Home Latest Health Updates Kannada Toilet Cleaning Tips: ಇದೊಂದು ಮಾತ್ರೆ ಹಾಕಿ ಟಾಯ್ಲೆಟ್​ ಕ್ಲೀನ್ ಮಾಡಿ ನೋಡಿ! ಪಟಾಫಟ್ ಕ್ಲೀನಿಂಗ್...

Toilet Cleaning Tips: ಇದೊಂದು ಮಾತ್ರೆ ಹಾಕಿ ಟಾಯ್ಲೆಟ್​ ಕ್ಲೀನ್ ಮಾಡಿ ನೋಡಿ! ಪಟಾಫಟ್ ಕ್ಲೀನಿಂಗ್ ಆಗೋಗುತ್ತೆ!

Toilet Cleaning Tips

Hindu neighbor gifts plot of land

Hindu neighbour gifts land to Muslim journalist

Toilet Cleaning Tips: ಟಾಯ್ಲೆಟ್ ಕಮೋಡ್ ಕ್ಲೀನಿಂಗ್ ಮಾಡೋದು ಕೆಲವರಿಗೆ ಕಷ್ಟದ ಕೆಲಸ, ಇನ್ನು ಕೆಲವರಿಗೆ ಇಷ್ಟವಿಲ್ಲದ ಕೆಲಸ, ಆದ್ರೆ ಕಮೋಡ್ ಕ್ಲೀನ್ ಮಾಡ್ಲೇಬೇಕು ಅಂತಾ ಸುಮ್ನೇ ಹೆಂಗೆಂಗೋ ಉಜ್ಜಿ ಬಿಡ್ತಾರೆ. ಆದರೆ ಹೀಗೆ ಮಾಡುವುದರಿಂದ ಕಮೋಡ್ ಸರಿಯಾಗಿ ಸ್ವಚ್ಛಗೊಳ್ಳುವುದಿಲ್ಲ. ಇದರಿಂದ ಕೊಳಕು ಕಮೋಡ್ನಲ್ಲಿ ರೋಗಾಣುಗಳು ಮನೆ ಮಾಡುತ್ತದೆ. ಮುಖ್ಯವಾಗಿ ಮನೆಯಲ್ಲಿ ಹೆಚ್ಚಾಗಿ ಬಳಕೆ ಆಗುವ ಶೌಚಾಲಯ ಕ್ಲೀನ್ ಆಗಿದ್ರೆ ಆರೋಗ್ಯ ಕೂಡ ಸೇಫ್ ಆಗಿರುತ್ತೆ.

ಇದನ್ನೂ ಓದಿ: ನಾಳೆ ಲೋಕಸಭೆ ಚುನಾವಣೆ ಫಲಿತಾಂಶ ; ರಾಜ್ಯಾದ್ಯಂತ ಸೆ.144 ಜಾರಿ; ಷರತ್ತುಗಳೇನು?

ಅದರಲ್ಲೂ ನಿಮ್ಮ ಮನೆಯಲ್ಲಿರುವ ಕಮೋಡ್ ಯಾವುದೇ ಬಣ್ಣದಾಗಿರಲಿ ಅದರಲ್ಲಿ ಕೊಳಕು ಬೇಗ ಕಾಣಿಸುತ್ತದೆ. ಅಂತಹ ಕೊಳಕು ತುಂಬಿದ ಕಮೋಡ್ ಅನ್ನು ಕೆಲವೇ ನಿಮಿಷಗಳಲ್ಲಿ ಸುಲಭವಾಗಿ ಸ್ವಚ್ಛಗೊಳಿಸಬಹುದು. ಹೌದು, ರೋಗಾಣುಗಳನ್ನು ಕೊಲ್ಲುಲು ಈ ರೀತಿ ಕಮೋಡ್ ಸ್ವಚ್ಛಗೊಳಿಸಬೇಕು. ಫ್ಲಶಿಂಗ್ ಬಟನ್ ಸೈಡ್ನಲ್ಲಿ ಇದೊಂದು ಮಾತ್ರೆ ಹಾಕುವುದರ ಮೂಲಕ ಸಮಸ್ಯೆ ನಿವಾರಣೆ (Toilet Cleaning Tips) ಆಗುತ್ತಂತೆ.

ಹೌದು, ನಿಮ್ಮ ಮನೆಯಲ್ಲಿರುವ ಕೆಲವೇ ವಸ್ತುಗಳನ್ನು ಬಳಸಿಕೊಂಡೇ ಈ ಒಂದು ಮಾತ್ರೆ ತಯಾರಿಸಿ ಇದನ್ನು ನೀವು ಕಮೋಡ್ನಲ್ಲಿ ಹಾಕಬಹುದು. ಸಾಮಾನ್ಯವಾಗಿ ಕೆಲವು ಅವಧಿ ಮೀರಿದ ಮಾತ್ರೆಗಳು, ಸ್ನಾನದ ಸಾಬೂನು ಮತ್ತು ಕಾಸ್ಟಿಕ್ ಸೋಡಾ ಮನೆಯಲ್ಲಿರುತ್ತದೆ. ಇದಕ್ಕಾಗಿ ನೀವು ಮೊದಲು 10-12 ಮಾತ್ರೆಗಳನ್ನು ಚೆನ್ನಾಗಿ ಪುಡಿ ಮಾಡಿ.

ಮಿಕ್ಸರ್ಗೆ ಸೋಪ್, ಔಷಧೀಯ ಪುಡಿ ಮತ್ತು ಕಾಸ್ಟಿಕ್ ಸೋಡಾ ಸೇರಿಸಿ. ಒಟ್ಟಿಗೆ ಚೆನ್ನಾಗಿ ರುಬ್ಬಿಕೊಳ್ಳಿ. ನಂತರ ನೀರಿನಲ್ಲಿ ಗಟ್ಟಿಯಾಗಿ ಕಲಸಿ ನಂತರ ಸಣ್ಣ ಉಂಡೆಗಳಾಗಿ ಮಾಡಿ. ನಂತರ ಈ ಮಿಶ್ರಣದ ಟ್ಯಾಬ್ಲೆಟ್ ಅನ್ನು ಒಂದು ಬಾಕ್ಸ್ ನಲ್ಲಿ ಹಾಕಿ ಇಡಿ.

ದಿನಕ್ಕೆ ಒಂದು ಅಥವಾ ಎರಡು ಮಾತ್ರೆಗಳನ್ನು ಕಮೋಡ್ನ ಫ್ಲಶ್ ಟ್ಯಾಂಕ್ನಲ್ಲಿ ಇರಿಸಿ. ನೀವು ಶೌಚಾಲಯವನ್ನು ಬಳಸಿದ ನಂತರ ಅದನ್ನು ಪ್ರತಿ ಬಾರಿ ಫ್ಲಶ್ ಮಾಡಿದಾಗ, ಸುವಾಸನೆ ಹರಡುವುದರ ಜೊತೆಗೆ ಕಮೋಡ್ಗೆ ಅಂಟಿಕೊಂಡಿರುವ ಕೊಳೆ ಮತ್ತು ರೋಗಾಣುಗಳು ಸಹ ತೆಗೆದು ಹಾಕಲ್ಪಡುತ್ತವೆ.

ಇದನ್ನೂ ಓದಿ: ರಾಧಿಕಾ ಕುಮಾರಸ್ವಾಮಿ ಆಸ್ತಿ ವಿಚಾರ ನಿಮ್ಮ ಊಹೆಗೂ ಮೀರಿದ್ದು! ಅಷ್ಟಕ್ಕೂ ಆ ಸೀಕ್ರೆಟ್ ಇಲ್ಲಿದೆ!