Shocking News: ವಿಮಾನದೊಳಗೆ ಬೆತ್ತಲೆ ಓಡಿದ ಪ್ರಯಾಣಿಕ, ಗಗನಸಖಿಯನ್ನು ನೆಲಕ್ಕೆ ಕೆಡವಿದ; ಮುಂದೇನಾಯ್ತು?

Share the Article

Shocking News: ಪಶ್ಚಿಮ ಕರಾವಳಿಯ ಪರ್ತ್‌ನಿಂದ ಪೂರ್ವ ಕರಾವಳಿಯ ಮೆಲ್ಬೋರ್ನ್‌ಗೆ ಸಂಚರಿಸುತ್ತಿದ್ದ ಆಸ್ಟ್ರೇಲಿಯಾ ಮೂಲಕ ವರ್ಜಿನ್‌ ಆಸ್ಟ್ರೇಲಿಯಾ ವಿಮಾನದಲ್ಲಿ ಪ್ರಯಾಣಿಕರೊಬ್ಬರು ಬೆತ್ತಲೆಯಾಗಿ ಓಡಾಡಿರುವ ಘಟನೆಯೊಂದು ನಡೆದಿದೆ. ಈ ಕಾರಣದಿಂದ ವಿಮಾನ ಹಾರಾಟ 30 ನಿಮಿಷಗಳ ಕಾಲ ತಡವಾಗಿದೆ.

ಇದನ್ನೂ ಓದಿ: Udupi: ಝಾರಾ ಹೋಟೆಲ್ ಅಕ್ರಮ ಕಟ್ಟಡ ವಾರದೊಳಗೆ ತೆರವುಗೊಳಿಸುವಂತೆ ಯಶ್ ಪಾಲ್ ಸುವರ್ಣ ಆಗ್ರಹ

ನಗ್ನವಾಗಿ ವಿಮಾನದೊಳಗೆ ಓಡಿದ ಪ್ರಯಾಣಿಕ, ಗಗನಸಖಿಯನ್ನು ಕೆಳಗೆ ಇಳಿಸಿ ಲ್ಯಾಂಡಿಂಗ್‌ ಮಾಡಲು ಒತ್ತಾಯ ಮಾಡಿದ್ದರಿಂದ ಆತಂಕದ ವಾತಾವರಣ ಉಂಟು ಮಾಡಿತ್ತು. ನಂತರ ಪೊಲೀಸರು ಬೆತ್ತಲೆ ಓಡಿದ ವ್ಯಕ್ತಿಯನ್ನು ವಿಮಾನ ನಿಲ್ದಾಣದಲ್ಲಿ ಬಂಧನ ಮಾಡಿದ್ದಾರೆ.

ಇದನ್ನೂ ಓದಿ: Puttur: ಪುತ್ತೂರು; ಮಹಿಳೆ ನೇಣು ಬಿಗಿದು ಆತ್ಮಹತ್ಯೆ

ಪೊಲೀಸರ ಪ್ರಕಾರ, ವ್ಯಕ್ತಿ ತಾನು ವಿಮಾನದಲ್ಲಿ ಬೆತ್ತಲೆಯಾಗಿ ಓಡಿದ್ದು ಮಾತ್ರವಲ್ಲದೇ, ವಿಮಾನದ ಸಿಬ್ಬಂದಿಯನ್ನು ಕೂಡಾ ನೆಲಕ್ಕೆ ಕೆಡವಿದ್ದಾನೆ. ವಿಮಾನವನ್ನು ಮಧ್ಯದಲ್ಲಿಯೇ ಹಿಂತಿರುಗಿಸುವಂತೆ ಒತ್ತಾಯ ಮಾಡಿದ್ದನು ಎಂದು ಹೇಳಿದ್ದಾರೆ.

Leave A Reply