Satta Bazar : ಲೋಕಸಭಾ ಫಲಿತಾಂಶದ ಬಗ್ಗೆ ಬಿಜೆಪಿ ಬಿಗ್ ಶಾಕ್ ಕೊಟ್ಟ ಸಟ್ಟಾ ಬಜಾರ್ ಭವಿಷ್ಯ !!

Share the Article

Satta Bazar: 2024ರ ಲೋಕಸಭಾ ಚುನಾವಣೆಯಲ್ಲೂ(Parliament Election) ಭರ್ಜರಿ ಗೆಲುವು ಸಾಧಿಸಿ ಹ್ಯಾಟ್ರಿಕ್ ಭಾರಿಸಿಲು ತುದಿಗಾಲಲ್ಲಿ ನಿಂತಿರುವ ಬಿಜೆಪಿಗೆ ಸಟ್ಟಾ ಬಜಾರ್(Satta Bazar) ಭವಿಷ್ಯ ದೊಡ್ಡ ಆಘಾತ ನೀಡಿದೆ. ಇದರ ಭವಿಷ್ಯ ಕಂಡು ಸ್ವತಃ ಬಿಜೆಪಿ(BJP) ಕೂಡ ಕಂಗಾಲಾಗಿದೆ.

ಇದನ್ನೂ ಓದಿ: Astro Tips: ಒಂದು ವೀಳ್ಯದೆಲೆಯಿಂದ ನೂರಾರು ಸಮಸ್ಯೆಗಳನ್ನು ಪರಿಹಾರ ಮಾಡುವ ಶಕ್ತಿ ಇದೆಯಂತೆ! ಇಲ್ಲಿದೆ ನೋಡಿ ಫುಲ್ ಡೀಟೇಲ್ಸ್

ದೇಶಾದ್ಯಂತ ಹಂತ ಹಂತವಾಗಿ ನಡೆದ ಲೋಕಸಭಾ ಚುನಾವಣೆಯು ಜೂನ್‌ 1ಕ್ಕೆ ಮುಕ್ತಾಯವಾಗಲಿದೆ. ಅದೇ ದಿನ ಎಕ್ಸಿಟ್‌ ಪೋಲ್‌ ಕೂಡ ಬಿಡುಗಡೆಯಾಗಲಿದೆ. ಬಳಿಕ ಜೂನ್ 6ಕ್ಕೆ ಫಲಿತಾಂಶ ಕೂಡ ಹೊರಬೀಳಲಿದೆ. ಆದರೆ ಇದೆಲ್ಲದಕ್ಕೂ ಮುಂಚಿತವಾಗಿ, ಹ್ಯಾಟ್ರಿಕ್ ಕನಸು ಕಂಡಿರುವ ಬಿಜೆಪಿಗೆ ಸಟ್ಟಾ ಬಜಾರ್, ಆಘಾತಕಾರಿಯಾದ ಫಲಿತಾಂಶಗಳು ಬರುವ ಸೂಚನೆ ನೀಡಿದೆ.

ಇದನ್ನೂ ಓದಿ: MadhyaPradesh: ಮದುವೆಯಾದ ಎರಡೇ ದಿನಕ್ಕೆ ಮಗುವಿಗೆ ಜನ್ಮ ನೀಡಿದ ಮಹಿಳೆ; ವರ ಶಾಕ್‌

ಹೌದು, ಚುನಾವಣೆಗೂ ಮುನ್ನ ಬಿಜೆಪಿಗೆ 315 ಸೀಟ್‌ಗಳ ಅಂದಾಜು ನೀಡಿದ ಸಟ್ಟಾ ಬಜಾರ್‌, 6ನೇ ಹಂತದ ಚುನಾವಣೆ ಮುಗಿದ ಬಳಿಕ ಬಿಜೆಪಿ 290 ಸೀಟ್‌ ಗೆಲ್ಲಬಹುದು ಎಂದು ಅಂದಾಜು ಮಾಡಿದೆ. ಹಂತದಿಂದ ಹಂತಕ್ಕೆ ಬಿಜೆಪಿ ಗೆಲುವಿನ ಸಂಖ್ಯೆ ಇಳಿಮುಖವಾಗುತ್ತಿದೆ. ಇನ್ನು ಎನ್‌ಡಿಎ ಮೈತ್ರಿಕೂಟವು ಸುಲಭವಾಗಿ 325-330 ಕ್ಷೇತ್ರಗಳಲ್ಲಿ ಜಯಿಸಲಿದೆ ಎಂದು ಹೇಳಿದೆ.

ಬಿಜೆಪಿ ಕಡಿಮೆ ಸೀಟ್ ಕಡಿಮೆ ತೋರಿಸಿದ ಮಾತ್ರಕ್ಕೆ ಕಾಂಗ್ರೆಸ್ ಪಕ್ಷದ ಗೆಲುವಿನ ಸಂಖ್ಯೆಯಲ್ಲಿ ಹೆಚ್ಚಿನ ಏರಿಕೆಯಾಗಿಲ್ಲ. ಪ್ರಾದೇಶಿಕ ಪಕ್ಷಗಳು ಗೆಲ್ಲುವ ಸಂಖ್ಯೆಯಲ್ಲಿ ಏರಿಕೆ ಕಾಣಬಹುದು ಎನ್ನಲಾಗಿದೆ. ಸಟ್ಟಾ ಬಜಾರ್‌ನಲ್ಲಿ ಬಿಜೆಪಿ ಗೆಲುವಿನ ಪರವಾಗಿಯೇ ಹೆಚ್ಚಿನ ಬೆಟ್ಟಿಂಗ್‌ ನಡೆದಿದೆ.

ಬದಲಾದ ಚಿತ್ರಣ

ಮೂರು ಹಂತಗಳ ಮತದಾನದ ನಂತರ ಬಿಜೆಪಿಗೆ 270ರಿಂದ 280 ಮತ್ತು ಕಾಂಗ್ರೆಸ್‌ಗೆ 70ರಿಂದ 80 ಸೀಟು ಸಿಗಬಹುದು ಎಂದು ಭವಿಷ್ಯವಾಣಿಯಲ್ಲಿ ಅಂದಾಜಿಸಲಾಗಿತ್ತು. ಆರು ಹಂತಗಳ ಮತದಾನ ಮುಗಿದ ಬಳಿಕ ಚಿತ್ರಣ ಬದಲಾಗಿದ್ದು, ಬಿಜೆಪಿಗೆ 295ರಿಂದ 305 ಮತ್ತು ಕಾಂಗ್ರೆಸ್‌ಗೆ 55ರಿಂದ 65 ಸೀಟು ಲಭಿಸಬಹುದು ಎನ್ನುವ ಲೆಕ್ಕಾಚಾರ ಆರಂಭವಾಗಿದೆ.

ಸಟ್ಟಾ ಬಜಾರ್ ಅಂದ್ರೆ ಏನು?

ಫಲೋಡಿ ಸಟ್ಟಾ ಮಾರುಕಟ್ಟೆಯು ಶತಮಾನಗಳ ಇತಿಹಾಸ ಹೊಂದಿದೆ. 19 ನೇ ಶತಮಾನದ ಅಂತ್ಯದ ವೇಳೆಗೆ ಈ ಮಾರುಕಟ್ಟೆಯ ಭವಿಷ್ಯವಾಣಿ ಮೂಲಕ ದೇಶದ ಗಮನವನ್ನೇ ಸೆಳೆದಿತ್ತು. ಹಿಂದೆ ಮಳೆಯ ಮುನ್ಸೂಚನೆಗಾಗಿ ಈ ಮಾರುಕಟ್ಟೆಯ ಮೇಲೆ ಜನ ಅವಲಂಭಿಸಿದ್ದರು. ಬರು ಬರುತ್ತಾ ಈ ಕಲೆ ದಂಧೆಯಾಗಿ ಮಾರ್ಪಾಡಾಗಿತ್ತು. ಅನಂತರದ ದಿನಗಳಲ್ಲಿ ಚುನಾವಣಾ ಭವಿಷ್ಯವಾಣಿ, ಬೆಟ್ಟಿಂಗ್‌ ದಂಧೆಗಳಿಗೆ ಈ ಮಾರುಕಟ್ಟೆ ಕುಖ್ಯಾತಿ ಪಡೆಯಿತು. ಕಾನೂನೂ ಬಾಹಿರವಾಗಿದ್ದರೂ ಕ್ರಿಕೆಟ್‌, ಐಪಿಎಲ್‌ ಸಂದರ್ಭದಲ್ಲಿ ಇಲ್ಲಿ ಅತಿ ಹೆಚ್ಚಾಗಿ ಬೆಟ್ಟಿಂಗ್‌ ನಡೆಯುತ್ತದೆ ಎಂಬ ಆರೋಪ ಕೇಳಿಬರುತ್ತದೆ.

ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲೂ ಭವಿಷ್ಯ ನುಡಿದಿದ್ದ ಸಟ್ಟಾ ಬಜಾರ್:

ಕರ್ನಾಟಕ ವಿಧಾನಸಭಾ ಚುನಾವಣೆ(Vidhanasabha Election) ವೇಳೆಯಲ್ಲೂ ಇದೇ ಸಟ್ಟಾ ಬಜಾರ್‌ ಅಂಕಿ ಅಂಶಗಳನ್ನು ನೀಡಿತ್ತು. ಬಿಜೆಪಿ ಪಕ್ಷವೇ ಅಧಿಕಾರಕ್ಕೆ ಬರಲಿದೆ ಎನ್ನಲಾಗ್ತಿತ್ತು. ಆದರೆ ಸಟ್ಟಾ ಬಜಾರ್‌ನಲ್ಲಿ ಮಾತ್ರ ಕಾಂಗ್ರೆಸ್‌ ಪಕ್ಷ 137 ಸ್ಥಾನ ಗೆಲ್ಲುತ್ತದೆ ಎನ್ನಲಾಗಿತ್ತು. ಕಾಂಗ್ರೆಸ್‌ ಪಕ್ಷ 135 ಸ್ಥಾನ ಗೆಲುವು ಕಾಣುವ ಮೂಲಕ ಹೆಚ್ಚು ಕಡಿಮೆ ನಿಖರ ಮಾಹಿತಿ ನೀಡಿತ್ತು.

Leave A Reply