Home News LPG connection: ಎಲ್ಪಿಜಿ ಸಿಲಿಂಡರ್ ಸಬ್ಸಿಡಿ 300 ರೂ ಸಿಗ್ಬೇಕಾ? ಹಾಗಿದ್ರೆ ಜೂನ್ 1 ರೊಳಗೆ...

LPG connection: ಎಲ್ಪಿಜಿ ಸಿಲಿಂಡರ್ ಸಬ್ಸಿಡಿ 300 ರೂ ಸಿಗ್ಬೇಕಾ? ಹಾಗಿದ್ರೆ ಜೂನ್ 1 ರೊಳಗೆ ಈ ಕೆಲಸ ಮಾಡಿ!

LPG Connection

Hindu neighbor gifts plot of land

Hindu neighbour gifts land to Muslim journalist

LPG Connection: ಪ್ರಸ್ತುತ, ಪ್ರಧಾನ ಮಂತ್ರಿ ಉಜ್ವಲ ಯೋಜನೆಯಡಿ ₹300 ಸಬ್ಸಿಡಿಯನ್ನ ಕೇಂದ್ರದಿಂದ ನೀಡಲಾಗುತ್ತಿದೆ. ಅದಕ್ಕಾಗಿ ಕೆವೈಸಿ ಮಾಡಿರಬೇಕು. ಹೌದು, ಇಂಡಿಯನ್, ಎಚ್‌ಪಿ, ಭಾರತ್ ಗ್ಯಾಸ್‌ನಂತಹ ಅನೇಕ ಇಂಧನ ಕಂಪನಿಗಳು ಈಗಾಗಲೇ ಗ್ರಾಹಕರಿಗೆ ಹಲವು ದಿನಗಳಿಂದ KYC ಪೂರ್ಣಗೊಳಿಸಲು ಸೂಚನೆ ನೀಡಲಾಗುತ್ತಿದೆ. ಅಲ್ಲದೇ ಇಕೆವೈಸಿ ಕಡ್ಡಾಯ ಎಂದು ಕೇಂದ್ರ ಸರ್ಕಾರ ಈಗಾಗಲೇ ಘೋಷಿಸಿದೆ.

ಇದನ್ನೂ ಓದಿ: New Rule: ಜು.1 ರಿಂದ ಹೊಸ ಅಪರಾಧ ಕಾನೂನುಗಳು ಜಾರಿ! ಕೇಂದ್ರದಿಂದ ಜಾರಿ!

ಮುಖ್ಯವಾಗಿ eKYC ಪ್ರಕ್ರಿಯೆಯನ್ನು ಸಾಧ್ಯವಾದಷ್ಟು ಬೇಗ ಪೂರ್ಣಗೊಳಿಸಬೇಕು ಕೇಂದ್ರ ಸರಕಾರ ಸದಾ ಹೇಳುತ್ತಲೇ ಬಂದಿದೆ. ಈ ಸಂಬಂಧ ಪೆಟ್ರೋಲಿಯಂ ಸಚಿವಾಲಯ ಈಗಾಗಲೇ ಅಧಿಸೂಚನೆ ಹೊರಡಿಸಿದೆ. ಆದರೆ ಯಾರಾದರೂ KYC ಮಾಡದಿದ್ದರೆ, ಚಿಂತಿಸಬೇಕಾಗಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಮೇ 31ರೊಳಗೆ ಕೆವೈಸಿ ಮಾಡದಿದ್ದರೆ ಸಬ್ಸಿಡಿ ಸಿಗುವುದಿಲ್ಲ ಎಂಬ ಸುದ್ದಿ ಹರಿದಾಡುತ್ತಿವೆ. ಆದರೆ ಇದೆಲ್ಲಾ ಸುಳ್ಳು ಸುದ್ದಿಯಾಗಿದೆ.

ಇದನ್ನೂ ಓದಿ: Bank Holiday : ಜೂನ್ ತಿಂಗಳಲ್ಲಿ ಬ್ಯಾಂಕ್‌ಗಳಿಗೆ 10 ದಿನ ರಜೆ !!

ಇ-ಕೆವೈಸಿ ಯಾರಾದರೂ ಮಾಡದಿದ್ದರೆ ಚಿಂತಿಸಬೇಕಾಗಿಲ್ಲ, ಭಯಪಡುವ ಅಗತ್ಯವಿಲ್ಲ. ವರದಿಗಳ ಪ್ರಕಾರ, ಬಯೋಮೆಟ್ರಿಕ್ ಪರಿಶೀಲನೆಗೆ ಒಳಗಾಗದವರಿಗೆ ಸಬ್ಸಿಡಿ ಈಗ ನಿಲ್ಲುವುದಿಲ್ಲ. ಏಕೆಂದರೆ ಕೆವೈಸಿ ಪೂರ್ಣಗೊಳಿಸಲು ಯಾವುದೆ ಗಡುವು ಇಲ್ಲ. ಸಿಲಿಂಡರ್ ಗ್ರಾಹಕರ ಮನೆಗಳಿಗೆ ತಲುಪಿಸುವಾಗ ಡೆಲಿವರಿ (LPG connection) ಸಿಬ್ಬಂದಿ EKYC ಆಧಾರ್ ಪರಿಶೀಲಿಸಿ, ಅವರೇ ಬಯೋಮೆಟ್ರಿಕ್ ತೆಗೆದುಕೊಳ್ಳುತ್ತಾರೆ.

ತೈಲ ಮಾರುಕಟ್ಟೆ ಕಂಪನಿಗಳ ಪ್ರಕಾರ, ಎಲ್‌ಪಿಜಿ ಸಂಪರ್ಕದೊಂದಿಗೆ ಆಧಾರ್ ಲಿಂಕ್ ಮಾಡಲು ಯಾವುದೇ ಶುಲ್ಕವಿಲ್ಲ. ಇದಲ್ಲದೆ, ಇಂಡೇನ್ ಆಯಿಲ್ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡುವ ಮೂಲಕ ಆಧಾರ್ ಅನ್ನು ಪರಿಶೀಲಿಸಿ EKYC ಅನ್ನು ಸುಲಭವಾಗಿ ಮಾಡಬಹುದು. ಇಂಡೇನ್ ಗ್ಯಾಸ್ ಹೊಂದಿರುವವರು ಈ ಸೌಲಭ್ಯವನ್ನು ಪಡೆಯಬಹುದು.

ಗ್ರಾಹಕರು ಆಯಾ ಗ್ಯಾಸ್ ಡೀಲರ್‌ ಹತ್ತಿರ ಹೋಗಬಹುದು ಮತ್ತು ಎಲ್‌ಪಿಜಿ ಸಿಲಿಂಡರ್‌ಗಾಗಿ ಇ-ಕೆವೈಸಿ ಪೂರ್ಣಗೊಳಿಸಬಹುದು. ಕೇಂದ್ರ ಸರ್ಕಾರ ಈಗಾಗಲೇ ಎಲ್ಲಾ ಗ್ಯಾಸ್ ಡೀಲರ್‌ಗಳಿಗೆ ಆದೇಶ ನೀಡಿದೆ.

ಅದಕ್ಕಾಗಿ ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ಗಳ ಇ-ಕೆವೈಸಿಗಾಗಿ, ಗ್ರಾಹಕರು ಫಾರ್ಮ್ ಅನ್ನು ಭರ್ತಿ ಮಾಡಬೇಕು. ಅಲ್ಲಿ ಹೆಸರು ಮತ್ತು ಗ್ರಾಹಕರ ಸಂಖ್ಯೆಯನ್ನು ನೀಡಬೇಕು. ಇದರೊಂದಿಗೆ ಗಂಡ ಅಥವಾ ತಂದೆಯ ಹೆಸರನ್ನೂ ನೀಡಬೇಕು. ವಿಳಾಸ ಪುರಾವೆಯನ್ನೂ ಒದಗಿಸಬೇಕು. ಆಧಾರ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್, ಲೀಸ್ ಅಗ್ರಿಮೆಂಟ್ ಅಥವಾ ವೋಟರ್ ಐಡಿ ಕಾರ್ಡ್, ಪಾಸ್‌ಪೋರ್ಟ್ ಅಥವಾ ರೇಷನ್ ಕಾರ್ಡ್ ಜೆರಾಕ್ಸ್‌ನಂತಹ ದಾಖಲೆಗಳೊಂದಿಗೆ ವಿಳಾಸದ ಪುರಾವೆಯಾಗಿ ಸಲ್ಲಿಸಬಹುದು.

ಇ-ಕೆವೈಸಿ ಮೂಲಕ ಎಲ್ಲಾ ಗ್ರಾಹಕರ ಮಾಹಿತಿಯು ಸರ್ಕಾರದ ಬಳಿ ಇರುತ್ತದೆ. KYC ಮೂಲಕ ಸಿಲಿಂಡರ್ ಸಂಪರ್ಕದೊಂದಿಗೆ ಆಧಾರ್ ವಿವರಗಳನ್ನು ಲಿಂಕ್ ಮಾಡಲಾಗುತ್ತದೆ. KYC ಮಾಡಲು ಯಾವುದೇ ಗಡುವು ಇಲ್ಲ ಆದರೆ KYC ಮಾಡುವುದು ಉತ್ತಮ. ಇಲ್ಲದಿದ್ದರೆ, ಒಂದು ವೇಳೆ ಕೇಂದ್ರ ನಿರ್ಧರಿಸಿದರೆ ಈ ಸಬ್ಸಿಡಿ ಬರದಂತಾಗಬಹುದು.