Home Karnataka State Politics Updates Karnataka : ರಾಜ್ಯದ ಈ 4 ಕ್ಷೇತ್ರಗಳಿಗೆ ಉಪ ಚುನಾವಣೆ !!

Karnataka : ರಾಜ್ಯದ ಈ 4 ಕ್ಷೇತ್ರಗಳಿಗೆ ಉಪ ಚುನಾವಣೆ !!

Karnataka

Hindu neighbor gifts plot of land

Hindu neighbour gifts land to Muslim journalist

Kartanaka : ಲೋಕಸಭಾ ಚುನಾವಣೆ ಮುಗಿದಿದ್ದು, ಫಲಿತಾಂಶ ಕೂಡ ಹೊರಬಿದ್ದೆ. ಆದರೆ ಅದನ್ನು ಅರಗಿಸಿಕೊಳ್ಳಬೇಕಿದೆ. ಏಕೆಂದರೆ ಮತದಾರ ಪ್ರಭುಗಳ ನೀಡಿದ ತೀರ್ಮಾನ ಇಡೀ ದೇಶದ ರಾಜಕೀಯದಲ್ಲೇ ಭಾರೀ ಸಂಚಲನ ಸೃಷ್ಟಿಸಿದೆ.

ಇದನ್ನೂ ಓದಿ: Parliment Election : ರಾಜ್ಯದಲ್ಲಿ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಪಡೆದದ್ದೇನು? ಕಳೆದುಕೊಂಡದ್ದು ಏನನ್ನು?!

Karnataka: ಇದೇನೇ ಇರಲಿ ನಮ್ಮ ಕರ್ನಾಟಕ ರಾಜ್ಯದ ಚಿತ್ರಣ ನೋಡುವದಾದರೆ ರಾಜ್ಯದಲ್ಲಿ ಬಿಜೆಪಿ(BJP) 17, ಕಾಂಗ್ರೆಸ್ 9 ಹಾಗೂ ಜೆಡಿಎಸ್ 2 ಸ್ಥಾನಗಳನ್ನು ಪಡೆದು ಗೆಲುವಿನ ನಗೆ ಬೀರಿವೆ. ಆದರೀಗ ಈ ನಡುವೆ 4 ವಿಧಾನಸಭಾ ಸ್ಥಾನಗಳಿಗೆ ಉಪ ಚುನಾವಣೆ ನಡೆಯಬೇಕಿದೆ.

ಹೌದು, ರಾಜ್ಯದಲ್ಲಿ ಸಕ್ರಿಯ ರಾಜಕಾರಣದಲ್ಲಿ ತೊಡಗಿದ್ದು, ಇದೀಗ ರಾಷ್ಟ್ರ ರಾಜಕಾರಣದಲ್ಲಿ ಮಿಂಚಲು ರೆಡಿಯಾಗಿರುವ ಹೆಚ್.ಡಿ.ಕುಮಾರಸ್ವಾಮಿ(H D kumarswamy), ಬಸವರಾಜ ಬೊಮ್ಮಾಯಿ(Basavaraj Bommai), ಇ.ತುಕರಾಂ(E Tukaram) ಮತ್ತು ಕೋಟಾ ಶ್ರೀನಿವಾಸ್(Kotashrinivas Poojary) ಪೂಜಾರಿ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಭರ್ಜರಿ ಗೆಲುವು ದಾಖಲಿಸಿದ್ದಾರೆ. ಹೀಗಾಗಿ ಇವರ ಸ್ಥಾನಗಳು ಮುಂದೆ ತೆರವಾಗಲಿದ್ದು, ಈ ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಯಬೇಕಿದೆ.

ಹೀಗಾಗಿ ಮುಂದಿನ ದಿನಗಳಲ್ಲಿ ಕುಮಾರಸ್ವಾಮಿ ಅವರು ಪ್ರತಿನಿಧಿಷಿದ್ದ ಚೆನ್ನಪಟ್ಟಣ, ಬೊಮ್ಮಾಯಿ ಅವರ ಕ್ಷೇತ್ರ ಶಿಗ್ಗಾವಿ, ತುಕರಾಂ ಅವರ ಸಂಡೂರು ಕ್ಷೇತ್ರ ಹಾಗೂ ಸರಳ ರಾಜಕಾರಣಿಯಾದ ಕೋಟ ಶ್ರೀನಿವಾಸ ಪೂಜಾರಿ ಅವರ ವಿಧಾನಪರಿಷತ್ ಸ್ಥಾನಗಳಿಗೆ ಸದ್ಯದಲ್ಲೇ ಚುನಾವಣೆ ನಡೆಯಲಿದೆ.