Panchayat Season 3 Released: ‘ಪಂಚಾಯತ್ ಸೀಸನ್ 3’ ಇಂದು ಬಿಡುಗಡೆ; ಯಾವಾಗ ಮತ್ತು ಎಲ್ಲಿ ವೀಕ್ಷಿಸಬಹುದು?
Panchayat Season 3 Released: ಅತಿ ಹೆಚ್ಚು ರೇಟ್ ಮಾಡಲಾದ ಮತ್ತು ಹೆಚ್ಚು ಸ್ಟ್ರೀಮ್ ಮಾಡಲಾದ ಭಾರತೀಯ ವೆಬ್ ಸರಣಿ ‘ಪಂಚಾಯತ್’ ನ ಬಹು ನಿರೀಕ್ಷಿತ ಮೂರನೇ ಸೀಸನ್ ಮಂಗಳವಾರ ಅಂದರೆ ಇಂದು Amazon Prime ವೀಡಿಯೊದಲ್ಲಿ ಪ್ರೀಮಿಯರ್ ಆಗುತ್ತಿದೆ. ಈ ಸರಣಿಯ ಎರಡೂ ಸೀಸನ್‌ಗಳು ಸೂಪರ್ ಹಿಟ್ ಆಗಿತ್ತು. ಇದೀಗ ಮೂರನೇ ಸೀಸನ್‌ನ ಫುಲ್ ಡೋಸ್ ಮನರಂಜನೆ ನೀಡಲು ಸಿದ್ಧವಾಗಿದೆ.
28 ಮೇ 2024 ರಂದು (ಇಂದು) ಜಿತೇಂದ್ರ ಕುಮಾರ್ ಅವರ ‘ಪಂಚಾಯತ್ 3’ ಇಂದು ಅಮೆಜಾನ್ ಪ್ರೈಮ್ ವೀಡಿಯೊದಲ್ಲಿ ಸ್ಟ್ರೀಮಿಂಗ್‌ಗೆ ಲಭ್ಯವಿರುತ್ತದೆ. ಇದು ವರ್ಷದ ಬಹು ನಿರೀಕ್ಷಿತ ವೆಬ್ ಸರಣಿಗಳಲ್ಲಿ ಒಂದಾಗಿದೆ. ಒಂದೇ ದಿನದಲ್ಲಿ ಎಲ್ಲಾ ಸಂಚಿಕೆಗಳನ್ನು ವೀಕ್ಷಿಸಲು ಸಾಧ್ಯವಾಗುತ್ತದೆ. ಮೂರನೇ ಸೀಸನ್ ಎಂಟು ಸಂಚಿಕೆಗಳನ್ನು ಒಳಗೊಂಡಿರುತ್ತದೆ.
‘ಪಂಚಾಯತ್ 3’ ಸರಣಿಯನ್ನು ಚಂದನ್ ಕುಮಾರ್ ಬರೆದಿದ್ದು, ದೀಪಕ್ ಕುಮಾರ್ ಮಿಶ್ರಾ ನಿರ್ದೇಶಿಸಿದ್ದಾರೆ. ಈ ಸರಣಿಯನ್ನು ದಿ ವೈರಲ್ ಫೀವರ್ ಮಾಡಿದೆ. ಜೀತೇಂದ್ರ ಕುಮಾರ್, ನೀನಾ ಗುಪ್ತಾ, ರಘುಬೀರ್ ಯಾದವ್, ಫೈಸಲ್ ಮಲಿಕ್, ಚಂದನ್ ರಾಯ್ ಮತ್ತು ಸಾನ್ವಿಕಾ ಮುಂತಾದ ಕಲಾವಿದರು ಸರಣಿಯಲ್ಲಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ನೀವು ಪ್ರೈಮ್ ಚಂದಾದಾರರಾಗಿದ್ದರೆ, ಪ್ರೈಮ್ ವೀಡಿಯೊದಲ್ಲಿ ‘ಪಂಚಾಯತ್ ಸೀಸನ್ 3’ ವೀಕ್ಷಿಸಬಹುದು.