Pension Scheme: ತಿಂಗಳಿಗೆ 1 ಲಕ್ಷ ರೂಪಾಯಿ ಪಿಂಚಣಿ ಪಡೆಯಿರಿ! ಇಲ್ಲಿದೆ ಸಂಪೂರ್ಣ ವಿವರ!
Pension Scheme: ವೃದ್ಧಾಪ್ಯ ಜೀವನದಲ್ಲಿ ಯಾವುದೇ ಹಣಕಾಸು ತೊಂದರೆ ಉಂಟಾಗದಿರಲು ಈಗಲೇ ಉಳಿತಾಯ ಮಾಡುವುದು ಉತ್ತಮ. ಅದಕ್ಕಾಗಿ 2004 ರಲ್ಲಿ ಸರ್ಕಾರಿ ಉದ್ಯೋಗಿಗಳಿಗಾಗಿ (Govt Employees) ರಾಷ್ಟ್ರೀಯ ಪಿಂಚಣಿ ಯೋಜನೆ (NPS) ಯೋಜನೆಯನ್ನು ಪ್ರಾರಂಭಿಸಲಾಗಿದ್ದು, ನಂತರ 2009 ರಲ್ಲಿ ಎಲ್ಲ ಭಾರತೀಯ ಜನತೆ ಈ ಯೋಜನೆಯ ಪ್ರಯೋಜನ ಪಡೆಯಬಹುದೆಂದೂ ಸರ್ಕಾರವು ಘೋಷಿಸಿತು.
ಇದನ್ನೂ ಓದಿ: Deepika Padukone: ದೀಪಿಕಾ ಪಡುಕೋಣೆ ಗರ್ಭಿಣಿ ಆಗಿರುವಾಗ ಹೇಗೆ ಕಾಣ್ತಾರೆ, ಮೊದಲ ಬಾರಿ ಸಾರ್ವಜನಿಕವಾಗಿ ಬಂದ ನಟಿ
ರಾಷ್ಟ್ರೀಯ ಪಿಂಚಣಿ ಯೋಜನೆಯಲ್ಲಿ (Pension Scheme) ಎರಡು ಪ್ರಾಥಮಿಕ NPS ಖಾತೆಗಳಿವೆ. ಅವುಗಳೆಂದರೆ ಟೈಯರ್ 1 ಮತ್ತು ಟೈಯರ್ 2. ಟೈಯರ್ 1 ಇದು ಕಟ್ಟುನಿಟ್ಟಾದ ಪಿಂಚಣಿ ಖಾತೆಯಾಗಿದ್ದರೆ, ಟೈಯರ್ 2 ಭಾರತೀಯ ಪಿಂಚಣಿ ನಿಯಂತ್ರಣ ಪ್ರಾಧಿಕಾರ (PFRDA) ನೊಂದಿಗೆ ಸಂಯೋಜಿತವಾಗಿರುವ ಸ್ವಯಂಪ್ರೇರಿತ ಉಳಿತಾಯ ಖಾತೆಯಾಗಿದೆ.
ಇದನ್ನೂ ಓದಿ: Rohit Sharma: IPL ಪ್ರಸಾರಕರ ಮೇಲೆ ಕಿಡಿ ಕಾರಿದ ರೋಹಿತ್ ಶರ್ಮಾ : ವ್ಯಯಕ್ತಿಕ ಸಂಭಾಷಣೆ ಪ್ರಸಾರ ಮಾಡಿದ್ದೆ ಇದಕ್ಕೆ ಕಾರಣ!
ಹಾಗಿದ್ರೆ NPS ಯೋಜನೆಯಿಂದ ಮಾಸಿಕವಾಗಿ ರೂ.1 ಲಕ್ಷ ಪಿಂಚಣಿ ಪಡೆಯುವ ವಿಧಾನ ಇಲ್ಲಿ ತಿಳಿಯೋಣ. ಪ್ರತಿಯೊಬ್ಬರು NPS ಯೋಜನೆಯನ್ನು ಬಳಸಿಕೊಂಡು ಗಣನೀಯ ಮಾಸಿಕ ಪಿಂಚಣಿಯನ್ನು ಹೇಗೆ ಪಡೆದುಕೊಳ್ಳಬಹುದು ಎಂಬುದನ್ನು ವಿವರಿಸಲು ಟಾಟಾ ಪಿಂಚಣಿ ನಿರ್ವಹಣೆಯ CEO ಕುರಿಯನ್ ಜೋಸ್ ಅವರು ಒಂದು ಉದಾಹರಣೆಯ ಮೂಲಕ ಮಾಹಿತಿಯನ್ನು ಸುದ್ದಿ ಮಾಧ್ಯಮದ ಸಂದರ್ಶನದಲ್ಲಿ ಒದಗಿಸಿದ್ದಾರೆ.
ಅದಕ್ಕಾಗಿ ಈಕ್ವಿಟಿಗಳಲ್ಲಿ 50% ಮತ್ತು ಸರ್ಕಾರಿ ಮತ್ತು ಕಾರ್ಪೊರೇಟ್ ಬಾಂಡ್‌ಗಳಲ್ಲಿ 50% ರಷ್ಟು ಸಮತೋಲಿತ ಹಂಚಿಕೆಯೊಂದಿಗೆ ತಿಂಗಳಿಗೆ ರೂ. 5,000 ಹೂಡಿಕೆಯನ್ನು ಮಾಡಲು 30 ವರ್ಷ ವಯಸ್ಸು ಇರುವವರನ್ನು ಉದಾಹರಣೆಯಾಗಿ ತೆಗೆದುಕೊಂಡಾಗ, ಈ ಕೊಡುಗೆಗಳಲ್ಲಿ 6% ವಾರ್ಷಿಕ ಹೆಚ್ಚಳ ಮತ್ತು ಹೂಡಿಕೆಯ ಮೇಲಿನ 10% ಲಾಭವನ್ನು ಊಹಿಸಿದರೆ, ಹೂಡಿಕೆದಾರರಿಗೆ 60 ವರ್ಷ ತುಂಬುವ ವೇಳೆಗೆ ನಿವೃತ್ತಿ ಕಾರ್ಪಸ್ ಅಂದಾಜು ರೂ.1.85 ಕೋಟಿಗೆ ಬೆಳೆಯುತ್ತದೆ. ಚಂದಾದಾರರ ಮರಣದ ಸಂದರ್ಭದಲ್ಲಿ, ಪಿಂಚಣಿಯು ಪ್ರಮುಖ ಕಾರ್ಪಸ್ ನಾಮಿನಿಗೆ ಲಭ್ಯವಿರುತ್ತದೆ ಅಂದರೆ ಅವರ ಸಂಗಾತಿಗೆ ದೊರಕುತ್ತದೆ.
ಇನ್ನು ಮಾಸಿಕ ರೂ. 50,000 ಪಿಂಚಣಿ ಪಡೆಯಲು ಬಯಸುವವರಿಗೆ, 30 ವರ್ಷದಿಂದ ತಿಂಗಳಿಗೆ ರೂ.2,500 ಹೂಡಿಕೆ ಮಾಡುವುದರಿಂದ, ಕಾರ್ಪಸ್ ಸುಮಾರು ರೂ. 92.5 ಲಕ್ಷ ಆಗುತ್ತದೆ. ನಂತರ ಇದು ಮಾಸಿಕ ಪಿಂಚಣಿ ರೂ. 50,000 ಅನ್ನು ಪಿಂಚಣಿ ಯೋಜನೆದಾರರಿಗೆ ನೀಡುತ್ತದೆ. ಉದಾಹರಣೆಗೆ, 40 ವರ್ಷ ವಯಸ್ಸಿನವರು ತಿಂಗಳಿಗೆ ರೂ. 5,000 ದಿಂದ ಪ್ರಾರಂಭಿಸಿ ಮತ್ತು ವಾರ್ಷಿಕ ಕೊಡುಗೆಯನ್ನು 20% ಹೆಚ್ಚಿಸುವುದರಿಂದ ಸುಮಾರು ರೂ 2 ಕೋಟಿಗಳಷ್ಟು ಕಾರ್ಪಸ್ ಅನ್ನು ಪಡೆಯಬಹುದು. ವರ್ಷಕ್ಕೆ 5% ರಷ್ಟು ಬಡ್ಡಿ ದರದೊಂದಿಗೆ ರೂ.1,13,730 ರ ಮಾಸಿಕ ಪಿಂಚಣಿಯನ್ನು ಪಡೆಯಬಹುದು.