Knowledge Story: ತಪ್ಪಿಯೂ ಬಲ ಕೈಗೆ ವಾಚ್ ಕಟ್ಟದಿರಿ! ಹಾಗಿದ್ರೆ ಎಡಗೈಗೆ ಏಕೆ ವಾಚ್ ಕಟ್ಟಬೇಕು ಅಂತಾ ನೀವು ತಿಳಿದುಕೊಳ್ಳಲೇ ಬೇಕು!
Knowledge Story: ಹೊರಗಡೆ ಹೋದ ಸಮಯದಲ್ಲಿ ದಿನ ನಿತ್ಯ ಟೈಮ್ ಎಷ್ಟು ಅಂತಾ ಪದೇ ಪದೇ ವಾಚ್ ಮೂಲಕ ಚೆಕ್ ಮಾಡಿಕೊಳ್ಳುತ್ತೀರಿ. ಅದರಲ್ಲೂ ಸಾಮಾನ್ಯವಾಗಿ ಟೈಮ್ ನೋಡುವ ವಾಚ್ ನ್ನು ಎಡ ಕೈಗೆ ಕಟ್ಟಿಕೊಳ್ಳುತ್ತೀರಿ. ಆದರೆ ವಾಚ್ ನ್ನು ಎಡ ಕೈಗೆ ಯಾಕೆ ಕಟ್ಟುತ್ತಾರೆ ಅನ್ನೋದು ನೀವು ತಿಳಿಯಬೇಕು. ಜೊತೆಗೆ ಬಲಗೈಗೆ ಯಾಕೆ ವಾಚ್ ಕಟ್ಟಲ್ಲ? ಈ ಬಗ್ಗೆ ಕೂಡ ಮಾಹಿತಿ (Knowledge Story) ನೀವು ಇಲ್ಲಿ ತಿಳಿಯಬಹುದು.
ಸಾಮಾನ್ಯವಾಗಿ ಎಡಗೈಗೆ ವಾಚ್ ಕಟ್ಟಿಕೊಳ್ಳಲು ಮೊದಲ ಕಾರಣವೆಂದರೆ, ಬಲಗೈ ಹೆಚ್ಚಾಗಿ ಕಾರ್ಯನಿರತವಾಗಿರುವುದರಿಂದ ಎಡಗೈಗೆ ವಾಚ್ ಕಟ್ಟಿಕೊಳ್ಳುತ್ತಾರೆ. ಅಲ್ಲದೇ ಎಡಗೈಯಲ್ಲಿ ಸಮಯ ನೋಡಲು ಯಾವುದೇ ತೊಂದರೆ ಆಗುವುದಿಲ್ಲ. ಎಡಗೈಗೆ ವಾಚ್ ಧರಿಸುವುದರಿಂದ, ಅದು ಸುರಕ್ಷಿತವಾಗಿರುತ್ತದೆ ಮತ್ತು ಬೀಳುವ ಅಪಾಯ ಕೂಡ ಕಡಿಮೆ.
ಇದನ್ನೂ ಓದಿ: Mansoon Rain: ಮೇ 31ರಂದು ರಾಜ್ಯ ಪ್ರವೇಶಿಸಲಿದೆ ಮುಂಗಾರು – ಹವಾಮಾನ ಇಲಾಖೆ ಮಾಹಿತಿ !!
ಹೆಚ್ಚಿನ ಕಂಪನಿಗಳು ಎಡಗೈಯನ್ನು ಗಮನದಲ್ಲಿಟ್ಟುಕೊಂಡು ವಾಚ್ಗಳನ್ನು ತಯಾರಿಸಲು ಇದೇ ಕಾರಣ. ಇದಲ್ಲದೇ ವೈಜ್ಞಾನಿಕವಾಗಿ ನಾವು ಎಲ್ಲ ಕೆಲಸವನ್ನು ಮಾಡಲು ಬಲಗೈ ಬಳಸುತ್ತೇವೆ. ಆದ್ದರಿಂದ ಬಲಗೈಗೆ ವಾಚ್ ಕಟ್ಟಿಕೊಂಡರೆ ಎಡಗೈಯಿಂದ ಟೈಂ ಸೆಟ್ ಮಾಡಲು ಕಷ್ಟವಾಗುತ್ತದೆ. ಆದರೆ ವಾಚ್ ಎಡಗೈಯಲ್ಲಿದ್ದರೆ ಬಲಗೈಯಿಂದ ಆರಾಮದಾಯವಾಗಿ ಟೈಂ ಸೆಟ್ ಮಾಡಬಹುದು.
ಅದೇ ರೀತಿ ನೇರವಾದ ಗೋಡೆ ಗಡಿಯಾರ, ಕೈಗಡಿಯಾರ ಹಾಗೂ ಟೇಬಲ್ ಗಡಿಯಾರ 12 ಗಂಟೆಯ ನಂತರ ಬಲಗಡೆ ಚಲಿಸುವುದನ್ನು ನಾವು ನೋಡಿರುತ್ತೇವೆ. ಆದರೆ ವಾಚ್ ಅನ್ನು ಎಡಗೈಗೆ ಕಟ್ಟಿದಾಗ ಸ್ವಲ್ಪ ವಿಭಿನ್ನವಾಗಿ ಕಾಣಿಸುತ್ತದೆ. ತಕ್ಷಣಕ್ಕೆ ಸಮಯ ಅರ್ಥವಾಗುವುದಿಲ್ಲ.
ಇದನ್ನೂ ಓದಿ: Belthangady: ಧರ್ಮಸ್ಥಳದಲ್ಲಿ ದೇವರ ದರ್ಶನ ಪಡೆದು ವಾಪಾಸ್ ಬಂದಾಗ ವ್ಯಕ್ತಿಯೊಬ್ಬರ ಬೈಕ್ ಕಳ್ಳತನ