Karnataka Labour Card Scholarship 2024: ನೀವು ನೊಂದಾಯಿತ ಕಟ್ಟಡ ಕಾರ್ಮಿಕರೆ? ಹಾಗಿದ್ದರೆ ಇಲ್ಲಿದೆ ನಿಮಗೆ ಗುಡ್ ನ್ಯೂಸ್!

Karnataka Labour Card Scholarship 2024: ರಾಜ್ಯ ಸರ್ಕಾರವು ವಿದ್ಯಾರ್ಥಿಗಳ ಉತ್ತಮ ಶಿಕ್ಷಣಕ್ಕಾಗಿ ಶೈಕ್ಷಣಿಕ ಧನ ಸಹಾಯದವನ್ನು ನೀಡುತ್ತಿದ್ದು, ಇದೀಗ Karnataka Labour Card Scholarship 2024 ನ ಧನ ಸಹಾಯ ಪಡೆಯಲು ಅರ್ಹ ಹಾಗೂ ಆಸಕ್ತ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.

ಹೌದು, ರಾಜ್ಯ ಸರ್ಕಾರವು ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ವತಿಯಿಂದ ನೋಂದಾಯಿತ ಕಾರ್ಮಿಕರ ಇಬ್ಬರು ಮಕ್ಕಳಿಗೆ ಕಲಿಕಾ ಭಾಗ್ಯ (Kalika Bhagya Scholarship) ಧನ ಸಹಾಯವನ್ನು ಪ್ರತಿ ವರ್ಷ ನೀಡಲಾಗುತ್ತಿದೆ. ಅರ್ಹ ಫಲಾನುಭವಿಗಳು ಶೈಕ್ಷಣಿಕ ಧನ ಸಹಾಯವನ್ನ ಪಡೆದುಕೊಳ್ಳಬಹುದು. ಇದರಿಂದ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗದೆ ವಿದ್ಯಾಭ್ಯಾಸವನ್ನು ಮುಂದುವರೆಸಲು ನೇರವಾಗುತ್ತದೆ. ಅರ್ಹ ವಿದ್ಯಾರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

Sullia: ಕಾಂಗ್ರೆಸ್‌ ಕುರಿತು ಅವಹೇಳನಕಾರಿ ಸ್ಟೇಟಸ್‌ ಪ್ರಕರಣ; ಠಾಣೆಗೆ ದೂರು

ಕಲಿಕಾ ಭಾಗ್ಯ ಯೋಜನೆಗೆ ಅರ್ಜಿ ಸಲ್ಲಿಸಲು ಎಲ್ಲಾ ಅರ್ಹ ಫಲಾನುಭವಿಗಳು ರಾಜ್ಯ ವಿದ್ಯಾರ್ಥಿ ವೇತನ ತಂತ್ರಾಂಶ (SSP) ದ ಮೂಲಕ ಆನ್‌ಲೈನ್‌ ಅರ್ಜಿ ಸಲ್ಲಿಸಬಹುದು. ಒಂದು ವೇಳೆ 2023-24 ನೇ ಸಾಲಿಗಾಗಿ ಈಗಾಗಲೇ ಎಸ್ ಎಸ್ ಪಿ ತಂತ್ರಾಂಶದಲ್ಲಿ ಅರ್ಜಿಯನ್ನು ಸಲ್ಲಿಸಿರುವ ಫಲಾನುಭವಿ ಪುನ್ಹ ಅರ್ಜಿ ಸಲ್ಲಿಸುವ ಅವಶ್ಯಕತೆ ಇರುವುದಿಲ್ಲ.

Labour Department Scholarship 2024 ಬೇಕಾಗುವ ದಾಖಲೆಗಳು:
* ಕಾರ್ಮಿಕ ಇಲಾಖೆ ಮಂಡಳಿಯಿಂದ ನೀಡಲಾದ ನೋಂದಣಿ ಕಾರ್ಡ್
* ನೋಂದಣಿದಾರರು ಮತ್ತು ಅವರ ಪತಿ ಅಥವಾ ಪತ್ನಿಯ ಆಧಾರ್ ಕಾರ್ಡ್ ಪ್ರತಿ
* ವಿದ್ಯಾರ್ಥಿಯ ಆಧಾ‌ರ್ ಕಾರ್ಡ್‌ ಸಂಖ್ಯೆ
* ನೋಂದಣಿದಾರರ ಬ್ಯಾಂಕ್‌ ಖಾತೆಯ ವಿವರ
* ಸ್ಪೂಡೆಂಟ್ ಐಡಿ
* ವ್ಯಾಸಂಗ ಪ್ರಮಾಣ ಪತ್ರ
* ಉದ್ಯೋಗ ದೃಢೀಕರಣ ಪತ್ರ ಮತ್ತು ಸ್ವಯಂ ದೃಢೀಕರಣ ಪತ್ರ

ಅರ್ಹ ಫಲಾನುಭವಿಗಳು ಅಗತ್ಯ ದಾಖಲೆಯನ್ನು ಒದಗಿಸಿ ಕಲಿಕಾ ಭಾಗ್ಯ ಯೋಜನೆಯ ಸೌಲಭ್ಯವನ್ನು ಪಡೆದುಕೊಳ್ಳಬಹುದು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 10-06-2024 ಆಗಿರುತ್ತದೆ.
Labour Department Scholarship 2024 ಅರ್ಜಿ ಸಲ್ಲಿಸಲು ಅಧಿಕೃತ ವೆಬ್‌ಸೈಟ್‌ಗಳು:
karbwwb.karnataka.gov.in, ssp.postmatric.karnataka.gov.in

Nithish Kumar: ಸದ್ಯ NDAಯಲ್ಲಿ ಇದ್ದೇವೆ, ಕಾಲಾಂತರದಲ್ಲಿ ಬದಲಾವಣೆ ಆಗಬಹದು, ಅಧಿಕಾರ ಶಾಶ್ವತ ಅಲ್ಲ – ಬಿಜೆಪಿಗೆ ಶಾಕ್ ಕೊಟ್ಟ ನಿತೀಶ್ ಕುಮಾರ್ !!

Leave A Reply

Your email address will not be published.