Prajwal Revanna Case: ಪೆನ್‌ಡ್ರೈವ್ ಮಾಡಿಸಿದ್ದೇ ಡಿಕೆಶಿ ಅನ್ನೋ ಆರೋಪಕ್ಕೆ ಸಿಕ್ತು ಸಾಕ್ಷಿ – ಹೊಸ ಆಡಿಯೋ ಲೀಕ್ !!

Share the Article

Prajwal Revanna Case: ಕೆಲ ದಿನಗಳ ಹಿಂದಷ್ಟೇ ವಕೀಲ ದೇವರಾಜಗೌಡ ನನಗೆ 100ಕೋಟಿಯ ಆಫರ್ ನೀಡಿ ಪೆನ್ ಡ್ರೈವ್ ತರಿಸಿಕೊಂಡು ಎಲ್ಲಾ ರೆಡಿ ಮಾಡಿಸಿದ್ದೇ ಡಿ.ಕೆ ಶಿವಕುಮಾರ್(DK Shivkumar) ಎಂದು ಗಂಭೀರ ಆರೋಪ ಮಾಡಿದ್ದರು. ಇದನ್ನು ಕಾಂಗ್ರೆಸ್(Congress) ನಾಯಕರು ಅಲ್ಲಗಳೆದು ದೇವರಾಜೇಗೌಡ(Devarajegouda) ನ ವಿರುದ್ಧ ಕಿಡಿಕಾರಿದ್ದರು. ಆದರೀಗ ಅಚ್ಚರಿ ಎಂಬಂತೆ ಈ ಆರೋಪಕ್ಕೆ ಸಾಕ್ಷಿ ಸಿಕ್ಕಿದ್ದು ಆಡಿಯೋ ವೈರಲ್ ಆಗಿದೆ.

ಇದನ್ನೂ ಓದಿ: Belthangady: ಠಾಣೆಗೆ ನುಗ್ಗಿ ಪೋಲೀಸ್ ಅಧಿಕಾರಿಗಳಿಗೆ ಧಮ್ಕಿ ಹಾಕಿದ ಶಾಸಕ ಹರೀಶ್ ಪೂಂಜ – ಕಾಂಗ್ರೆಸ್ ಹೇಳಿದ್ದೇನು ?!

ಹೌದು, ದಿನಕ್ಕೊಂದು ತಿರುವು ಪಡೆಯುತ್ತಿರುವ ಪ್ರಜ್ವಲ್ ರೇವಣ್ಣ(Prajwal revanna Case) ಪ್ರಕರಣಕ್ಕೆ ಇಂದೂ ಹೊಸ ಟ್ವಿಸ್ಟ್ ಸಿಕ್ಕಿದೆ. ಮೊನ್ನೆ ಮೊನ್ನೆ ತಾನೆ ಡಿಕೆಶಿ ಮೇಲೆ ದೇವರಾಜಗೌಡ ಮಾಡಿದ ಆರೋಪಕ್ಕೆ ಸಾಕ್ಷಿ ದೊರೆತಿದ್ದು, ಇದಕ್ಕೆ ಸಂಬಂಧಿಸಿದ ವಕೀಲ ದೇವರಾಜೇಗೌಡ ಮತ್ತು ಶಿವರಾಮೇಗೌಡ(Shivaramegouda) ಮಾತಾಡಿದ್ದಾರೆ ಎನ್ನಲಾದ ಮತ್ತೊಂದು ಆಡಿಯೋ ರಿಲೀಸ್ ಆಗಿದೆ.

ಆಡಿಯೋದಲ್ಲೇನಿದೆ..?: 

ದೇವರಾಜೇಗೌಡರ ಜೊತೆ ಮಾತನಾಡಿರುವ ಶಿವರಾಮೇಗೌಡ, ಕುಮಾರಸ್ವಾಮಿನೇ ಬಿಟ್ಟಿದ್ದಾನೆ ಅಂತಾನೇ ಹೇಳಿ. ಕುಮಾರಸ್ವಾಮಿಗೆ ಅವರ ಮಗ ಮುಂದಕ್ಕೆ ಬರಬೇಕೆಂಬ ಆಸೆ ಇದೆ, ಇವನು ಮುಂದಕ್ಕೆ ಬಂದುಬಟ್ಟನ್ನಲ್ಲ ಅಂತಾ, ಅದಕ್ಕೆ ಮಾಡಿದ್ದಾನೆ ಅಂತಾ ಹೇಳಿ. ದೇವೇಗೌಡ ಹಾಗೂ ದೇವೇಗೌಡ ಮಕ್ಕಳು ಏನು ಕಡಿಮೆ ಅಂದುಕೊಳ್ಳಬೇಡಿ. ಇನ್ನು ದೇವೇಗೌಡ ಆತ್ಮಹತ್ಯೆ ಮಾಡಿಕೊಳ್ಳಲ್ಲಿಲ್ವಲಾ..?.ಇನ್ನೇನು ವಿಡಿಯೋ ಇದೆ. ಡಿಕೆ ಮಾತನಾಡಿದ್ರು ಬೆಳಗ್ಗೆ, ನಿಮ್ಮ ಹತ್ತಿರ ಏನೇನಿದೆ ನಮಗೆ ಕೊಡಿ ನಿವು ತಲೆನೆ ಕೆಡಿಸಿಕೊಳ್ಳಬೇಡಿ. ಅವರನ್ನ ಬಲಿ ಹಾಕೋಕೆ ಸರ್ಕಾರದಿಂದಲೇ ತೀರ್ಮಾನವಾಗಿದೆ ಎಂದಿದ್ದಾರೆ.

ನೀನೇನು ಪೆನ್ಡ್ರೈವ್‍ನ ನಾಗಮಂಗದಲ್ಲೋ, ಹಾಸನದಲ್ಲಿ ಹಂಚಿಲ್ಲ.. ಹಂಚಿದ್ರೂ ತಪ್ಪೇನಿದೆ ಹೇಳಿ. ನೀವ್ ಲಾಯರ್ ಅಲ್ವೇನಲ್ವೆನ್ರಿ..ಅದು ಏನು..? ಏನು ಆಗಲ್ಲ ಎಂದು ಶಿವರಾಮೇಗೌಡ ಹೇಳಿದಾಗ, ಅಣ್ಣ ಕಾನೂನು ಪ್ರಕಾರ ಶಿಕ್ಷೆ ಅಲ್ವೇನಣ್ಣ. ಹೆಣ್ಮಕ್ಕಳ ಮಾಣ ಮರ್ಯಾದೆ ಅಣ್ಣ. ಶೀಲದ ಬಗ್ಗೆ ನಾವೂ ಯೋಚನೆ ಮಾಡಬೇಕಲ್ವ ಎಂದು ದೇವರಾಜೇಗೌಡ ಹೇಳುತ್ತಾರೆ. ಈ ವೇಳೆ ಶಿವರಾಮೇಗೌಡ, ಅದರ ಬಗ್ಗೆ ನೀವೇಕೆ ತಲೆಕೆಡಿಸಿಕೊಳ್ತೀರಿ. ಅಮಿತ್ ಶಾ ಚನ್ನೈನಲ್ಲಿ ಹೇಳಿದ್ದಾರಲ್ಲ, ಹೆಣ್ಮಕ್ಕಳಿಗೆ ಸುರಕ್ಷಿತ ತಾಣವಲ್ಲ ಕರ್ನಾಟಕ ಅಂತಾ ಎಂದಿದ್ದಾರೆ.

ದೇವರಾಜೇಗೌಡ ಆರೋಪ ಏನು?

ಕೆಲ ದಿನಗಳ ಹಿಂದೆ ದೇವರಾಜೇಗೌಡ ‘ನನ್ನನ್ನು ಕರೆಸಿಕೊಂಡು ಮಾತನಾಡಿ ಎಲ್ಲವನ್ನೂ ಹೆಚ್‌ಡಿ ಕುಮಾರಸ್ವಾಮಿ ಮಾಡಿದ್ದು ಎಂದು ಹೇಳುವಂತೆ ಒತ್ತಾಯ ಮಾಡಿದ್ದರು. ಪೆನ್‌ಡ್ರೈವ್ ಹಂಚಿಸಿದ್ದು ಹೆಚ್‌ಡಿ ಕುಮಾರಸ್ವಾಮಿ ಎಂದು ಹೇಳುವಂತೆ ಎಲ್‌ ಆರ್ ಶಿವರಾಮೇಗೌಡರ ಮೂಲಕ ಡಿಕೆ ಶಿವಕುಮಾರ್ ನನಗೆ ಹೇಳಿಸಿದ್ದರು. ₹100 ಕೋಟಿ ನೀಡುವುದಾಗಿ ಆಮಿಷ ಒಡ್ಡಿದ್ದರು. ಅದ್ರಲ್ಲಿ 5 ಕೋಟಿ ಅಡ್ವಾನ್ಸ್ ಅನ್ನ ಬೋರಿಂಗ್ ಕ್ಲಬ್ ನ ರೂಂ ನಂಬರ್ 110 ಕ್ಕೆ ಕಳಿಸಿದ್ದರು ಎಂದು ಆರೋಪಿಸಿದ್ದರು.

ಅಲ್ಲದೆ ಚನ್ನರಾಯಪಟ್ಟಣ ಗೋಪಾಲಸ್ವಾಮಿ ಅವರನ್ನು ಸಂಧಾನಕ್ಕೆ ಕಳುಹಿಸಿದ್ದರು. ಐದು ಕೋಟಿ ಕ್ಯಾಶ್ ಕೊಟ್ಟು ಡಿಕೆಶಿ ಕಳಿಸಿದ್ದರು. ದೇಶದಲ್ಲಿ ಮೋದಿಯವರಿಗೆ ಕಳಂಕ ತರಬೇಕು. ಈ ರಾಸಲೀಲೆ ಹಗರಣದಲ್ಲಿ ಮೋದಿಯವರನ್ನು ಬಿಂಬಿಸಿ ಬಿಜೆಪಿಗೆ ಕೆಟ್ಟ ಹೆಸರು ತರಬೇಕು ಅಂತಾ ಮಾಡಿದರು. ಡಿ.ಕೆ.ಶಿವಕುಮಾರ್ ಮುಖ್ಯ ಉದ್ದೇಶ ಹೆಚ್.ಡಿ.ಕುಮಾರಸ್ವಾಮಿ ನಾಯಕತ್ವವನ್ನು ರಾಜ್ಯದಲ್ಲಿ ಹಾಳು ಮಾಡಬೇಕು ಎನ್ನುವುದು. ಅಲ್ಲದೆ ಚಲುವರಾಯಸ್ವಾಮಿ, ಕೃಷ್ಣಬೈರೇಗೌಡ, ಪ್ರಿಯಾಂಕ್ ಖರ್ಗೆ ಸೇರಿ ಒಟ್ಟಾರೆ ನಾಲ್ಕು ಸಚಿವರಿಗೆ ಇದನ್ನು ನೋಡಿಕೊಳ್ಳಲು ಬಿಟ್ಟಿದ್ದಾರೆ’ ಎಂದು ದೇವರಾಜೇಗೌಡ ಆರೋಪ ಮಾಡಿದ್ದರು.

Leave A Reply

Your email address will not be published.