Beauty Tips: ಡಲ್ಸ್ಕಿನ್ ಇದ್ರೆ ಟೆನ್ಷನ್ ಬೇಡ! ಈ ಟಿಪ್ಸ್ ಫಾಲೋ ಮಾಡಿ ಮುಖ ಫಳ ಫಳ ಅಂತ ಹೊಳೆಯುತ್ತೆ!

Beauty Tips: ಎಲ್ಲದಕ್ಕೂ ಒಂದು ಪರಿಹಾರ ಇದ್ದೇ ಇದೆ. ಹಾಗಿರುವಾಗ ನಿಮ್ಮ ಡಲ್ಸ್ಕಿನ್ ಗೆ ಪರಿಹಾರ (Beauty Tips) ಇರದೇ ಇರಲು ಸಾಧ್ಯವಿಲ್ಲ. ಹೌದು,

ಇದನ್ನೂ ಓದಿ: Nithin Ghadkari: ನಿತಿನ್ ಗಡ್ಕರಿ ಸೋಲಿಸಲು ಬಿಜೆಪಿ ಹೈಕಮಾಂಡ್ ನಿಂದಲೇ ಸಂಚು ?!

ಮುಖದಲ್ಲಿನ ಸುಕ್ಕುಗಳು, ಗೆರೆಗಳು ಇದ್ದಲ್ಲಿ ನಿಮ್ಮ ಚರ್ಮ ಹೊಳಪನ್ನು ಕಳೆದುಕೊಳ್ಳುವಂತೆ ಮಾಡುತ್ತದೆ. ಜೊತೆಗೆ ಬಿಸಿಲಿನ ಧಗೆಯಿಂದ ಚರ್ಮ ಕಪ್ಪಾಗುವುದರೊಂದಿಗೆ (Skin Black) ಸನ್‌ಟ್ಯಾನ್‌ ಆಗುವುದು ಸಾಮಾನ್ಯವಾಗಿದೆ. ಹಾಗಾಗಿಯೇ ಬೇಸಿಗೆಯಲ್ಲಿ ಅನೇಕ ಜನರು ಮಂದ ಹಾಗೂ ಶುಷ್ಕ ತ್ವಚೆ (Dry Skin) ಸಮಸ್ಯೆಯನ್ನು ಅನುಭವಿಸುತ್ತಾರೆ ಇದಕ್ಕಾಗಿ ನೀರು ಅಥವಾ ದ್ರವಾಹಾರ ತೆಗೆದುಕೊಳ್ಳುವುದು ತ್ವಚೆಯ ಸಮಸ್ಯೆಗೆ ಪರಿಹಾರವಾಗಬಹುದು.

ಇದನ್ನೂ ಓದಿ: iPhone Offer: ಐ ಫೋನ್ ಪರ್ಚೇಸ್ ಮಾಡುವವರಿಗೆ ಗುಡ್ ನ್ಯೂಸ್! ಈ ಆಫರ್ ಬಿಟ್ರೆ, ನಿಮ್ಮಂತ ಮೂರ್ಖರು ಇನ್ನೊಬ್ಬರಿಲ್ಲ

ಪೌಷ್ಟಿಕತಜ್ಞರಾದ ಕಿರಣ್ ಕುಕ್ರೇಜಾ ಅವರು ಡಲ್‌ಸ್ಕಿನ್‌ಅನ್ನು ನಿವಾರಿಸಲು ತ್ವಚೆಯನ್ನು ಇನ್ನಷ್ಟು ಹೊಳಪಾಗಿಸಲು ಗುಲಾಬಿ ಪಾನೀಯ ಸಹಕಾರಿಯಾಗುತ್ತದೆ ಎಂಬುದನ್ನು ತಮ್ಮ ಇನ್‌ಸ್ಟಾಗ್ರಾಂ ವಿಡಿಯೋದಲ್ಲಿ ಹಂಚಿಕೊಂಡಿದ್ದಾರೆ. ಅದು ಬೇಸಿಗೆಯ ಹೊಳಪನ್ನು ಒಳಗಿನಿಂದ ಪಡೆಯಲು ಮತ್ತು ಉಲ್ಲಾಸವನ್ನು ಅನುಭವಿಸಲು ಸಹಾಯ ಮಾಡುತ್ತದೆ.’ ಇದಕ್ಕಿಂತ ಹೆಚ್ಚಾಗಿ, ಈ ಪಾನೀಯವು ರುಚಿಕರವಾಗಿದೆ ಮತ್ತು ಸರಳವಾಗಿ ತಯಾರಿಸಬಹುದು. ಅಲ್ಲದೇ ನಿಮ್ಮ ಅಡುಗೆ ಮನೆಯಲ್ಲಿರುವ ನೈಸರ್ಗಿಕ ಪದಾರ್ಥಗಳಿಂದಲೇ ಇದನ್ನು ತಯಾರಿಸಬಹುದು ಎಂಬುದಾಗಿ ಹೇಳಿದ್ದಾರೆ.

ನಿಮ್ಮ ತ್ವಚೆಯನ್ನು ಹೊಳೆಯುವಂತೆ ಮಾಡುವ ಈ ರಿಫ್ರೆಶ್‌ ಪಿಂಕ್‌ ಪಾನೀಯ ತಯಾರಿಸುವುದು ಸುಲಭವಾಗಿದೆ. ಈ ನೀರನ್ನು ತಯಾರಿಸಲು, ಒಂದು ಬೀಟ್‌ರೂಟ್‌ ಸಿಪ್ಪೆಯನ್ನು ತೆಗೆದು ಚಿಕ್ಕದಾಗಿ ಕಟ್‌ ಮಾಡಿಟ್ಟುಕೊಳ್ಳಿ. ಇದಕ್ಕೆ ಕೆಲವು ನಿಂಬೆಹಣ್ಣು, ಒಂದು ಸಿಹಿನಿಂಬೆ ರಸವನ್ನು, ಸಣ್ಣದಾಗಿ ಕತ್ತರಿಸಿದ ಸೌತೆಕಾಯಿ ಮತ್ತು ಕೆಲವು ಪುದೀನ ಎಲೆ ಇವೆಲ್ಲವನ್ನೂ ದೊಡ್ಡ ಜಾರ್ಗೆ ಸೇರಿಸಿ. ನಂತರ 1 ಲೀಟರ್ ನೀರನ್ನು ಹಾಕಿ ಜ್ಯೂಸ್‌ ತಯಾರಿಸಿ. ಚೆನ್ನಾಗಿ ಬೆರೆಸಿ ಮತ್ತು 2-3 ಗಂಟೆಗಳ ಕಾಲ ಹಾಗೆಯೇ ಬಿಡಿ. ಆ ನೀರು ಗುಲಾಬಿ ಬಣ್ಣವನ್ನು ಪಡೆಯುತ್ತದೆ. ನಂತರ ಈ ಅದ್ಭುತ ಪಾನೀಯವನ್ನು ದಿನಕ್ಕೆ 2-3 ಬಾರಿ ಕುಡಿಯಿರಿ.

Leave A Reply

Your email address will not be published.