Prajwal Revanna: 2 ಸಲ ಟಿಕೆಟ್ ಕ್ಯಾನ್ಸಲ್ ಮಾಡಿದ್ದ ಪ್ರಜ್ವಲ್ ಕೊನೆಗೂ ಮೇ 31ರಂದೇ ಭಾರತದತ್ತ ಹೊರಟಿದ್ದೇಕೆ?
Prajwal Revanna: ಅಶ್ಲೀಲ ವಿಡಿಯೋ ಪ್ರಕರಣದ ಆರೋಪಿ ಹಾಸನ ಸಂಸದ ಪ್ರಜ್ವಲ್ ರೇವಣ್ಣ(Prajwal Revanna) ಯಾರ ಕೈಗೂ ಸಿಗದೆ ವಿದೇಶಕ್ಕೆ ಹಾರಿ, ತಿಂಗಳಿಂದ SIT ಯನ್ನು ಸತಾಯಿಸುತ್ತಿದ್ದು ಇದೀಗ ದಿಢೀರ್ ಎಂದು ಪ್ರತ್ಯಕ್ಷವಾಗಿದ್ದಾರೆ. ಅಷ್ಟೇ ಅಲ್ಲ ಮೇ 31ರಂದು ಭಾರತಕ್ಕೆ ಬಂದು ಸೆರೆಂಡರ್ ಕೂಡ ಆಗುವುದಾಗಿ ತಿಳಿಸಿದ್ದಾರೆ. ಆದರೆ ಪ್ರಜ್ವಲ್ ಮೇ 31ರಂದೇ ಭಾರತಕ್ಕೆ ಬರುತ್ತಿರುವುದೇಕೆ? ಇದರ ಹಿಂದಿನ ಕಾರಣ ಏನು? ಪ್ರಜ್ವಲ್ ಗೆ ಭಯ ಹುಟ್ಟಿಸಿದ್ದಾರೂ ಏನು? ಇಲ್ಲಿದೆ ನೋಡಿ ಕಂಪ್ಲೀಟ್ ಡೀಟೇಲ್ಸ್.
ಹೌದು, ಅಶ್ಲೀಲ ವಿಡಿಯೋಗಳನ್ನು ಒಳಗೊಂಡ ಪೆನ್ ಡ್ರೈವ್ ಕೇಸಿನಲ್ಲಿ ಸಿಲುಕಿ, ದೇಶಾದ್ಯಂತ ಸಂಚಲನ ಸೃಷ್ಟಿಸಿ, ಯಾರ ಕೈಗೂ ಸಿಗದೆ ವಿದೇಶಕ್ಕೆ ಹಾರಿ, ಸುಮಾರು ಒಂದು ತಿಂಗಳಿಂದ ಸತಾಯಿಸುತ್ತಿದ್ದ ಹಾಸನ ಸಂಸದ ಪ್ರಜ್ವಲ್ ರೇವಣ್ಣ(Prajwal Revanna) ಕೊನೆಗೂ ವಿಡಿಯೋ ಮೂಲಕ ಪ್ರತ್ಯಕ್ಷವಾಗಿದ್ದಾರೆ. ಅಷ್ಟೇ ಅಲ್ಲ ಕುಟುಂಬ, ನಾಡಿನ ಜನ, ಕುಮಾರಣ್ಣ, ದೊಡ್ಡಣ್ಣ, ರೇವಣ್ಣ ಎಲ್ಲರ ಬಳಿಯೂ ಕ್ಷಮೆ ಕೇಳಿ ನಾನು ಮೇ 31 ರಂದು ಭಾರತಕ್ಕೆ ಬಂದು SITಗೆ ಸೆರೆಂಡರ್ ಆಗುವೆ, ಅವರ ಎಲ್ಲಾ ತನಿಖೆಗೆ ಸಹಕರಿಸುವೆ ಎಂದಿದ್ದಾರೆ. ಇದು ಒಳ್ಳೆಯ ಕೆಲಸ ಬಿಡಿ. ಆದರೆ ಇಲ್ಲಿ ಆಶ್ಚರ್ಯ ಏನಂದ್ರೆ ಒಂದು ತಿಂಗಳಿಂದಲೂ ಯಾರಿಗೂ ಕಾಣಿಸದ ಪ್ರಜ್ವಲ್ ಈಗ ಪ್ರತ್ಯಕ್ಷ ಆಗಿ ಭಾರತಕ್ಕೆ ಬರುತ್ತೇನೆ ಎಂದು ಹೇಳೀದ್ದು. ಅದೂ ಕೂಡ ನಡುವೆ ಎರಡು ಬಾರಿ ಭಾರತಕ್ಕೆ ಬರಲು ಫ್ಲೈಟ್ ಟಿಕೆಟ್ ಬುಕ್ ಮಾಡಿ, ಕ್ಯಾನ್ಸಲ್ ಕೂಡ ಮಾಡಿದ್ದ ಆಸಾಮಿ ಇದೀಗ ಮೇ 31 ರಂದೇ ನಿಖರವಾಗಿ ತಾನು ಭಾರತಕ್ಕೆ ಬಂದು SIT ಗೆ ಸೆರೆಂಡರ್ ಆಗುತ್ತೇನೆ ಎಂದು ಹೇಳಿದ್ದು !! ಯಾಕೆ ಹೀಗೆ? ಮೇ 31ರ ವಿಶೇಷತೆ ಏನು? ಆ ದಿನವನ್ನೇ ಪ್ರಜ್ವಲ್ ಆರಿಸಿದ್ದು ಯಾಕೆ? ಇಲ್ಲಾ ಪ್ರಜ್ವಲ್ ಗೆ ಕೊನೆಗೂ ಭಯ ಕಾಡಿತೇ…? ಇದೆಲ್ಲದಕ್ಕೂ ಇಲ್ಲಿದೆ ನೋಡಿ ಇಂಟ್ರೆಸ್ಟಿಂಗ್ ಉತ್ತರ.
ಇದನ್ನೂ ಓದಿ: Prajwal Revanna: ಮ್ಯೂನಿಕ್‍ನಿಂದ ಬೆಂಗಳೂರಿಗೆ ಟಿಕೆಟ್ ಬುಕ್ ಮಾಡಿದ ಪ್ರಜ್ವಲ್ ರೇವಣ್ಣ !!
ಹೌದು, ಪ್ರಜ್ವಲ್ ನನ್ನು ನಿಜಕ್ಕೂ ಕಾಡಿದ್ದು ಭಯವೆ !! ಅದು ಸಾಮಾನ್ಯ ಭಯವಲ್ಲ. ಪಾಸ್ಪೋರ್ಟ್ ರದ್ದಾಗುವ ಭಯ. ಯಸ್, ಬಂಧನ ಆದರೆ ಪ್ರಜ್ವಲ್ ಹೇಗೋ ಜಾಮೀನಿನ ಮೇಲೆ ಹೊರ ಬರುತ್ತಾರೆ. ಇದರಲ್ಲಿ ಅನುಮಾನವಿಲ್ಲ. ಸಂಸದ ಸ್ಥಾನ ಅಮಾನತ್ತಾದರೆ ಮುಂದಿನ ಚುನಾವಣೆಯಲ್ಲಿ ಗೆಲ್ಲಬಹುದು. ಮರ್ಯಾದೆ ಹೋದರೆ ಮತ್ತೆ ಹೇಗಾದರೂ ಗಿಟ್ಚಿಸಿಕೊಳ್ಳಬಹುದು. ಆದರೆ ಪಾಸ್ಪೋರ್ಟ್ ರದ್ಧಾದರೆ ವಿದೇಶದಿಂದ ಬರುವುದು ಹೇಗೆ? ಯಾಕೆಂದರೆ ಪ್ರಜ್ವಲ್ ದಿಢೀರ್ ಎಂದು ವಿದೇಶಕ್ಕೆ ಹಾರಿದ್ದು ಸಾಮಾನ್ಯ ಪಾಸ್ಪೋರ್ಟ್ ನಿಂದ ಅಲ್ಲ. ರಾಜತಾಂತ್ರಿಕ ಪಾಸ್ಪೋರ್ಟ್ ನಿಂದ !!
ರಾಜ ತಾಂತ್ರಿಕ ಪಾಸ್ಪೋರ್ಟ್ ಎಂದರೇನು?
ರಾಜತಾಂತ್ರಿಕ ಅಧಿಕಾರಿಗಳು ಮತ್ತು ದೇಶವನ್ನು ಪ್ರತಿನಿಧಿಸುವ ವ್ಯಕ್ತಿಗಳಿಗೆ ಈ ಪಾಸ್‌ಪೋರ್ಟ್ ಕೊಡಲಾಗುತ್ತದೆ. 28 ಪುಟಗಳಿರುವ ಈ ಪಾಸ್ಪೋರ್ಟ್ ಅನ್ನು ಗರಿಷ್ಠ 5 ವರ್ಷಗಳ ಅವಧಿಗೆ ಸೀಮಿತವಾಗಿ ವಿತರಿಸಲಾಗುತ್ತದೆ. ಇದಕ್ಕೆ ಟೈಪ್ ಡಿ ಪಾಸ್ಪೋರ್ಟ್ ಎಂಬ ಹೆಸರೂ ಇದೆ. ಭಾರತೀಯ ವಿದೇಶಾಂಗ ಸೇವೆಗಳ, ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಅಡಿಯಲ್ಲಿ ಕೆಲಸ ಮಾಡುವ ಅಧಿಕಾರಿಗಳು, ಅವರ ಕುಟುಂಬಸ್ಥರು ಮತ್ತು ಅಧಿಕೃತ ಉದ್ದೇಶಗಳಿಗಾಗಿ ವಿದೇಶಕ್ಕೆ ಭೇಟಿ ನೀಡುವ ಸಾಂವಿಧಾನಿಕ ಹುದ್ದೆಯ ವ್ಯಕ್ತಿಗಳು, ರಾಜತಾಂತ್ರಿಕ ಸ್ಥಾನಮಾನ ಹೊಂದಿರುವ ವ್ಯಕ್ತಿಗಳು, ವಿದೇಶಿ ಪ್ರವಾಸಗಳಿಗಾಗಿ ಭಾರತ ಸರ್ಕಾರದಿಂದ ನೇಮಕಗೊಂಡ ಅಧಿಕಾರಿಗಳಿಗೆ ಡಿಪ್ಲೊಮ್ಯಾಟಿಕ್ ಪಾಸ್‌ಪೋರ್ಟ್ ನೀಡಲಾಗುತ್ತದೆ.
ಐದು ವರ್ಷದ ಸಂಸತ್ ಸದಸ್ಯ ಸ್ಥಾನದ ಅವಧಿ ಮುಗಿಯುವ ಸಮಯಕ್ಕೆ ಇವರ ಡಿಪ್ಲೊಮ್ಯಾಟಿಕ್ ಪಾಸ್ಪೋರ್ಟ್ ಅವಧಿಯೂ ಮುಕ್ತಾಯವಾಗುತ್ತದೆ. ನಂತರ ಸಂಸದರಾಗಿ ಮರು ಆಯ್ಕೆಯಾದಲ್ಲಿ ಮಾತ್ರ ಡಿಪ್ಲೊಮ್ಯಾಟಿಕ್ ಪಾಸ್‌ಪೋರ್ಟ್ ನವೀಕರಿಸಿಕೊಳ್ಳಬಹುದು. ಇಲ್ಲದೇ ಇದ್ದಲ್ಲಿ ಆ ಪಾಸ್ಪೋರ್ಟ್ ಅವಧಿ ಕೊನೆಗೊಳ್ಳುತ್ತದೆ. 2019ರ ಮೇ 30ರಂದು ಪ್ರಧಾನಿ ಮೋದಿ ಎರಡನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕಾರ ಮಾಡಿದರು. ಆ ಮೂಲಕ 17ನೇ ಸಂಸತ್ ರಚನೆಯಾಯಿತು. ಈ ಸಂಸತ್ನ ಅವಧಿಯವರೆಗೂ ಪ್ರಜ್ವಲ್ ಡಿಪ್ಲೊಮ್ಯಾಟಿಕ್ ಪಾಸ್ಪೋರ್ಟ್ ಹೊಂದಬಹುದಾಗಿದೆ. ಸೋ ಇಲ್ಲೇ ಪ್ರಜ್ವಲ್ ಫ್ಲಾನ್ ಮಾಡಿದ್ದು, ವಿಡಿಯೋ ಮಾಡಿ ಕೆಲವರ ಬಳಿ ಆದರೂ ಸಿಂಪತಿ ಗಿಟ್ಟಿಸಿದ್ದು. ಈಗಲಾದರೂ ನಿಮಗೆ ಮೇ 31ರ ಮಹತ್ವ ತಿಳಿದಿರಬಹುದಲ್ಲವೇ?
ಯಸ್, ಯು ಆರ್ ರೈಟ್.. ಮೇ 31 ಕ್ಕೆ ಪ್ರಜ್ವಲ್ ರೇವಣ್ಣನವರ ಸಂಸತ್ ಸದಸ್ಯತ್ವ ಮುಕ್ತಾಯವಾಗುತ್ತದೆ. ಈ ಮೂಲಕ ಆಟೋಮ್ಯಾಟಿಕ್ ಆಗಿ ರಾಜತಾಂತ್ರಿಕ ಪಾಸ್ಪೋರ್ಟ್ ರದ್ಧಾಗುತ್ತದೆ. ಹೀಗಾಗಿ ನಿಯಮದಂತೆ ಪ್ರಜ್ವಲ್ ರೇವಣ್ಣ ರಾಜತಾಂತ್ರಿಕ ಪಾಸ್ಪೋರ್ಟ್ ಅವಧಿ ಮುಕ್ತಾಯಗೊಂಡು ದೇಶಕ್ಕೆ ವಾಪಸಾಗಲೇಬೇಕು. ಎಸ್ಐಟಿ ನೋಟಿಸ್ನಂತೆ ಖುದ್ದು ಹಾಜರಾಗದೆ ತುಂಬಾ ಸಮಯ ವಿದೇಶದಲ್ಲಿ ಇರಲು ಸಾಧ್ಯವಿಲ್ಲ. ಇಲ್ಲದೇ ಇದ್ದಲ್ಲಿ ಕಾನೂನು ರೀತಿ ಅವರನ್ನು ಈಗಿರುವ ಆ ದೇಶವೇ ವಾಪಸ್ ಕಳುಹಿಸಲಿದೆ. ಇದರಿಂದ ಈಗ ಹೋಗಿರುವ ಮಾನ-ಮರ್ಯಾದೆ ಜೊತೆ ಅಳಿದುಳಿದದ್ದೆಲ್ಲಾ ಹೋಗಿಬಿಡುತ್ತದೆ. ಹೀಗಾಗಿ ಎಲ್ಲಾ ರೀತಿಯಿಂದಲೂ ಭಯಗೊಂಡು ಯೋಚಿಸಿದ ಪ್ರಜ್ವಲ್ ಬೇರೆ ದಾರಿ ಇಲ್ಲದೆ ಶರಣಾಗುತ್ತಿದ್ದಾರೆ. ಮೇ 31ಕ್ಕೆ ಮುಹೂರ್ತ ಫಿಕ್ಸ್ ಮಾಡಿಕೊಂಡಿದ್ದಾರೆ.
ವಿಡಿಯೋದಲ್ಲಿ ಪ್ರಜ್ವಲ್ ಹೇಳಿದ್ದೇನು?!
ಎಲ್ಲರಿಗೂ ನಮಸ್ಕಾರ ಎಂದು ವಿಡಿಯೋ ಶುರುಮಾಡುವ ಪ್ರಜ್ವಲ್, ಮೊದಲನೆಯದಾಗಿ ನನ್ನ ತಂದೆ ತಾಯಿಗೆ, ನನ್ನ ನನ್ನ ತಾತ, ತನ್ನ ಕುಮಾರಣ್ಣ, ನನ್ನ ಕಾರ್ಯಕರ್ತರು, ನನ್ನ ನಾಡಿನ ಜನರಲ್ಲಿ ನಾನು ಕ್ಷಮೆ ಕೇಳುತ್ತೇನೆ. ಏಪ್ರಿಲ್ 26 ರಂದು ರಾಜ್ಯದಲ್ಲಿ ಮೊದಲ ಹಂತದ ಚುನಾವಣೆ ನಡೆದಾಗ ನನ್ನ ಮೇಲೆ ಯಾವುದೇ ಆರೋಪ ಇರಲಿಲ್ಲ. ಚುನಾವಣೆ ಮುಗಿದ ಬಳಿಕ ವಿದೇಶಕ್ಕೆ ಹೋಗುವ ಬಗ್ಗೆ ಮೊದಲೇ ಪ್ಲಾನ್ ಆಗಿತ್ತು. ವಿದೇಶಕ್ಕೆ ಹೋಗುವಾಗಲೂ ನನ್ನ ಮೇಲೆ ಯಾವುದೇ ಆರೋಪ ಇರಲಿಲ್ಲ. ಅಲ್ಲಿಗೆ ಹೋಗಿ ಒಂದೆರಡು ದಿನ ಆದ ಬಳಿಕ ಯೂಟ್ಯೂಬ್ ಹಾಗೂ ನ್ಯೂಸ್ ನೋಡಿ ನನ್ನ ಮೇಲೆ ಗಂಭೀರ ಆರೋಪ ಬಂದಿರುವುದು ಕಂಡುಕೊಂಡೆ. ಇದಾದ ನಂತರ ನನ್ನ ಹೆಸರನ್ನು ರಾಜಕೀಯವಾಗಿ ಬಳಸಿಕೊಂಡಿದ್ದಾರೆ. ಬಳಿಕ ಎಸ್‌ಐಟಿ ನೋಟಿಸ್ ನೀಡಿದ ವಿಚಾರ ಗೊತ್ತಾಯಿತು. ನಾನು ರಾಜಕೀಯವಾಗಿ ಬೆಳೆಯಬಾರದು ಎಂಬ ಕಾರಣಕ್ಕೆ ನನ್ನ ಮೇಲೆ ಪಿತೂರಿ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಅಲ್ಲದೆ ನಾನು ಫಾರಿನ್‌ನಲ್ಲಿ ಎಲ್ಲಿದ್ದೇನೆ ಎಂದು ಮಾಹಿತಿ ಕೊಡದಿರುವುದಕ್ಕೆ ಖಂಡಿತವಾಗಿಯೂ ಕ್ಷಮೆ ಕೇಳುತ್ತೇನೆ. ಎಸ್‌ಯಟಿ ನೋಟಿಸ್‌ಗೆ ಎಕ್ಸ್ ಖಾತೆ ಮತ್ತು ನಮ್ಮ ಲಾಯರ್ ಮೂಲಕ ವಿಚಾರಣೆಗೆ ಹಾಜರಾಜಲು 7 ದಿನಗಳ ಕಾಲಾವಕಾಶ ಕೇಳಿದ್ದೆನು. ಈ ಏಳು ದಿನ ಸಮಯಾವಕಾಶ ಕೇಳಿದ ನಂತರ ಕಾಂಗ್ರೆಸ್ ಹಿರಿಯ ನಾಯಕರಾದ ರಾಹುಲ್ ಗಾಂಧಿ ಸೇರಿದಂತೆ ಅನೇಕರು ನನ್ನ ಹೆಸರನ್ನು ದುರ್ಬಳಕೆ ಮಾಡಿಕೊಂಡು ಮಾತನಾಡುವುದನ್ನು ನಾನು ನೋಡಿದೆ. ಇದೆಲ್ಲವನ್ನು ನೋಡಿ ನಾನು ಡಿಪ್ರೆಶನ್‌ಗೆ ಒಳಗಾಗಿ, ಒಂದೆಡೆ ಐಸೋಲೇಷನ್‌ಗೆ ಒಳಗಾಗಿದ್ದೆನು. ಇದರಿಂದಾಗಿ ನಿಮ್ಮೆಲ್ಲರ ಮುಂದೆ ನಾನು ಕ್ಷಮೆ ಕೇಳುತ್ತೇನೆ ಎಂದಿದ್ದಾರೆ.
ಅಲ್ಲದೆ ನನಗೆ ನ್ಯಾಯಾಲಯದ ಮೇಲೆ ನಂಬಿಕೆಯಿದೆ. ಈ ಸುಳ್ಳು ಪ್ರಕರಣದಿಂದ ನಾನು ಹೊರ ಬರುತ್ತೇನೆ. ಬಂದ ಮೇಲೆ ಎಲ್ಲರಿಗೂ ಉತ್ತರ ನೀಡುತ್ತೇನೆ. ಈ ಘಟನೆಯಿಂದ ಯಾರೂ ಕೂಡ ಅನ್ಯಥಾ ಭಾವಿಸುವುದು ಬೇಡ. ನಾನೇ ಸ್ವತಃ ಶುಕ್ರವಾರ ಮೇ 31ರಂದು ಎಸ್‌ಯಟಿ ಮುಂದೆ ಬಂದು ಸಂಪೂರ್ಣವಾಗಿ ಪ್ರಕರಣದ ತನಿಖೆಯಲ್ಲಿ ಭಾಗಿಯಾಗುತ್ತೇನೆ. ನನಗೆ ನ್ಯಾಯಾಲಯದ ಮೇಲೆ ನಂಬಿಕೆಯಿದೆ. ನನ್ನ ಮೇಲೆ ದಾಖಲಾಗಿರುವಂತಹ ಸುಳ್ಳು ಪ್ರಕರಣಗಳಿಂದ ಮುಕ್ತವಾಗಿ ಹೊರಗೆ ಬರುವ ವಿಶ್ವಾಸವಿದೆ. ನನ್ನ ಮೇಲೆ ದೇವರು, ಜನರು ಹಾಗೂ ಕುಟುಂಬದ ಆಶೀರ್ವಾದ ಇರಲಿ ಎಂದು ಬೇಡಿಕೊಳ್ಳುತ್ತೇನೆ ಎಂದಿದ್ದಾರೆ.