Puttur: ಚಿಕಿತ್ಸೆ ಸರಿಯಾಗಿ ನೀಡದ ಆರೋಪ- ವ್ಯಕ್ತಿ ಸಾವು! ದೂರು ದಾಖಲು

Share the Article

Puttur: ಆಸ್ಪತ್ರೆಗೆಂದು ಬಂದ ವ್ಯಕ್ತಿಯೋರ್ವರು ಚಿಕಿತ್ಸೆ ಸಂದರ್ಭ ಮೃತ ಹೊಂದಿದ ಘಟನೆಯೊಂದು ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ನಡೆದಿದೆ. ಈ ಸಂದರ್ಭದಲ್ಲಿ ಮೃತರ ಕಡೆಯ ಮಂದಿ ನೂರಕ್ಕೂ ಹೆಚ್ಚು ಜನ ಸೇರಿದ್ದು, ಆತಂಕದ ವಾತಾವರಣ ನಿರ್ಮಾಣವಾಗಿತ್ತು.

ಇದನ್ನೂ ಓದಿ: Mangaluru: 500ರ ಸನಿಹಕ್ಕೆ ಅಡಿಕೆ ಧಾರಣೆ- ಇನ್ನಷ್ಟೂ ಏರಿಕೆಯ ನಿರೀಕ್ಷೆ

ಈ ಘಟನೆ ಮೇ.15 ರಂದು ನಡೆದಿದೆ. ಬಂಟ್ವಾಳ ತಾಲೂಕಿನ ಉಳಿಗ್ರಾಮದ ಕೃಷ್ಣಪ್ಪ (51) ಮೃತ ವ್ಯಕ್ತಿ.

ಬೆಳ್ತಂಗಡಿ ತಾಲೂಕಿನ ಕಕ್ಕೆಪದವು ಪಿಲಿಬೈಲು ನಿವಾಸಿ ಕೃಷ್ಣಪ್ಪ ಗೌಡ ಎನ್ನುವವರು ಜ್ವರ ಹಾಗೂ ನಿಶಕ್ತಿಯಿಂದ ಚಿಕಿತ್ಸೆಗೆ ನಿನ್ನೆ ಮಧ್ಯಾಹ್ನ ಪುತ್ತೂರಿನ ಖಾಸಗಿ ಆಸ್ಪತ್ರೆಗೆ ಬಂದಿದ್ದರು.

ಇದನ್ನೂ ಓದಿ: PG Courses: ಸ್ನಾತಕೋತ್ತರ ಪದವಿ ಶಿಕ್ಷಣಕ್ಕಾಗಿ ಕಾಲೇಜನ್ನು ಹುಡುಕುತ್ತಿದ್ದೀರ? ಇಲ್ಲಿದೆ ನೋಡಿ ಅವಕಾಶ!

ಬಂದವರಿಗೆ ವೈದ್ಯರು ಸ್ಕ್ಯಾನಿಂಗ್ ಮಾಡಿಸಿ, ಮರಳಿ ಆಸ್ಪತ್ರೆಗೆ ಬಂದವರು ಚಿಕಿತ್ಸೆ ಪಡೆದ ಸಂದರ್ಭದಲ್ಲಿ ಮೃತ ಹೊಂದಿದ್ದಾರೆ ಎಂದು ಆಸ್ಪತ್ರೆಯವರು ಹೇಳಿದ್ದಾರೆ.

ಆದರೆ ಸಂಜೆಯಾಗುತ್ತಿದ್ದರೆ ಮೃತರ ಮನೆ ಕಡೆಯವರು ನೂರಾರು ಮಂದಿ ಸೇರಿದ್ದು, ನಂತರ ಪೊಲೀಸರು ಆಸ್ಪತ್ರೆಗೆ ಭೇಟಿ ನೀಡಿದ್ದಾರೆ.

ಮೃತರ ಕಡೆಯವರು ಪುತ್ತೂರು ಠಾಣೆಗೆ ತೆರಳಿ ದೂರು ದಾಖಲು ಮಾಡಿದ್ದಾರೆಂದು ತಿಳಿದು ಬಂದಿದೆ.

Leave A Reply

Your email address will not be published.