Anaconda Video Viral: ರಸ್ತೆ ಮಧ್ಯೆ ಅಪಾಯಕಾರಿಯಾದ ದೈತ್ಯ ಹಾವು! ವಿಡಿಯೋ ವೈರಲ್!
Anaconda Video Viral: ರಸ್ತೆ ಮಧ್ಯೆ ಅಪಾಯಕಾರಿಯಾದ ದೈತ್ಯ ಹಾವು ನೋಡಿದ್ರೆ ಯಾರಿಗೇ ಆದ್ರೂ ಒಂದು ಸಾರಿ ಭಯ ಆದೀತು. ಅಂತೆಯೇ ಟ್ರಾಫಿಕ್ ಮಧ್ಯೆ ಏಕಾಏಕಿ ಕಾಣಿಸಿಕೊಂಡ ದೈತ್ಯ ಹಾವಿನ ವಿಡಿಯೋ ಒಂದು ವೈರಲ್ ಆಗಿದೆ.
ಹೌದು, @Rainmaker1973 ಎಂಬ ಟ್ವಿಟರ್ ಖಾತೆಯಲ್ಲಿ ಈ ಬೃಹತ್ ಗಾತ್ರದ ಹಾವಿನ ವಿಡಿಯೋ ವೈರಲ್ (Anaconda Video Viral) ಆಗಿದ್ದು, ಬ್ರೆಜಿಲ್‌ನ ಪೋರ್ಟೊ ವೆಲ್ಹೋ ನಗರದ ಬಳಿ ಕಂಡು ಬಂದಿರುವ ಈ ಹಾವು ಸರಿ ಸುಮಾರು ನಾಲ್ಕು ಮೀಟರ್ ಉದ್ದ ಮತ್ತು 30 ಕೆಜಿ ತೂಕವಿರಬಹುದು ಎಂದು ಅಂದಾಜಿಸಲಾಗಿದೆ.
Somewhere in Brazil. pic.twitter.com/k25ZFSgtNB
— 𝕏 Ali Al Samahi 🇦🇪علي السماحي (@alsamahi) June 2, 2024
ಜೂನ್ 2ರಂದು ಈ ವಿಡಿಯೋ ಹಂಚಿಕೊಳ್ಳಲಾಗಿದ್ದು, ಸದ್ಯ ಒಂದೇ ದಿನದಲ್ಲಿ ನಾಲ್ಕು ಲಕ್ಷಕ್ಕೂ ಹೆಚ್ಚಿನ ವೀಕ್ಷಣೆಯನ್ನು ಪಡೆದುಕೊಂಡಿದೆ. ವೈರಲ್ ವಿಡಿಯೋದಲ್ಲಿ ಹಾವು ತನ್ನಷ್ಟಕ್ಕೆ ತೆವಳುತ್ತಾ ಯಾರಿಗೂ ತೊಂದರೆ ಮಾಡದೇ ರಸ್ತೆ ದಾಟಿ ಕಾಡಿನೊಳಗೆ ಹೋಗಿರುವುದು ಕಾಣಬಹುದು. ಈ ದೈತ್ಯ ಹಾವು ಪ್ರತ್ಯಕ್ಷವಾಗುತ್ತಿದ್ದಂತೆ ಸಾಕಷ್ಟು ಜನರು ಸೇರಿದ್ದು, ಹಾವಿಗೆ ಯಾವುದೇ ತೊಂದರೆ ಮಾಡದೇ ತಮ್ಮ ಮೊಬೈಲ್ ಮೂಲಕ ಈ ಹಾವಿನ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದಾರೆ.
ಇದನ್ನೂ ಓದಿ: ಏರ್ ಶೋ ವೇಳೆ ಯುದ್ಧ ವಿಮಾನಗಳ ಭೀಕರ ಡಿಕ್ಕಿ; ಭಯಾನಕ ವಿಡಿಯೋ ವೈರಲ್ !!