Neet ವಿದ್ಯಾರ್ಥಿಗಳ ಸಾವಿನ ಸರಮಾಲೆ, ರಾಜಸ್ಥಾನದಲ್ಲಿ ಮತ್ತೊಬ್ಬ ವಿದ್ಯಾರ್ಥಿನಿ ಆತ್ಮಹತ್ಯೆ, ಸಾವಿನ ಸಂಖ್ಯೆ 11ಕ್ಕೆ ಏರಿಕೆ
NEET-UG ಪ್ರವೇಶ ಪರೀಕ್ಷೆಯ ಫಲಿತಾಂಶಗಳು ಪ್ರಕಟವಾದ ದಿನಗಳ ನಂತರ, ಮಧ್ಯಪ್ರದೇಶದ ರೇವಾ ಮೂಲದ 18 ವರ್ಷದ ನೀಟ್ ಆಕಾಂಕ್ಷಿಯೊಬ್ಬರು ಬುಧವಾರ ಸಂಜೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಆಕೆ ರಾಜಸ್ಥಾನದ ಕೋಟಾದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಡಿಟಿ ಪರೀಕ್ಷೆಯಲ್ಲಿ ಆದ ಅವ್ಯವಹಾರಕ್ಕೆ ಬೇಸತ್ತು ಹುಡುಗಿ ಸತ್ತಿದ್ದಾಳೆ ಎನ್ನಲಾಗಿದೆ.
ಚಂದನ್‌ಶೆಟ್ಟಿ-ನಿವೇದಿತಾ ಗೌಡ ದಂಪತಿಗಳ ಬಾಳಲ್ಲಿ ಬಿರುಗಾಳಿ ; ಡಿವೋರ್ಸ್‌ಗೆ ಮುಂದಾದ ಜೋಡಿ
ಈಗಾಗಲೇ ರಾಜಸ್ಥಾನದಲ್ಲಿ 10 ಮಂದಿ ನೀಟ ಆಕಾಂಕ್ಷಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೋಟಾದಲ್ಲಿ ಈ ವರ್ಷ ನಡೆದ 11ನೇ ವಿದ್ಯಾರ್ಥಿ ಆತ್ಮಹತ್ಯೆ ಪ್ರಕರಣ ಇದಾಗಿದೆ. ಕಳೆದ ವರ್ಷ ಇದೇ ನಗರದಲ್ಲಿ 26 ವಿದ್ಯಾರ್ಥಿಗಳ ಆತ್ಮಹತ್ಯೆ ಪ್ರಕರಣಗಳು ವರದಿಯಾಗಿದ್ದವು. ನೀಟ್ ಪರೀಕ್ಷೆಗಳ ಅನಂತ ಅವ್ಯವಹಾರಗಳ ನಡುವೆ ವಿದ್ಯಾರ್ಥಿಗಳು ಸಾವನ್ನಪ್ಪುತ್ತಿರುವುದು ಆತಂಕದ ಸಂಗತಿಯಾಗಿದೆ. ಇನ್ನೊಂದು ಕಡೆ ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ ಬೇಕಾಬಿಟ್ಟಿ ಗ್ರೇಸ್ ಮಾರ್ಕ್ ಕೊಟ್ಟು ವಿದ್ಯಾರ್ಥಿಗಳ ಜೀವದ ಜೊತೆ ಆಟ ಆಡುತ್ತಿದೆ.
ತನ್ನ ತಾಯಿ ಮತ್ತು ಸಹೋದರನೊಂದಿಗೆ ವಾಸಿಸುತ್ತಿದ್ದ ಬಾಗೀಶಾ ತಿವಾರಿ ಎಂಬ ಸಂತ್ರಸ್ತೆ ಕೋಟಾದ ಜವಾಹರ್ ನಗರ ಪ್ರದೇಶದಲ್ಲಿ ಐದನೆಯ ಮಹಡಿಯಿಂದ ಜಿಗಿದಿದ್ದಾಳೆ. ಆಕೆಯನ್ನು ತಕ್ಷಣ ಆಸ್ಪತ್ರೆಗೆ ಸೇರಿಸಲಾಗಿತ್ತು ಆದರೆ ಅಲ್ಲಿ ಒಂದು ಗಂಟೆಯ ನಂತರ ಆಕೆ ಸಾವನ್ನಪ್ಪಿದ್ದಳು. ಆಕೆಯ ದೇಹವನ್ನು ಮಹಾರಾವ್ ಭೀಮ್ ಸಿಂಗ್ (MBS) ಆಸ್ಪತ್ರೆಯ ಶವಾಗಾರಕ್ಕೆ ಕೊಂಡೊಯ್ಯಲಾಗಿದ್ದು ಆಕೆಯ ತಂದೆ ಕೋಟಾಕ್ಕೆ ಬಂದ ನಂತರ ಪೊಲೀಸರು ಮರಣೋತ್ತರ ಪರೀಕ್ಷೆ ನಡೆಸಲಿದ್ದಾರೆ.
ಆತ್ಮಹತ್ಯೆ ಹಿಂದಿನ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಆದರೆ, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಸಂತ್ರಸ್ತೆ ಕೋಟಾದ ಕೋಚಿಂಗ್ ಇನ್‌ಸ್ಟಿಟ್ಯೂಟ್‌ನಲ್ಲಿ ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ (ಯುಜಿ) ಪರೀಕ್ಷೆಗೆ ತಯಾರಿ ನಡೆಸುತ್ತಿದ್ದರು.
ಸಿಹಿ ಹೆಚ್ಚಿರುವ ಟೂಥ್ ಪೇಸ್ಟ್ ಬಳಸುತ್ತೀರಾ?ಈ ಅಪಾಯ ನಿಮಗೆ ಕಟ್ಟಿಟ್ಟ ಬುತ್ತಿ!