Home Entertainment Pawan Kalyan: ಕಾಮವೇ ಪ್ರೇಮಕ್ಕೆ ದಾರಿ, ಕಾಮಕ್ಕೆ ಕಮಿಟ್‌ಮೆಂಟ್ ಕೊಡೋಕೆ ಆಗುತ್ತಾ?! ಖ್ಯಾತ ನಟ ಬಿಚ್ಚಿಟ್ಟ...

Pawan Kalyan: ಕಾಮವೇ ಪ್ರೇಮಕ್ಕೆ ದಾರಿ, ಕಾಮಕ್ಕೆ ಕಮಿಟ್‌ಮೆಂಟ್ ಕೊಡೋಕೆ ಆಗುತ್ತಾ?! ಖ್ಯಾತ ನಟ ಬಿಚ್ಚಿಟ್ಟ ರಹಸ್ಯ!

Pawan Kalyan

Hindu neighbor gifts plot of land

Hindu neighbour gifts land to Muslim journalist

Pawan Kalyan: ಒಬ್ಬರ ಬಳಿಕ ಇನ್ನೊಬ್ಬರು ಎಂಬಂತೆ ಬಟ್ಟೆ ಬದಲಿಸಿದಂತೆ ಹೆಂಡತಿಯರನ್ನು ಬದಲಾಯಿಸಿದ ಖ್ಯಾತ ನಟ, ಕಾಮವೇ ಪ್ರೇಮಕ್ಕೆ ದಾರಿ, ಕಾಮಕ್ಕೆ ಕಮಿಟ್‌ಮೆಂಟ್ ಕೊಡೋಕೆ ಆಗುತ್ತಾ? ಕಮಿಟ್‌ ಆಗದೇ ಇರೋದಕ್ಕೆ ಕಾಮದ ಹೆಸರಿನ ಪ್ರೇಮ ಸಹಜವಾಗಿಯೇ ಮುರಿದು ಬೀಳುತ್ತೆ’ ಎಂದು ರಹಸ್ಯ ಬಿಚ್ಚಿಟ್ಟಿದ್ದಾರೆ. ಹೌದು, ತೆಲುಗು ‘ಪವರ್ ಸ್ಟಾರ್’ ಖ್ಯಾತಿಯ ನಟ ಪವನ್ ಕಲ್ಯಾಣ್ (Pawan Kalyan) ಅವರು ಸಂದರ್ಶನ ಒಂದರಲ್ಲಿ ತಮ್ಮ ಜೀವನದ ರಹಸ್ಯ ಬಿಚ್ಚಿಟ್ಟಿದ್ದಾರೆ. ಏಕೆಂದರೆ, ಅವರು ಅದೆಷ್ಟು ಮದುವೆಯಾಗಿದ್ದಾರೆ ಎಂಬುದನ್ನು ಅವರೇ ಹೇಳಬೇಕು.

ಇದನ್ನೂ ಓದಿ: ನೀರಿನ ಟ್ಯಾಂಕ್​ ಕೊಳಕಾಗಿದ್ರೆ ಟೆನ್ಷನ್ ಬೇಡ! ಕ್ಲೀನ್ ಮಾಡಲು ಇಲ್ಲಿದೆ ಸುಲಭ ಉಪಾಯ!

ಈಗಾಗಲೇ ನಟ ಪವನ್ ಕಲ್ಯಾಣ್‌, ತಮ್ಮ ಸಿನಿಮಾಗಳ ಸಹನಟಿ ರೇಣು ದೇಸಾಯಿ (Renu Desai) ಅವರನ್ನು ಕೂಡ ಮದುವೆಯಾಗಿ ಡಿವೋರ್ಸ್ ಮಾಡಿದ್ದಾರೆ. ಹೌದು, ನಟ ಪವನ್ ಕಲ್ಯಾಣ್ ಹಾಗು ರೇಣು ದೇಸಾಯಿ ಬದ್ರಿ, ಜಾನಿ ಚಿತ್ರಗಳಲ್ಲಿ ಒಟ್ಟಾಗಿ ನಟಿಸಿದ್ದರು. ಶೂಟಿಂಗ್ ವೇಳೆ ಈ ಇಬ್ಬರಲ್ಲಿ ಸ್ನೇಹವಾಗಿದೆ. ಬಳಿಕ ಅದು ಪ್ರೇಮಕ್ಕೆ ತಿರುಗಿದೆ. ಪ್ರೇಮ ಮದುವೆಗೂ ದಾರಿ ಮಾಡಿಕೊಟ್ಟಿದೆ. 2009ರಲ್ಲಿನಟ ಪವನ್ ಕಲ್ಯಾಣ್ ಹಾಗೂ ನಟಿ ರೇಣು ದೇಸಾಯಿ ಸಪ್ತಪದಿ ತುಳಿದು ಮದುವೆಯಾಗಿದ್ದಾರೆ. ಆದರೆ, ಸಂಸಾರದಲ್ಲಿ ಮೂಡಿದ ಭಿನ್ನಾಭಿಪ್ರಾಯದಿಂದ 2012ರಲ್ಲಿ ಈ ಇಬ್ಬರೂ ಡಿವೋರ್ಸ್ ಪಡೆದು ಬೇರೆಯಾಗಿದ್ದಾರೆ.

ಸಂದರ್ಶನವೊಂದರಲ್ಲಿ ಮದುವೆ ಮತ್ತು ಪ್ರೀತಿಯ ಬಗ್ಗೆ ಕೇಳಿದಾಗ ನಟ ಪವನ್ ಕಲ್ಯಾಣ್ ವಿಚಿತ್ರ ಉತ್ತರ ನೀಡಿದ್ದಾರೆ. ‘ ಕಾಮವೇ ಪ್ರೇಮಕ್ಕೆ ದಾರಿ, ಕಾಮಕ್ಕೆ ಕಮಿಟ್‌ಮೆಂಟ್ ಕೊಡೋಕೆ ಆಗುತ್ತಾ? ಕಮಿಟ್‌ ಆಗದೇ ಇರೋದಕ್ಕೆ ಕಾಮದ ಹೆಸರಿನ ಪ್ರೇಮ ಸಹಜವಾಗಿಯೇ ಮುರಿದು ಬೀಳುತ್ತೆ’ ಎಂದಿದ್ದಾರೆ.

ಸದ್ಯ ಪವನ್ ಕಲ್ಯಾಣ್ ರಾಜಕೀಯ ಚದುರಂಗದಾಟದಲ್ಲಿ ಹೆಚ್ಚು ತೊಡಗಿಸಿಕೊಂಡಿದ್ದಾರೆ. ಆದರೆ ಈ ಸಿನಿರಂಗವನ್ನು ಸಂಪೂರ್ಣವಾಗಿ ತೊರೆದಿಲ್ಲ. ಒಟ್ಟಿನಲ್ಲಿ, ನಟ ಪವನ್ ಕಲ್ಯಾಣ್ ಲವ್ ಸ್ಟೋರಿ ಒಂದಕ್ಕಿಂತ ಮತ್ತೊಂದು ಭಿನ್ನವಾಗಿದೆ ಎನ್ನಬಹುದು.

ಇದನ್ನೂ ಓದಿ: ಸರ್ಕಾರದ ಸೌಲಭ್ಯವನ್ನು ಉಪಯೋಗಿಸಿಕೊಂಡು ಈ ರೈತ ಮಾಡಿದ್ದೇನು ಗೊತ್ತಾ? ಅನೇಕರಿಗೆ ಇವರು ಸ್ಪೂರ್ತಿ!