Dr Bro Gagan: ‘ಎಂಚ ಉಲ್ಲರ್… ಎಂಚ ಉಲ್ಲರ್’ ಎಂದು ಇಂಡೋನೇಷಿಯಾದಲ್ಲಿ ಹವಾ ಸೃಷ್ಟಿಸಿದ ಡಾ.ಬ್ರೋ! ವಿಡಿಯೋ ವೈರಲ್!
Dr Bro Gagan: ಕನ್ನಡದ ಯುವಕನೊಬ್ಬ ಬಹುತೇಕ ಎಲ್ಲಾ ದೇಶಗಳನ್ನೂ ಸುತ್ತಿ ಅಲ್ಲಿನ ಪರಿಚಯ ಮಾಡುವ ಹವ್ಯಾಸ ಹೊಂದಿದ್ದು ಇದೀಗ ಡಾ.ಬ್ರೋ. ಯೂಟ್ಯೂಬ್ನಲ್ಲಿ ಅಲ್ಪ ಕಾಲದಲ್ಲಿಯೇ ಕೋಟಿ ಕೋಟಿ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಡಾ.ಬ್ರೋ ಗಗನ್ (Dr Bro Gagan) ವಿಶೇಷತೆ ಎಂದರೆ ಯಾವ ದೇಶಕ್ಕೆ ಹೋದರೂ ಅಲ್ಲಿ ಕನ್ನಡದಲ್ಲಿಯೇ ಮಾತನಾಡಿ ಕನ್ನಡಿಗರ ಹೃದಯ ಗೆಲ್ಲುತ್ತಿದ್ದಾರೆ.
https://www.instagram.com/reel/C6yHjj9PVNJ/?igsh=YzljYTk1ODg3Zg==
ದಯವಿಟ್ಟು ನಿಮ್ಮ ಪ್ರಾಣ ಪಣಕ್ಕಿಡಬೇಡಿ ಎಂದು ಅಭಿಮಾನಿಗಳು ಡಾ ಬ್ರೋ ಗೆ ಹೇಳುತ್ತಲೇ ಇರುತ್ತಾರೆ. ಆದರೆ ತಾಲಿಬಾನ್, ಪಾಕಿಸ್ತಾನ್ದಂಥ ಡೇಂಜರ್ ರಾಷ್ಟ್ರಗಳಿಗೂ ಹೋಗಿ ಅಲ್ಲಿನ ಜನರೊಂದಿಗೆ ಸೇರಿ ಒಡನಾಟ ಬೆಳೆಸಿ ಅದರ ವಿಡಿಯೋ ಮಾಡುವ ಸಾಹಸ ಮಾಡಿದ್ದಾರೆ ಎಂದ್ರೆ ತಪ್ಪಾಗಲಾರದು. ಅಲ್ಲದೆ ಇನ್ನೂ ಹಲವಾರು ಸಾಹಸಮಯ ವಿಡಿಯೋ ಅಪ್ಲೋಡ್ ಮಾಡಿದ್ದಾರೆ. ಒಟ್ಟಿನಲ್ಲಿ ಧೈರ್ಯದಿಂದ ಗಗನ್ ಎಲ್ಲಾ ದೇಶಗಳಿಗೂ ಸುತ್ತುತ್ತಿರುತ್ತಾರೆ.
ಇದೀಗ ಇಂಡೋನೇಷಿಯಾಕ್ಕೆ ಪ್ರಯಾಣ ಬೆಳೆಸಿದ್ದು, ಅಲ್ಲಿ ತುಳು ಮಾತನಾಡಿ ಸಕತ್ ಸದ್ದು ಮಾಡಿದ್ದಾರೆ. ಅಂದಹಾಗೆ ಗಗನ್ ಅವರೇನೂ ತುಳುನಾಡಿನವರಲ್ಲ. ಅಪ್ಪಟ ಬೆಂಗಳೂರಿನ ಯುವಕ. ಆದರೆ ತುಳುವಿನಲ್ಲಿ ಒಂದೇ ಒಂದು ವಾಕ್ಯ ಕಲಿತು ಅದನ್ನು ಇಂಡೋನೇಷಿಯಾದಲ್ಲಿಯೂ ಹೇಳುವ ಮೂಲಕ ಸಕತ್ ವೈರಲ್ ಆಗುತ್ತಿದ್ದಾರೆ. ಈ ಕುರಿತು ವಿಡಿಯೋ ಕ್ಲಿಪ್ ಒಂದು ತುಳು ಕಂಟೆಂಟ್ ಕ್ರಿಯೇಟರ್ ಶರಣ್ ಚಿಲಿಂಬಿ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದು, ವಿಡಿಯೋ ಎಲ್ಲೆಡೆ ವೈರಲ್ ಆಗಿದೆ.
ಇದನ್ನೂ ಓದಿ: Mangaluru: ಐಸ್ ಕ್ರೀಂ ಮ್ಯಾನ್ ಆಫ್ ಇಂಡಿಯಾ -ನ್ಯಾಚುರಲ್ ಐಸ್ ಕ್ರೀಂ ಸಂಸ್ಥಾಪಕ ರಘುನಂದನ್ ಕಾಮತ್ ಇನ್ನಿಲ್ಲ
ಹೌದು, ಕೆಲ ದಿನಗಳ ಹಿಂದೆ ಗಗನ್ ಅವರು ಮಂಗಳೂರಿಗೆ ಭೇಟಿ ನೀಡಿದ್ದಾಗ, ಶರಣ್ ಚಿಲಿಂಬಿ ಅವರು ಹೇಗಿದ್ದೀರಿ ಎನ್ನುವುದಕ್ಕೆ ತುಳುವಿನಲ್ಲಿ ಎಂಚ ಉಲ್ಲರ್ ಎಂದು ಹೇಳುತ್ತಾರೆ ಎಂದು ಕಲಿಸಿಕೊಟ್ಟಿದ್ದರು. ಹಾಗಾಗಿ ಇದೀಗ ಇಂಡೋನೇಷಿಯಾದಲ್ಲಿ ಡಾ. ಬ್ರೋ ಅಲ್ಲಿನ ಸ್ಥಳೀಯರಿಗೆ ಕೈಬೀಸಿ ಹಲೋ… ಎಂಚ ಉಲ್ಲರ್… ಎಂಚ ಉಲ್ಲರ್ ಎಂದು ತುಳುವಿನಲ್ಲಿ ಮಾತನಾಡಿರುವಂತಹ ದೃಶ್ಯವನ್ನು ಕಾಣಬಹುದು. ಇದರ ವಿಡಿಯೋ ತುಣುಕು ಸೋಷಿಯಲ್ ಮೀಡಿಯಾದಲ್ಲಿ ಸಕತ್ ವೈರಲ್ ಆಗುತ್ತಿದೆ.
[…] ಇದನ್ನೂ ಓದಿ: Dr Bro Gagan: ‘ಎಂಚ ಉಲ್ಲರ್… ಎಂಚ ಉಲ್ಲರ್’ ಎಂದು … […]
[…] […]