Bengaluru: ಬನಶಂಕರಿ ದೇವಿ ಹುಂಡಿಯಲ್ಲಿ ಹುಡುಗಿಯರ ವಿಚಿತ್ರ ಬೇಡಿಕೆಯ ಪತ್ರಗಳು ಪತ್ತೆ – ಕೇಳಿದ್ರೆ ನೀವೂ ಶಾಕ್ ಆಗ್ತೀರಾ !!
Bengaluru: ದೇವರ ಹುಂಡಿಯಲ್ಲಿ ಇಂದು ಎಷ್ಟು ದುಡ್ಡು ಸಂಗ್ರಹವಾಗಿದೆ ಎನ್ನುವುದಕ್ಕಿಂತ ಹೆಚ್ಚಾಗಿ ವಿಚಿತ್ರ ಬೇಡಿಕೆಯ ಪತ್ರಗಳೇ ಹೆಚ್ಚು ಗಮನ ಸೆಳೆಯುತ್ತಿವೆ. ತಮ್ಮ ತಮ್ಮ ಇಷ್ಟಾರ್ಥ ಈಡೇರಿಕೆಗಾಗಿ ದೇವರಿಗೆ ಪತ್ರ ಬರೆದು ಹಲವರು ಹುಂಡಿಗೆ ಹಾಕುತ್ತಿದ್ದಾರೆ. ಇದನ್ನು ಇಂದು ಟ್ರೆಂಡ್ ಆಗಿ ರೂಡಿಸಿಕೊಂಡಿದ್ದಾರೆ. ಅಂತೆಯೇ ಇದೀಗ ಬೆಂಗಳೂರಿನ(Bengaluru) ಬನಶಂಕರಿ ದೇವಸ್ಥಾನ(Banashanakri Devastana) ಹುಂಡಿ ಎಣಿಕೆ ಸಂದರ್ಭದಲ್ಲಿ ಮಹಿಳೆಯರ ಬೇಡಿಕೆ ಪತ್ರಗಳು ಸಿಕ್ಕಿವೆ. ಈ ಪತ್ರಗಳು ಸೋಷಿಯಲ್ ಮೀಡಿಯಾಗಳಲ್ಲಿ ಭಾರೀ ವೈರಲ್ ಆಗಿವೆ.
ಇದನ್ನೂ ಓದಿ: Amith Shah: ಏಕರೂಪ ನಾಗರಿಕ ಸಂಹಿತೆ, ಒಂದು ದೇಶ ಒಂದು ಚುನಾವಣೆ ಜಾರಿ ಕುರಿತು ಬಿಗ್ ಅಪ್ಡೇಟ್ ಕೊಟ್ಟ ಅಮಿತ್ ಶಾ !!
ಹೌದು, ದೇವಾಲಯಗಳ ಹುಂಡಿಯಲ್ಲಿ ಹಣ, ಬೆಳ್ಳಿ, ಬಂಗಾರದ ಜೊತೆಗೆ ಇಂದು ಪತ್ರಗಳು ಸಿಗುವುದೂ ಹಾಮಾನ್ಯವಾಗಿದೆ. ಅದರಲ್ಲೂ ಅದರೊಳಗಿನ ಬರವಣಿಗೆಗಳೂ ಇನ್ನೂ ಅಚ್ಚರಿ ಮೂಡಿಸುತ್ತವೆ. ಸದ್ಯ ರಾಜಧಾನಿ ಬೆಂಗಳೂರಿನ ಪ್ರಸಿದ್ಧ ಬನಶಂಕರಿ ದೇವಸ್ಥಾನದ ಹುಂಡಿಯಲ್ಲಿ ಹಣ, ಬಂಗಾರದ ಜತೆಗೆ ಈ ಬಾರಿ ವಿಚಿತ್ರ ಬೇಡಿಕೆಗಳ ಪತ್ರಗಳೂ ಸಿಕ್ಕಿರುವುದು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಅದೂ ಕೂಡ ಹೆಚ್ಚು ಹುಡುಗಿಯರೇ ಬರೆದ ಪತ್ರಗಳೆಂಬುದು ಅಚ್ಚರಿ.
ಅಂದಹಾಗೆ ಕೆಲವರು ನೋಟ್ ಪುಸ್ತಕದ(Note Book) ಹಾಳೆಯಲ್ಲಿ ಒಂದೆರಡು ಸಾಲು ಪತ್ರ ಬರೆದರೆ, ಇನ್ನು ಕೆಲವರು ಪುಟಗಟ್ಟಲೆ ಪತ್ರ ಬರೆದಿದ್ದಾರೆ. ಮತ್ತೆ ಕೆಲವರು ಬಸ್ ಟಿಕೆಟ್‌ನಲ್ಲೇ ಒಂದೆರಡು ಸಾಲು ಬರೆದು ಬೇಡಿಕೆಗಳನ್ನು ಈಡೇರಿಸುವಂತೆ ಹುಂಡಿಗೆ ಹಾಕಿದ್ದಾರೆ. ಹಾಗಿದ್ರೆ ಪತ್ರದಲ್ಲಿ ಏನೇನಿದೆ ನೋಡೋಣ ಬನ್ನಿ.
ಲವರ್ ದೂರಾಗಲಿ:
‘ನನ್ನ ಲವರ್ ನನ್ನಿಂದ ದೂರ ಆಗಲಿ, ಯಾವ ಹೀರೋಗೂ ಕಡಿಮೆಯಿಲ್ಲದ ಐಎಎಸ್ ಹುಡುಗನನ್ನೇ ನನ್ನ ಗಂಡನನ್ನಾಗಿ ಸಿಗಲಿ ‘ ಎಂದು ಬರೆದಿರುವ ಪತ್ರವು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ತವರು ಮನೆ ಆಸ್ತಿ ಬರುವಂತಾಗಲಿ:
ಮಹಿಳೆಯೊಬ್ಬರು ” ನನ್ನ ತಾಯಿ ಮನೆಯಿಂದ ನನಗೆ ಬರಬೇಕಾಗಿರುವ ಆಸ್ತಿ ಯಾವುದೇ ಅಡ್ಡಿಯಿಲ್ಲದೇ ನನ್ನ ಕೈಸೇರಬೇಕು. ಯಾವುದೇ ಅಡ್ಡಿ ಇಲ್ಲದೇ ನನಗೆ ಸಿಗೋತರಹ ಮಾಡು ತಾಯಿ ” ಪತ್ರ ಬರೆದಿದ್ದಾರೆ.
ಮಗನ ನಿಶ್ಚಿತಾರ್ಥ ಮುರಿದು ಹೋಗದಂತೆ ಮಾಡಮ್ಮ:
” ಅಮ್ಮ-ತಾಯಿ ನಿನ್ನಲ್ಲಿ ನನ್ನದು ಒಂದು ಕೋರಿಕೆ ನನ್ನ ಮಗನಿಗೆ ಮತ್ತೆ ಮದುವೆ ಫಿಕ್ಸ್ ಆಗಿದೆ, ನಿಶ್ಚಿತಾರ್ಥ ಆಗಿದೆ. ಆ ಹುಡುಗಿ ನನ್ನ ಮಗನ ಜೊತೆ ಚೆನ್ನಾಗಿರುವಂತೆ ಮಾಡು. ನನ್ನ ಜೊತೆ, ನಮ್ಮ ಮನೆಯವರ ಜೊತೆ ಸಂತೋಷದಿಂದ ಇರುವಂತೆ ಮಾಡು ಯಾವುದೇ ಬೇಜಾರು ಇಲ್ಲದೇ ಸಂಸಾರ ನಡೆಸಿಕೊಂಡು ಹೋಗುವಂತೆ ಮಾಡು ತಾಯಿ ” ಎಂಬ ಪತ್ರವು ಹುಂಡಿಯಲ್ಲಿ ಸಿಕ್ಕಿದೆ.
ಸಂಸಾರ ದೂರ ಆಗುವಂತೆ ಮಾಡು:
ಅಮ್ಮ ತಾಯಿ ರಮ್ಯ ಮತ್ತು ಉಮೇಶ್ ಇಬ್ಬರು ದೂರು ಆಗುವಂತೆ ಮಾಡು. ಇವರಿಂದ ಒಂದು ಸಂಸಾರ ದೂರ ಆಗಿದೆ. ಅವರ ತಪ್ಪಿಗೆ ಶಿಕ್ಷೆ ಕೊಡು ತಾಯಿ ಎಂಬುದು ಭಕ್ತರೊಬ್ಬರ ಕೋರಿದ್ದಾರೆ. ಇನ್ನು ಹುಂಡಿ ಎಣಿಕೆ ವೇಳೆ ಸಿಕ್ಕಿರುವ ಈ ಪತ್ರಗಳನ್ನು ನೋಡಿ ದೇವಾಲಯದ ಆಡಳಿತ ಮಂಡಳಿ ಸದಸ್ಯರು ಕೂಡ ಆಶ್ಚರ್ಯ ಚಕಿತರಾಗಿದ್ದಾರೆ.
ಪೂರ್ತಿ ಪತ್ರದಲ್ಲಿ ಏನಿದ?:
‘ಅಮ್ಮ ನಾನು ತಪ್ಪು ಮಾಡಿದ್ದೇನೆ, ಕ್ಷಮಿಸಿ, ಹಿಂದೆ ಪತ್ರ ಬರೆದಾಗ ನಾನು ಗೋಪಿನಾಥ್ ಬಿಟ್ಟರೆ ಯಾರನ್ನೂ ಮದುವೆ ಆಗದಂತೆ ಬಯಸಿದ್ದೆ. ಈಗ ಅವನು ನನಗೆ ಬೇಡ. ಆದಷ್ಟು ಬೇಗ ನನ್ನ ಮದುವೆಯನ್ನು ಒಳ್ಳೆಯ ಹೆಸರು, ಕೀರ್ತಿ, ಹೃದಯವಂತ, ಗುಣವಂತ, ಸಿರಿವಂತ, ಐಶ್ವರ್ಯವಂತ ಯಾವ ಹೀರೋಗೂ ಕಡಿಮೆ ಇರಬಾರದು. ಅಷ್ಟು ಚೆನ್ನಾಗಿರುವ ಒಳ್ಳೆಯ ಐಎಎಸ್ ಅಧಿಕಾರಿ ಜತೆ ಮದುವೆ ಮಾಡಿಸು. ನನ್ನ ಗಂಡ ಬೇರೆ ಯಾವ ಹೆಂಗಸರನ್ನು, ಹುಡುಗಿಯರನ್ನು ಕೆಟ್ಟ ದೃಷ್ಟಿಯಿಂದ ನೋಡಬಾರದು, ನನ್ನನ್ನ ಹೆಚ್ಚಾಗಿ ಪ್ರೀತಿ ಮಾಡಬೇಕು. ನಾನಂದ್ರೆ ಅವರಿಗೆ ಜೀವ ಆಗಿರಬೇಕು. ನನಗೆ ಮಕ್ಕಳು, ಮೊಮ್ಮಕ್ಕಳ ಜೊತೆ ಜೀವನ ಮಾಡಬೇಕು ಇಷ್ಟು ವರ್ಷ ಕಾದಿದ್ದಕ್ಕೆ ಒಳ್ಳೆ ಹುಡುಗ ಸಿಕ್ಕಿದ ಅಂತ ಆಡಿಕೊಳ್ಳೋರ ಬಾಯಿ ಮುಚ್ಚಿಸಬೇಕು ಅಂತಾ ಹುಡುಗ ಕೊಡು ” ಎಂದು ಯುವತಿಯೊಬ್ಬಳು ಕಳೆದ ವರ್ಷ (2023) ಡಿಸೆಂಬರ್‌ನಲ್ಲಿ ಪತ್ರ ಬರೆದಿದ್ದಾರೆ.