Sticker On Fruits: ಹಣ್ಣುಗಳ ಮೇಲೆ ಯಾವ ಸ್ಟಿಕ್ಕರ್ ಯಾಕೆ ಹಾಕೋದು ಗೊತ್ತಾ? ಇಲ್ಲಿದೆ ಫುಲ್ ಡಿಟೇಲ್ಸ್!
Sticker On Fruits: ಹಣ್ಣುಗಳನ್ನು ಕೊಳ್ಳಲು ಮಾರುಕಟ್ಟೆಗೆ ಹೋದಾಗ ಕಣ್ಣಿಗೆ ಅಂದವಾಗಿ ಜೋಡಿಸಿಟ್ಟ ಮಾಗಿದ ಹಣ್ಣು ಆಯ್ಕೆ ಮಾಡಿ ಮನೆಗೆ ತಂದು ಬಾಯಿ ಚಪ್ಪರಿಸಿ ತಿನ್ನುತ್ತೀರಿ. ಆದರೆ ಹಣ್ಣುಗಳ ಮೇಲೆ ಯಾವ ಸ್ಟಿಕ್ಕರ್ ಯಾಕೆ ಹಾಕೋದು ಅಂತಾ ಹೆಚ್ಚಿನವರಿಗೆ ಇನ್ನೂ ಅದರ ಮಾಹಿತಿ ಇಲ್ಲ. ಹೌದು,
ಇದನ್ನೂ ಓದಿ: Siddaramaiah: ಡಿಸಿಎಂ ರಿಂದ ಶತ್ರು ಭೈರವಿ ಯಾಗ, ಪ್ರಾಣಿ ಬಲಿ ಹೇಳಿಕೆ; ಕೇರಳ ಸರಕಾರದಿಂದ ಮಹತ್ವದ ಹೇಳಿಕೆ
ಹಣ್ಣುಗಳನ್ನು ಕೊಳ್ಳಲು ಮಾರುಕಟ್ಟೆಗೆ ಹೋದಾಗ ನೀವು ಗಮನಿಸಿರುವಿರಿ ಕೆಲವೊಂದು ಹಣ್ಣುಗಳಲ್ಲಿ ಸ್ಟಿಕ್ಕರ್ ಹಾಕಿರುತ್ತಾರೆ. ಸಾಮಾನ್ಯವಾಗಿ ಕಿವಿ, ಸೇಬು ಹಣ್ಣು, ಕಿತ್ತಳೆ,ಪೇರಳೆ ಮುಂತಾದ ಹಣ್ಣುಗಳಲ್ಲಿ ಈ ಸ್ಟಿಕ್ಕರ್‌ಗಳು ಕಾಣಸಿಗುತ್ತವೆ. ಈ ಸ್ಟಿಕ್ಕರ್ ಹಾಕಿದೆ ಎಂದರೆ ಅದರ ಬೆಲೆ ಹೆಚ್ಚು ಅಥವಾ ಇನ್ನಿತರ ನಮ್ಮ ಮನಸ್ಸಿಗೆ ಬಂದಂತೆ ಅಂದುಕೊಳ್ಳುತ್ತೇವೆ.
ಇದನ್ನೂ ಓದಿ: Vastu Tips for Money: ಹಣ, ಒಡವೆಯನ್ನು ಇಡಲು ಮನೆಯ ಈ ಜಾಗವನ್ನು ಆಯ್ಕೆ ಮಾಡಿಕೊಳ್ಳಿ! ಸಂಪತ್ತು ದುಪ್ಪಟ್ಟು ಆಗಲಿದೆ!
ಆದರೆ ಹಣ್ಣುಗಳನ್ನು ಕೊಂಡ ನಂತರ ಆ ಸ್ಟಿಕ್ಕರ್‌ನ್ನು ಓದದೆ ಬಿಸಾಡಿ ಹಣ್ಣುಗಳನ್ನು ತಿನ್ನುತ್ತೀರಿ. ನೀವು ಗಮನಿಸಿದರೆ, ಆ ಸ್ಟಿಕ್ಕರ್‌ಗಳಲ್ಲಿ ಕೆಲವು ಸಂಖ್ಯೆಗಳನ್ನು ಬರೆಯಲಾಗಿದೆ. ಇದು ವಿಶೇಷ ಅರ್ಥವನ್ನು ಹೊಂದಿದೆ. ಅದರ ಮೂಲಕ ನಾವು ಹಣ್ಣುಗಳ ಬಗ್ಗೆ ತಿಳಿದುಕೊಳ್ಳಬಹುದು ಮತ್ತು ಅವುಗಳ ಗುಣಮಟ್ಟವನ್ನು ಗುರುತಿಸಬಹುದಾಗಿದೆ.
ಹಣ್ಣುಗಳ ಮೇಲೆ ಹಾಕುವ ಸ್ಟಿಕ್ಕರ್‌ಗಳಲ್ಲಿ(Sticker On Fruits) ಹಣ್ಣಿನ ಗುಣಮಟ್ಟವನ್ನು ಸೂಚಿಸುವ ಕೋಡ್ ಅನ್ನು ಬರೆಯಲಾಗುತ್ತದೆ. ಅದರ ಮೇಲೆ ಬರೆದ ಸಂಖ್ಯೆ, ಅದರ ಸಂಖ್ಯೆಯ ಆರಂಭವು ಗುಣಮಟ್ಟವನ್ನು ಗುರುತಿಸಲು ಉದ್ದೇಶಿಸಲಾಗಿದೆ.
ಸ್ಟಿಕರ್ ಮೇಲೆ 5 ಅಂಕಿಗಳ ಸಂಖ್ಯೆ ಇದ್ದರೆ, ಹಣ್ಣುಗಳನ್ನು ಸಾವಯವವಾಗಿ ಬೆಳೆಸಲಾಗಿದೆ ಎಂದು ಅರ್ಥ. ಆದರೆ ಹಣ್ಣಿನ ಮೇಲೆ 4 ಸಂಖ್ಯೆ ಇರುವ ಸ್ಟಿಕ್ಕರ್ ಅನ್ನು ಹಾಕಿದರೆ, ಅದನ್ನು ಬೆಳೆಸಲು ರಾಸಾಯನಿಕಗಳು ಮತ್ತು ಔಷಧಿಗಳನ್ನು ಬಳಸಲಾಗಿದೆ ಎಂದು ಅರ್ಥ.
ಹಣ್ಣಿನ ಮೇಲೆ ಸ್ಟಿಕ್ಕರ್‌ನಲ್ಲಿ 5 ಅಂಕೆಗಳ ಸಂಖ್ಯೆಯನ್ನು ಬರೆದರೆ ಮತ್ತು ಅದರ ಮೊದಲ ಸಂಖ್ಯೆ 9 ರಿಂದ ಪ್ರಾರಂಭವಾದರೆ, ಈ ಕೋಡ್ ಹಣ್ಣನ್ನು ಸಾವಯವವಾಗಿ ಬೆಳೆಸಲಾಗಿದೆ ಎಂದು ಅರ್ಥ. ಅವುಗಳನ್ನು ತಿನ್ನುವುದು ಆರೋಗ್ಯಕ್ಕೆ ಹೆಚ್ಚು ಪ್ರಯೋಜನಕಾರಿಯಾಗಿದೆ.
ಹಣ್ಣಿನ ಮೇಲಿನ ಸ್ಟಿಕ್ಕರ್ 5 ಅಂಕೆಗಳ ಸಂಖ್ಯೆಯನ್ನು ಹೊಂದಿದ್ದರೆ ಮತ್ತು 8 ರಿಂದ ಪ್ರಾರಂಭವಾದರೆ, ಇದರರ್ಥ ಹಣ್ಣನ್ನು ಆನುವಂಶಿಕ ಮಾರ್ಪಾಡಿನೊಂದಿಗೆ ಬೆಳೆಸಲಾಗಿದೆ ಅಥವಾ ಅಜೈವಿಕವಾಗಿದೆ.
ಕೆಲವು ಹಣ್ಣುಗಳು ಕೇವಲ 4 ಅಂಕೆಗಳನ್ನು ಹೊಂದಿರುತ್ತವೆ. ಇದರರ್ಥ ಅವುಗಳನ್ನು ಕೀಟನಾಶಕಗಳು ಮತ್ತು ರಾಸಾಯನಿಕಗಳಿಂದ ಬೆಳೆಸಲಾಗುತ್ತದೆ. ಈ ಹಣ್ಣುಗಳಲ್ಲಿ ಹೆಚ್ಚು ರಾಸಾಯನಿಕಗಳನ್ನು ಬಳಸುವುದರಿಂದ ಕ್ಯಾನ್ಸರ್‌ನಂತಹ ಅಪಾಯಕಾರಿ ಕಾಯಿಲೆಗಳು ಬರಬಹುದು. ಈ ಹಣ್ಣುಗಳು ಸಾವಯವ ಹಣ್ಣುಗಳಿಗಿಂತ ಅಗ್ಗ ಮತ್ತು ಕಡಿಮೆ ಪ್ರಯೋಜನಕಾರಿ. ಈ ಹಣ್ಣುಗಳನ್ನು ಖರೀದಿಸುವುದು ಉತ್ತಮವಲ್ಲ. ಆದ್ದರಿಂದ ಯಾವಾಗಲೂ ಸಾವಯವ ಹಣ್ಣುಗಳನ್ನು ಮಾತ್ರ ಬಳಸಿ.