರಯಾಣ ಮಾಡಲು ಬಯಸುವ ಜನರಿಗೆ ಸಾಲ ಮಾಡಿ ದುಬಾರಿ ಕಾರು ಖರೀದಿ (Car Purchase) ಮಾಡಲು ಕೂಡ ಹಲವು ಬ್ಯಾಂಕುಗಳು ಅವಕಾಶ ‌ನೀಡುತ್ತಿದ್ದು ಕೆಲವು ಬ್ಯಾಂಕುಗಳು ಇದೀಗ ಶೂನ್ಯ ಡೌನ್ ಪಾವತಿ (Zero Down Payment) ಕಾರ್ ಸಾಲ (Car Loan) ಗಳನ್ನು ನೀಡುತ್ತಿದೆ.

Online Meeting: ಟಾಯ್ಲೆಟ್‌ನಲ್ಲಿ ಕುಳಿತು ಜೂಮ್‌ ಮೀಟಿಂಗ್‌ಗೆ ಅಟೆಂಡ್‌ ಆದ ಮಾಜಿ ಮೇಯರ್‌; ಮುಂದಾಗಿದ್ದು ಏನು ಗೊತ್ತಾ?

ಹೌದು, ಇಂದು ವಾಹನ ಖರೀದಿ ಅನಿವಾರ್ಯ ಆದರೆ ಬೆಲೆಯೂ ಕೂಡ ಹೆಚ್ಚಳ ವಾಗಿದೆ. ಇದಕ್ಕಾಗಿ ಸಾಲ (Loan) ಅನಿವಾರ್ಯ ವಾಗಿದ್ದು ಕೆಲವು ಬ್ಯಾಂಕುಗಳು ಈಗ ಶೂನ್ಯ-ಡೌನ್ ಪಾವತಿ ಕಾರ್ ಸಾಲ (Zero Down Payment Car Loan) ಗಳನ್ನು ನೀಡುತ್ತಿವೆ.

ಬ್ಯಾಂಕ್ ಆಫ್ ಮಹಾರಾಷ್ಟ್ರ (Bank Of Maharashtra) :
ಬ್ಯಾಂಕ್ ಆಫ್ ಮಹಾರಾಷ್ಟ್ರ ಬ್ಯಾಂಕ್ ಕಾರು ಸಾಲದ ಮೇಲೆ ಶೇಕಡಾ 8.70 ರಿಂದ 13.00 ರಷ್ಟು ಬಡ್ಡಿ ದರದಲ್ಲಿ ಸಾಲ ನೀಡುತ್ತೆ. ಕಾರ್ ಲೋನ್‌ಗಳಿಗೆ ಶೇಕಡಾ 0.25 ರಷ್ಟು ಅಂದರೆ ರೂ.1000 ರಿಂದ ಗರಿಷ್ಠ ರೂ.25000 ವರೆಗೆ ಸಂಸ್ಕರಣಾ ಶುಲ್ಕವನ್ನು ವಿಧಿಸಲಿದೆ.

ಕೆನರಾ ಬ್ಯಾಂಕ್ (Canara Bank):
ಕೆನರಾ ಬ್ಯಾಂಕ್ ನಲ್ಲಿ ಕಾರು ಸಾಲ ಉತ್ತಮ ಆಯ್ಕೆ ಯಾಗಿದ್ದು ಕಾರು ಸಾಲದ ಮೇಲೆ ಇಲ್ಲಿ ಶೇಕಡಾ 8.70 ರಿಂದ 12.70 ರಷ್ಟು ಬಡ್ಡಿ ದರದಲ್ಲಿ ಕಾರು ಸಾಲ (Car Loan) ವನ್ನು ನೀಡಲಿದ್ದು 0.25 ಪ್ರತಿಶತದವರೆಗೆ ಸಂಸ್ಕರಣಾ ಶುಲ್ಕದೊಂದಿಗೆ ಕಾರು ಸಾಲಗಳನ್ನು ನೀಡಲಾಗುತ್ತದೆ.

ಪಂಜಾಬ್ ನ್ಯಾಷನಲ್ ಬ್ಯಾಂಕ್ (Punjab National Bank):
ಪಂಜಾಬ್ ನ್ಯಾಷನಲ್ ಬ್ಯಾಂಕ್ ಕಾರು ಸಾಲದ ಮೇಲೆ ಶೇಕಡಾ 8.75 ರಿಂದ 10.60 ರಷ್ಟು ಬಡ್ಡಿ ದರದಲ್ಲಿ ಕಾರು ಸಾಲಗಳನ್ನು ನೀಡುತ್ತದೆ.

ಯೂನಿಯನ್ ಬ್ಯಾಂಕ್:
ಯೂನಿ ಯನ್ ಬ್ಯಾಂಕ್ ಕಾರು ಸಾಲದ ಮೇಲೆ ಶೇಕಡಾ 8.70 ರಿಂದ 10.45 ರಷ್ಟು ಬಡ್ಡಿ ದರದಲ್ಲಿ ಕಾರು ಸಾಲ ನೀಡಲಿದೆ.

ಸೆಕೆಂಡ್‌ ಹ್ಯಾಂಡ್‌ ಕಾರು ಖರೀದಿಗೂ ಕಾರ್‌ ಲೋನ್‌ ಸೌಲಭ್ಯ ಸಿಗಲಿದೆ:
ಬ್ಯಾಂಕ್‌ ಆಫ್‌ ಬರೋಡ (Bank Of Baroda) ದಲ್ಲಿ ಕ್ರೆಡಿಟ್‌ ಸ್ಕೋರ್‌ (Credit Score) ಆಧರಿಸಿ ವಾರ್ಷಿಕ ಶೇ. 8.45ರಿಂದ ಬಡ್ಡಿದರ ದಿಂದ ಸಾಲ ಸಿಗಲಿದೆ. ಇನ್ನು ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ ನಲ್ಲಿ ವಾರ್ಷಿಕ ಶೇ. 8.40 ರಿಂದ ಶೇ. 8.80ರ ಬಡ್ಡಿದರದಲ್ಲಿ ಸಾಲ ಸಿಗಲಿದೆ.

Modi Cabinet: ಮೋದಿ ಸಂಪುಟದಲ್ಲಿ ಕರ್ನಾಟಕದ 5 ಮಂದಿಗೆ ಸ್ಥಾನ !!

1 Comment
  1. Hoytt Khaziravi says

    Hoytt Khaziravi

Leave A Reply

Your email address will not be published.