Mansoon Rain: ಮೇ 31ರಂದು ರಾಜ್ಯ ಪ್ರವೇಶಿಸಲಿದೆ ಮುಂಗಾರು – ಹವಾಮಾನ ಇಲಾಖೆ ಮಾಹಿತಿ !!

Mansoon Rain: ಹವಾಮಾನ ವೈಪರೀತ್ಯದಿಂದಾಗೀ ರಾಜ್ಯದ ಏಲ್ಲೆಡೆ ಭರ್ಜರಿ ಮಳೆಯಾಗುತ್ತಿದೆ. ಆದರೆ ಇನ್ನೂ ಕೂಡ ಅಧಿಕೃತವಾಗಿ ಮುಂಗಾರು ಮಳೆ ಶುರುವಾಗಿಲ್ಲ. ಆದರೀಗ ಹವಮಾನ ಇಲಾಖೆಯು ಮಹತ್ವದ ಮಾಹಿತಿ ಹಂಚಿಕೊಂಡಿದ್ದು ಮೇ 31ರಂದು ಮುಂಗಾರು(Mansoon Rain) ರಾಜ್ಯ ಪ್ರವೇಶಿಸಲಿದೆ ಎಂದು ಹೇಳಿದೆ.

ಇದನ್ನೂ ಓದಿ: ಮೋದಿ ತಂಗಿದ್ದ ಮೈಸೂರು ಹೋಟೆಲ್‌ ಬಿಲ್‌ 80 ಲಕ್ಷ ಬಾಕಿ

ಸದ್ಯ ರಾಜ್ಯದಲ್ಲೀಗ ಮುಂಗಾರು ಪೂರ್ವ ಮಳೆ ಅಬ್ಬರಿಸುತ್ತಿದೆ. ಆದರೆ ಮೇ 31ಕ್ಕೆ ಮುಂಗಾರು (Mansoon Rain) ರಾಜ್ಯವನ್ನು ಪ್ರವೇಶ ಮಾಡಲಿದ್ದು, ನೈರುತ್ಯ ಮುಂಗಾರು ಮಳೆ ಕೇರಳದ(Kerala) ಮೂಲಕ ರಾಜ್ಯ ಪ್ರವೇಶಿಸಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ಕೊಟ್ಟಿದೆ. ಅಲ್ಲದೆ ಈ ಸಲ ಉತ್ತಮ ಮುಂಗಾರು ಆಗುವ ನಿರೀಕ್ಷೆ ಇದೆ ಎಂದೂ ತಿಳಿಸಿದೆ.

ಅಲ್ಲದೆ ರಾಜ್ಯದಲ್ಲಿ ಇನ್ನೂ 4 ದಿನ ಮಳೆಯಾಗುವ ಸಾಧ್ಯತೆಯಿದ್ದು, ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಕೆಲವೆಡೆ ಸಾಧಾರಣ ಮಳೆಯಾದರೆ ಮತ್ತೆ ಕೆಲವೆಡೆ ಗುಡುಗು ಮಿಂಚು ಸಹಿತ ಭಾರೀ ಮಳೆ ಆಗುವ ಎಲ್ಲಾ ಲಕ್ಷಣಗಳಿವೆ, ಎಚ್ಚರ ವಹಿಸಿ ಎಂದು ಇಲಾಖೆ ತಿಳಿಸಿದೆ.

ಇದನ್ನೂ ಓದಿ: Belthangady: ಧರ್ಮಸ್ಥಳದಲ್ಲಿ ದೇವರ ದರ್ಶನ ಪಡೆದು ವಾಪಾಸ್‌ ಬಂದಾಗ ವ್ಯಕ್ತಿಯೊಬ್ಬರ ಬೈಕ್‌ ಕಳ್ಳತನ

Leave A Reply

Your email address will not be published.