Belthangady: ಠಾಣೆಗೆ ನುಗ್ಗಿ ಪೋಲೀಸ್ ಅಧಿಕಾರಿಗಳಿಗೆ ಧಮ್ಕಿ ಹಾಕಿದ ಶಾಸಕ ಹರೀಶ್ ಪೂಂಜ – ಕಾಂಗ್ರೆಸ್ ಹೇಳಿದ್ದೇನು ?!

Belthangady : ಬಿಜೆಪಿ(BJP) ಯುವ ಮೋರ್ಚಾ ಅಧ್ಯಕ್ಷ ಶಶಿರಾಜ್ ಶೆಟ್ಟಿ ಅವರನ್ನು ಬಂಧಿಸಿದ ಕಾರಣಕ್ಕಾಗಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಅವರು ಬೆಳ್ತಂಗಡಿ(Belthangady) ಪೋಲೀಸ್ ಪೋಲೀಸ್ ಠಾಣೆಗೆ ನುಗ್ಗಿ ಅಧಿಕಾರಿಗಳಿಗೆ ಧಮ್ಕಿ ಹಾಕಿದ್ದಾರೆ. ಈ ಕುರಿತ ವಿಡಿಯೋ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗ್ತಿದೆ. ಇದೀಗ ಶಾಸಕರ ಮೇಲೆ ಪ್ರಕರಣ ಕೂಡ ದಾಖಲಾಗಿದೆ. ಇದೀಗ ಈ ವಿಚಾರ ಇಟ್ಟುಕೊಂಡು ಕಾಂಗ್ರೆಸ್(Congress) ಶಾಸಕರ ವಿರುದ್ಧ ಹರಿಹಾಯ್ದಿದೆ.

https://x.com/INCKarnataka/status/1792137007436832934?t=Wkmb5kyXZq7_AqfbkiNE0g&s=08

ಏನಿದು ಪ್ರಕರಣ?

ಅಕ್ರಮ ಕಲ್ಲು ಕ್ವಾರಿ ಹಾಗೂ ಸ್ಪೋಟ ಚಟುವಟಿಕೆ ಕೇಸ್ ನಲ್ಲಿ ರೌಡಿ ಶೀಟರ್ ಹಾಗೂ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಶಶಿರಾಜ್ ಶೆಟ್ಟಿ(Shashiraj Shetty) ಅವರು ಶಾಮೀಲಾಗಿರುವ ಆರೋಪದ ಮೇಲೆ ಶಶಿರಾಜ್ ಶೆಟ್ಟಿ ಅವರನ್ನು ಪೋಲೀಸರು ಬಂಧಿಸಿದ್ದಾರೆ. ಈ ವೇಳೆ ಠಾಣೆಗೆ ಬಂದ ಶಾಸಕರು ರಾತ್ರೋರಾತ್ರಿ ಧರಣಿ ಮಾಡಿ, ಠಾಣೆಗೆ ನುಗ್ಗಿ ಪೋಲೀಸ್ ಅಧಿಕಾರಿಗಳಿಗೆ ಧಮ್ಕಿ ಹಾಕಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ. ಅವಾಚ್ಯವಾಗಿ ಬೈದು ಬೆದರಿಸಿದ್ದಾರೆ.ಅಲ್ಲದೆ ತಮ್ಮ ಪಕ್ಷದ ಕಾರ್ಯಕರ್ತನಾದ ಶಶಿರಾಜ್ ಶೆಟ್ಟಿಯನ್ನು ಕಾನೂನುಬಾಹಿರವಾಗಿ ಬಿಡುಗಡೆ ಮಾಡುವಂತೆ ಪೊಲೀಸ್ ಅಧಿಕಾರಿಗಳ ಮೇಲೆ ಒತ್ತಡ ಹಾಕಿ ಆರೋಪಿಯನ್ನು ರಕ್ಷಿಸಲು ಪ್ರಯತ್ನಿಸಿದ್ದಾರೆ. ಸದ್ಯ ಈ ಎಲ್ಲಾ ಆರೋಪಗಳ ಮೇರೆಗೆ ಬಿಜೆಪಿ ಶಾಸಕ ಹರೀಶ್ ಪೂಂಜ ವಿರುದ್ಧ ಬೆಳ್ತಂಗಡಿ ಠಾಣೆಯಲ್ಲಿ ಐಪಿಸಿ ಕಲಂ 353,504ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಕಾಂಗ್ರೆಸ್ ಹೇಳಿದ್ದೇನು?

ಬಿಜೆಪಿಯ ರೌಡಿ ಎಂಎಲ್ ಹರೀಶ್ ಪೂಂಜಾ(MLA Harish Poonja) ದಬ್ಬಾಳಿಕೆ ನಡೆಸಿದ್ದಾರೆ ಎಂದು ಕರ್ನಾಟಕ ಕಾಂಗ್ರೆಸ್‌ ‘ಎಕ್ಸ್‌’ ತಾಣದಲ್ಲಿ ಹರಿಹಾಯ್ದಿದೆ. ಅಲ್ಲದೆ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಯನ್ನು ಹದಗೆಡಿಸಲು ಬಿಜೆಪಿ(BJP) ಹಲವು ಪ್ರಯತ್ನಗಳನ್ನು ನಡೆಸುತ್ತಿದೆ. ಬೆಳ್ತಂಗಡಿ ಬಿಜೆಪಿ ಶಾಸಕ ಹರೀಶ್ ಪೂಂಜಾಅವರು ಪೊಲೀಸ್ ಠಾಣೆಗೆ ನುಗ್ಗಿ ಪೊಲೀಸ್ ಅಧಿಕಾರಿಗಳಿಗೆ ಧಮಕಿ ಹಾಕುವ ಮೂಲಕ ಬಿಜೆಪಿ ಎಂದಿಗೂ ಕ್ರಿಮಿನಲ್ ಗಳ ರಕ್ಷಕರು ಎಂಬುದನ್ನು ಸಾಬೀತು ಮಾಡಿದ್ದಾರೆ. ಪೊಲೀಸರ ನೈತಿಕ ಸ್ಥೈರ್ಯವನ್ನು ಕಸಿಯುತ್ತ, ಕ್ರಿಮಿನಲ್ ಗಳಿಗೆ ಬೆಂಬಲ ನೀಡುತ್ತ ಕಾನೂನು ಸುವ್ಯವಸ್ಥೆಗೆ ಸವಾಲು ಹಾಕುವಂತಹ @BJP4Karnataka ಕೆಲಸಗಳಿಗೆ ಕಡಿವಾಣ ಹಾಕುವುದಕ್ಕೆ ನಮ್ಮ ಸರ್ಕಾರ ಸಮರ್ಥವಾಗಿದೆ’ ಎಂದು ಕಿಡಿಕಾರಿದೆ.

ಅಲ್ಲದೆ ಒಬ್ಬ ಶಾಸಕನ ಕೆಲಸ ಅಕ್ರಮಕೋರರನ್ನು ರಕ್ಷಿಸುವುದಾ ಅಥವಾ ಜನರ ಆಶೋತ್ತರಗಳನ್ನು ಈಡೇರಿಸುವುದಾ? ಎಂದು ಬಿಜೆಪಿಯನ್ನು ಪ್ರಶ್ನಿಸಿದೆ. ಕಾನೂನು ಸುವ್ಯವಸ್ಥೆಯ ಬಗ್ಗೆ ಪುಂಖಾನುಪುಂಖವಾಗಿ ಆರೋಪ ಮಾಡುವ ಬೊಮ್ಮಾಯಿ ಅವರೇ, ಆರ್, ಅಶೋಕ್ ಅವರೇ, ಪೊಲೀಸ್ ಠಾಣೆಗೆ ನುಗ್ಗಿ ಪೊಲೀಸರ ಮೇಲೆ ದೌರ್ಜನ್ಯ ಎಸಗುವ ನಿಮ್ಮ ಶಾಸಕನ ಕಾನೂನು ವಿರೋಧಿ ನಡೆಯ ಬಗ್ಗೆ ನಿಮ್ಮ ಸಹಮತವಿದೆಯೇ? ನಿಮ್ಮ ಸರ್ಕಾರದ ಅವಧಿಯಲ್ಲಿ ಇಂತಹ ಅಕ್ರಮಗಳನ್ನು ಪಾಲನೆ, ಪೋಷಣೆ ಮಾಡಿದ್ದರ ಪರಿಣಾಮ ಅಕ್ರಮಗಳು ಮಿತಿ ಮೀರಿದ್ದವಲ್ಲವೇ? ಕ್ರಿಮಿನಲ್ ಗಳಿಗೆ, ಅತ್ಯಾಚಾರಿಗಳಿಗೆ, ಕೊಲೆಗಡುಕರಿಗೆ ಬೆಂಬಲಿಸುವ ಬಿಜೆಪಿಗೆ ರಾಜ್ಯದ ಕಾನೂನು ಸುವ್ಯವಸ್ಥೆಯನ್ನು ಪ್ರಶ್ನೆ ಮಾಡುವ ನೈತಿಕತೆ ಇಲ್ಲ ಎಂದು ಹೇಳಿದೆ.

ಈ ಹಿಂದೆಯೂ ಪೂಂಜ ಮೇಲೆ ದಾಖಲಾಗಿತ್ತು ಕೇಸ್:

ಈ ಹಿಂದೆ ಕಳಂಜೆದಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು ತೆರವು ಕಾರ್ಯಾಚರಣೆ ನಡೆಸಿದ ವೇಳೆ ಅದನ್ನು ತಡೆದ ಘಟನೆ ಹಿನ್ನೆಲೆಯಲ್ಲಿ ಶಾಸಕ ಹರೀಶ್ ಪೂಂಜ ಅವರ ವಿರುದ್ಧ ಧರ್ಮಸ್ಥಳ ಠಾಣೆಯಲ್ಲಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಬಗ್ಗೆ ಪ್ರಕರಣ ದಾಖಲಿಸಲಾಗಿತ್ತು.

2 Comments
  1. […] ಇದನ್ನೂ ಓದಿ: Belthangady: ಠಾಣೆಗೆ ನುಗ್ಗಿ ಪೋಲೀಸ್ ಅಧಿಕಾರಿಗಳಿ… […]

  2. […] ಇದನ್ನೂ ಓದಿ: Belthangady: ಠಾಣೆಗೆ ನುಗ್ಗಿ ಪೋಲೀಸ್ ಅಧಿಕಾರಿಗಳಿ… […]

Leave A Reply

Your email address will not be published.