Char Dham Yatra: ಚಾರ್ ಧಾಮ್ ಯಾತ್ರಾರ್ಥಿಗಳಿಗೆ ಸಂತಸದ ಸುದ್ದಿ : ಇನ್ನಷ್ಟು ದಿನ ವಿಐಪಿ ದರ್ಶನ ನಿಷಿದ್ಧ : ಸೂಚನೆ ಹೊರಡಿಸಿದ ಉತ್ತರಖಂಡ ಸರ್ಕಾರ

char dham yatra: ದೇಶದಲ್ಲಿ ಚಾರ್ ಧಾಮ್ ಯಾತ್ರೆಯ ಅಬ್ಬರ ಮುಂದುವರಿದಿದ್ದು, ಚಾರ್ ಧಾಮ್ ದೇಗುಲಗಳಿಗೆ ಭೇಟಿ ನೀಡಲು ದೇಶ ವಿದೇಶಗಳಿಂದ ಲಕ್ಷಾಂತರ ಭಕ್ತರು ಆಗಮಿಸುತ್ತಿದ್ದು, ಈ ಹಿನ್ನೆಲೆಯಲ್ಲಿ ಉತ್ತರಖಂಡ ಸರ್ಕಾರ ಭಕ್ತರಿಗೆ ಹೊಸ ಸೂಚನೆಗಳನ್ನು. ಹೊರಡಿಸಿದೆ.

ಇದನ್ನೂ ಓದಿ: Garlic Peels Benifits: ಬೆಳ್ಳುಳ್ಳಿ ಸಿಪ್ಪೆಯನ್ನು ಎಸೆಯಬೇಡಿ, ಇದರಿಂದ ಇದೆ ಹಲವಾರು ಪ್ರಯೋಜನಗಳು!

ಉತ್ತರಾಖಂಡದ ಯಮುನೋತ್ರಿ, ಗಂಗೋತ್ರಿ, ಕೇದಾರನಾಥ ಮತ್ತು ಬದರಿನಾಥ ದೇವಾಲಯಗಳನ್ನು ಚಾರ್ ಧಾಮ್ ಕ್ಷೇತ್ರಗಳು ಎಂದು ಕರೆಯಲಾಗುತ್ತದೆ. ಇದೀಗ ಎಲ್ಲಾ ದೇವಾಲಯಗಳು ಭಕ್ತರಿಗಾಗಿ ತೆರೆದಿವೆ. ಈ ತಿಂಗಳ 10 ರಂದು ಗಂಗೋತ್ರಿ ಮತ್ತು ಯಮುನೋತ್ರಿ, 12 ರಂದು ಕೇದಾರನಾಥ ಮತ್ತು ಬದರಿನಾಥ(Kedarnath & Badrinath) ದೇವಾಲಯಗಳನ್ನು ಭಕ್ತರ ದರ್ಶನಕ್ಕಾಗಿ ತೆರೆಯಲಾಗಿದೆ.

ಇದನ್ನೂ ಓದಿ: Palm Sign: ನಿಮ್ಮ ಅಂಗೈಯಲ್ಲಿ ಈ ಗುರುತುಗಳು ಇದ್ರೆ, ನಿಮ್ಮ ಲೈಫೇ ಚೇಂಜ್!

ಮತ್ತೆ ಚಳಿಗಾಲದ ಆರಂಭದಲ್ಲಿ ಅಂದರೆ ನವೆಂಬರ್ 12 ರಂದು ಗಂಗೋತ್ರಿ ಮತ್ತು ಯಮುನೋತ್ರಿ(Gangotri and Yamunotri), 14 ರಂದು ಕೇದಾರನಾಥ ಮತ್ತು ಬದರಿನಾಥ(Kedarnath and Badrinath)ದೇವಾಲಯಗಳನ್ನು ಮುಚ್ಚಲಾಗುತ್ತದೆ. ಭಾರೀ ಹಿಮಪಾತ ಮತ್ತು ಹವಾಮಾನ ವೈಪರೀತ್ಯದಿಂದಾಗಿ ಆಯಾ ದೇವಸ್ಥಾನಗಳಲ್ಲಿ ವರ್ಷದ ಆರು ತಿಂಗಳು ಮಾತ್ರ ಭಕ್ತರಿಗೆ ಪ್ರವೇಶ ನೀಡಲಾಗುತ್ತದೆ.

ಚಾರ್ ದಾಮ್ ಯಾತ್ರೆಯ(Char Dham Yatra) ಮೊದಲ ವಾರದಲ್ಲಿ 3,34,732 ಭಕ್ತರು ಭೇಟಿ ನೀಡಿದ್ದಾರೆ. ದಿನದಿಂದ ದಿನಕ್ಕೆ ಭಕ್ತರ ದಂಡು ಹೆಚ್ಚಾಗುತ್ತಿದೆ. ಇದರೊಂದಿಗೆ ಉತ್ತರಾಖಂಡ ಸರ್ಕಾರ ಕೆಲವು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಂಡಿದೆ. ಸಾಮಾನ್ಯ ಭಕ್ತರಿಗೆ ದರ್ಶನ ನೀಡಲು ಆದ್ಯತೆ ಕಲ್ಪಿಸಲಾಗಿದೆ.

ವಿಐಪಿ ಭೇಟಿಗೆ(VIP entry )ವಿಧಿಸಲಾಗಿದ್ದ ನಿಷೇಧವನ್ನು ಇದೇ 31ರವರೆಗೆ ವಿಸ್ತರಿಸಲಾಗಿದೆ. ಈ ಸಂಬಂಧ ಉತ್ತರಾಖಂಡ ಸರ್ಕಾರ ಆದೇಶ ಹೊರಡಿಸಿದೆ. ಪ್ರಸ್ತುತ ಸಾಮಾನ್ಯ ಭಕ್ತರಿಗೆ ಹೆಚ್ಚು ಉತ್ತಮ ಸೌಲಭ್ಯ ಕಲ್ಪಿಸುವತ್ತ ಗಮನಹರಿಸಿದ್ದು, ವಿಐಪಿಗಳ ಆಗಮನವನ್ನು ತಡೆಯುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ರಾಧಾ ರಾತೂರಿ ತಿಳಿಸಿದ್ದಾರೆ.

Leave A Reply

Your email address will not be published.