Bengaluru: ಅತ್ತ ಪ್ರಜ್ವಲ್ ರೇವಣ್ಣ ಎಸ್ ಐಟಿ ವಶಕ್ಕೆ; ಇತ್ತ ವಿಹಾರಕ್ಕೆ ತೆರಳಿದ ಕುಮಾರಸ್ವಾಮಿ ಕುಟುಂಬ

Bengaluru: ಅತ್ತ ರೇವಣ್ಣ ಕುಟುಂಬ ಚಿಂತೆಯಲ್ಲಿದೆ. ಮಹಿಳೆಯರ ಅತ್ಯಾಚಾ*ರ ಪ್ರಕರಣದಲ್ಲಿ ಆರೋಪಿ ಪ್ರಜ್ವಲ್ ರೇವಣ್ಣ ವಿದೇಶದಿಂದ ಆಗಮಿಸಿದ್ದು, ಎಸ್ ಐಟಿ ವಶದಲ್ಲಿದ್ದಾರೆ. ಇತ್ತ ಪ್ರಜ್ವಲ್ ಚಿಕ್ಕಪ್ಪ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಕುಟುಂಬದೊಂದಿಗೆ ವಿಹಾರಕ್ಕೆಂದು ತೆರಳಿದ್ದಾರೆ. ಅದು ಭಾರೀ ಚರ್ಚೆಗೆ ಮತ್ತು ಅನುಮಾನಕ್ಕೆ ಕಾರಣವಾಗಿದೆ.

ಇದನ್ನೂ ಓದಿ: Prajwal Revanna: ಪ್ರಜ್ವಲ್‌ಗೆ ಶೀಘ್ರದಲ್ಲೇ ಪುರುಷತ್ವ ಪರೀಕ್ಷೆ ಸಾಧ್ಯತೆ

ಮಹಿಳೆಯರ ಮೇಲೆ ಲೈಂಗಿಕ ದೌ*ರ್ಜನ್ಯ ಎಸಗಿದ್ದಾರೆಂದು ಕಳೆದೊಂದು ತಿಂಗಳಿಂದ ತಲೆ ಮರೆಸಿಕೊಂಡಿದ್ದ ಸಂಸದ ಪ್ರಜ್ವಲ್ ರೇವಣ್ಣನನ್ನು ಜೆಡಿಎಸ್ ಪಕ್ಷದಿಂದ ಉಚ್ಛಾಟನೆ ಮಾಡಿದ್ದ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಪ್ರಜ್ವಲ್ ದೇಶಕ್ಕೆ ಮರಳುತ್ತಿದ್ದಂತೆಯೇ ಅವರಿಂದ ದೂರ ಉಳಿದಿದ್ದಾರೆ.

ಇದನ್ನೂ ಓದಿ: Prajwal Revanna: ಪ್ರಜ್ವಲ್ ರೇವಣ್ಣ ಕೇಸ್ – ಕೋರ್ಟ್ ನಲ್ಲಿ ನಡೆದ ವಾದ-ಪ್ರತಿವಾದ ಹೇಗಿತ್ತು?!

ಹೌದು, ಕುಮಾರಸ್ವಾಮಿ ಅವರು ಹೆಂಡತಿ ಅನಿತಾ ಕುಮಾರಸ್ಬಾಮಿ, ಮಗ ನಿಖಿಲ್, ಸೊಸೆ ರೇವತಿ ಹಾಗೂ ಮೊಮ್ಮಗ ಚಿ.ಅವ್ಯಾನ್ ದೇವ್‌ನೊಂದಿಗೆ ಕಬಿನಿ ಜಲಾಶಯದ ಹಿನ್ನೀರಿನ ಬಳಿಯ ಹೋಟೆಲೊಂದರಲ್ಲಿ ಸಮಯ ಕಳೆಯುತ್ತಿದ್ದಾರೆ.

ಹಾಸನದಲ್ಲಿ ಪ್ರಜ್ವಲ್‌ ರೇವಣ್ಣ ಪೆನ್‌ ಡ್ರೈವ್ ಪ್ರಕರಣ ತೀವ್ರ ಸದ್ದು ಮಾಡಿದೆ. ಒಂದು ತಿಂಗಳ ಕಾಲ ತಲೆಮರೆಸಿಕೊಂಡಿದ್ದ ಪ್ರಜ್ವಲ್‌ ರೇವಣ್ಣ ಕೆಲ ದಿನಗಳ ಹಿಂದೆಯಷ್ಟೇ ನಾನು ಬಂದು ಎಸ್‌ ಐಟಿ ತನಿಖೆಯಲ್ಲಿ ಭಾಗಿಯಾಗುತ್ತೇನೆ ಎಂದು ಹೇಳಿದರು. ಅದರಂತೆ ಪ್ರಜ್ವಲ್‌ ರೇವಣ್ಣ ಗುರುವಾರ ತಡರಾತ್ರಿ ಬೆಂಗಳೂರಿಗೆ ಆಗಮಿಸುತ್ತಿದ್ದಂತೆ ಎಸ್‌ ಐ ಟಿ ಅಧಿಕಾರಿಗಳು ಬಂಧಿಸಿದ್ದಾರೆ. ಆದ್ರೆ ಸ್ವಂತ ಕುಟುಂಬ ವಿಹಾರದಲ್ಲಿ ತೊಡಗಿರುವುದು ಆಶ್ಚರ್ಯ ಮೂಡಿಸಿದೆ.

Leave A Reply

Your email address will not be published.