Bath Tips: ಆರೋಗ್ಯ ಕಾಪಾಡಲು ಈ 5 ಭಾಗಗಳನ್ನು ಸ್ನಾನ ಮಾಡುವಾಗ ತಪ್ಪದೇ ಸ್ವಚ್ಛ ಮಾಡಿಕೊಳ್ಳಿ!

Bath Tips: ಸ್ನಾನ ಮಾಡುವ ರೀತಿ ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಸಾಮಾನ್ಯವಾಗಿ, ಅನೇಕ ಜನರು ಸ್ನಾನ ಮಾಡುವಾಗ ದೇಹದ ಕೆಲವು ಭಾಗಗಳಿಗೆ ಸರಿಯಾದ ಗಮನವನ್ನು ನೀಡುವುದಿಲ್ಲ, ಇದರಿಂದಾಗಿ ಸೋಂಕಿನ ಸಾಧ್ಯತೆಗಳು ಹೆಚ್ಚಾಗುತ್ತವೆ. ಹೌದು, ನಮ್ಮ ದೇಹದ ಪ್ರತಿಯೊಂದು ಭಾಗವನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಆರೋಗ್ಯದ ದೃಷ್ಟಿಯಿಂದ ಬಹಳ ಮುಖ್ಯ. ಅದಕ್ಕಾಗಿ ನಾವು ಪ್ರತಿದಿನ ಸ್ನಾನ ಮಾಡಬೇಕು. ಅದರಲ್ಲೂ ಕೆಲವರು ಸ್ನಾನ ಮಾಡುವಾಗ ಈ ಭಾಗವನ್ನು ಸ್ವಚ್ಛಗೊಳಿಸುವುದೇ ಇಲ್ಲ. ಇದರಿಂದ ನಾನಾ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಅಂತಹ ಸಮಸ್ಯೆ ತಪ್ಪಿಸಲು ಇಲ್ಲಿದೆ ಪರಿಹಾರ (Bath Tips).

ಇದನ್ನೂ ಓದಿ: Egg Benifits: ಮೊಟ್ಟೆಯನ್ನು ಪ್ರತಿ ದಿನ ತಿಂದರೆ ಒಳ್ಳೆಯದೋ? ಕೆಟ್ಟದ್ದೋ? ಇಲ್ಲಿದೆ ನೋಡಿ ಹೆಲ್ತ್ ಟಿಪ್ಸ್

ಮುಖ್ಯವಾಗಿ ಸ್ನಾನ ಮಾಡುವಾಗ ಚಿಕ್ಕ ಚಿಕ್ಕ ವಿಷಯಗಳ ಬಗ್ಗೆ ಕಾಳಜಿ ವಹಿಸುವುದು ಬಹಳ ಮುಖ್ಯ. ಮೊದಲು ಚರ್ಮದ ಸೋಂಕಿನ ಅಪಾಯವನ್ನು ತಪ್ಪಿಸಲು ನಿಮ್ಮ ತೋಳುಗಳನ್ನು ಸ್ವಚ್ಛಗೊಳಿಸುವ ಅಭ್ಯಾಸವನ್ನು ಮಾಡಿಕೊಳ್ಳಿ. ನಿಮ್ಮ ಕಂಕುಳನ್ನು ಸ್ವಚ್ಛಗೊಳಿಸದಿದ್ದರೆ, ಬೆವರಿನಿಂದ ಸೋಂಕು ಬರುವ ಸಾಧ್ಯತೆಗಳು ಹೆಚ್ಚಾಗುತ್ತವೆ.

ಇದನ್ನೂ ಓದಿ: Prajwal Revanna: ಪ್ರಜ್ವಲ್ ಬಂಧನ ಆಯ್ತು- ಮುಂದೆ SIT ಕೆಲಸವೇನು? ಯಾವೆಲ್ಲಾ ತನಿಖೆ ನಡೆಯುತ್ತೆ?

ದೇಹದ ಇತರ ಭಾಗಗಳಂತೆ, ನೀವು ಕಿವಿಯ ಸುತ್ತಲೂ ಸ್ವಚ್ಛಗೊಳಿಸಬೇಕು. ಅನೇಕ ಜನರ ಕಿವಿಯ ಸುತ್ತಲಿನ ಚರ್ಮದ ಮೇಲೆ ಕೊಳಕು ಇರುತ್ತದೆ. ಇದರಿಂದ ಸೋಂಕಿನ ಸಾಧ್ಯತೆಗಳಿರುತ್ತದೆ.

ವಿಶೇಷವಾಗಿ ಸ್ನಾನ ಮಾಡುವಾಗ ನಿಮ್ಮ ಮೊಣಕಾಲುಗಳು ಮತ್ತು ಮೊಣಕೈಗಳನ್ನು ಸ್ವಚ್ಛಗೊಳಿಸಿ. ಹೆಚ್ಚಿನ ಜನರು ತಮ್ಮ ಚರ್ಮದ ಬಣ್ಣಕ್ಕಿಂತ ಗಾಢವಾದ ಕಪ್ಪು ಮೊಣಕೈಗಳು ಮತ್ತು ಮೊಣಕಾಲುಗಳನ್ನು ಹೊಂದಿರುತ್ತಾರೆ. ಈ ಕಪ್ಪು ನಿಮ್ಮ ವ್ಯಕ್ತಿತ್ವವನ್ನು ಹಾಳು ಮಾಡುವ ಕೆಲಸ ಮಾಡುತ್ತದೆ. ಮೊಣಕಾಲು ಮತ್ತು ಮೊಣಕೈಗಳನ್ನು ಸರಿಯಾಗಿ ಸ್ವಚ್ಛಗೊಳಿಸದಿದ್ದರೆ, ಚರ್ಮವು ಶುಷ್ಕವಾಗಿರುತ್ತದೆ ಹಾಗೂ ಸೋಂಕಿನ ಅಪಾಯವನ್ನು ಹೆಚ್ಚಿಸುತ್ತದೆ.

ಇನ್ನು ನೀವು ತೊಡೆಯ ಪ್ರದೇಶವನ್ನು ಸರಿಯಾಗಿ ಸ್ವಚ್ಛಗೊಳಿಸದಿದ್ದರೆ, ಚರ್ಮವು ಕಪ್ಪು ಮತ್ತು ಶುಷ್ಕವಾಗಿರುತ್ತದೆ. ತೊಡೆಯ ಮೇಲಿನ ಕೊಳೆಯನ್ನು ಸ್ವಚ್ಛವಾಗಿಟ್ಟುಕೊಳ್ಳದಿದ್ದರೆ ತುರಿಕೆ, ಅಲರ್ಜಿ, ಉರಿ ಮುಂತಾದ ಹಲವು ರೀತಿಯ ಸಮಸ್ಯೆಗಳು ಬರುತ್ತವೆ.

ಜೊತೆಗೆ ಪಾದಗಳು ನಮ್ಮ ದೇಹದ ಪ್ರಮುಖ ಭಾಗಗಳಲ್ಲಿ ಒಂದಾಗಿದೆ. ನೀವು ಈ ಅಂಗವನ್ನು ಸರಿಯಾಗಿ ಸ್ವಚ್ಛಗೊಳಿಸದಿದ್ದರೆ, ಧೂಳಿನಿಂದ ಪಾದಗಳಲ್ಲಿ ಸೋಂಕಿನ ಸಾಧ್ಯತೆಗಳು ಹೆಚ್ಚಾಗುತ್ತವೆ. ಇದರೊಂದಿಗೆ, ಅನೇಕ ಇತರ ಸಮಸ್ಯೆಗಳ ಅಪಾಯವು ಹೆಚ್ಚಾಗುತ್ತದೆ.

Leave A Reply

Your email address will not be published.