Patna: ಲೋಕಸಭಾ ಚುನಾವಣೆ- ಮಗನ ವಿರುದ್ಧ ತಾಯಿ ಸ್ಪರ್ಧೆ !!

Patna: ದೇಶಾದ್ಯಂತ ಲೋಕಸಭಾ ಚುನಾವಣೆಯು ಮುಗಿಯುತ್ತ ಬಂದರೂ ಕೂಡ ಅದರ ಕಾವು ರಂಗೇರುತ್ತಲೇ ಇದೆ. ಅಲ್ಲದೆ ಈ ಸರಿಯ ಲೋಕಸಭೆ ಚುನಾವಣೆಯು ಹಲವು ವಿಶೇಷತೆಗಳಿಗೆ ಕಾರಣವಾಗಿದೆ. ಅಂತೆಯೇ ಪಾಟ್ನಾದಲ್ಲಿನ ಕಾರಾಕಾಟ್(Karakat) ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾದ ಮಗನಿಗೆ ತಾಯಿಯೇ ಎದುರಾಳಿಯಾಗಿದ್ದಾಳೆ.

ಇದನ್ನೂ ಓದಿ: INDIA: ದೇಶಾದ್ಯಂತ 5 ಕೆಜಿ ಪಡಿತರ ವಿತರಣೆಯನ್ನು ದುಪ್ಪಟ್ಟು ಮಾಡುತ್ತೇವೆ – ಇಂಡಿಯಾ ಕೂಟ ಘೋಷಣೆ !!

ಹೌದು, ಭೋಜ್‌ ಪುರಿ ನಟ ಹಾಗೂ ಬಿಜೆಪಿ(BJP) ನಾಯಕ ಪವನ್ ಸಿಂಗ್(Pavn Singh) ಅವರ ತಾಯಿ ಪ್ರತಿಮಾ ದೇವಿ ಅವರು ಬಿಹಾರದ ಕಾರಾಕಾಟ್ ಲೋಕಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು. ವಿಶೇಷ ಎಂದರೆ, ಪವನ್ ಸಿಂಗ್ ಇದೇ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ.

ಇದನ್ನೂ ಓದಿ: PM Modi: ಪ್ರಧಾನಿ ಮೋದಿ ಆಡಳಿತದ ಕುರಿತು ಮುಸ್ಲಿಂ ನಾಯಕರ ಅಭಿಪ್ರಾಯಗಳಿವು !!

ಬಿಜೆಪಿ ಸದಸ್ಯರಾದ ಪವನ್ ಸಿಂಗ್ ಅವರಿಗೆ ಪಕ್ಷವು ಮೊದಲ ಪಟ್ಟಿಯಲ್ಲೇ ಪಶ್ಚಿಮ ಬಂಗಾಳದ ಅಸನ್‌ಸೋಲ್ ಕ್ಷೇತ್ರದಿಂದ ಟಿಕೆಟ್ ಘೋಷಿಸಿತ್ತು. ಆದರೆ, ಪವನ್ ಸಿಂಗ್ ಸ್ಪರ್ಧಿಸಲು ನಿರಾಕರಿಸಿದ್ದರು. ಆದರೆ, ನಂತರ ಪವನ್ ಸಿಂಗ್ ಕಾರಾಕಾಟ್‌ನಿಂದ ಪಕ್ಷೇತರ ಅಭ್ಯರ್ಥಿಯಾಗಿ ಮೇ 9ರಂದು ನಾಮಪತ್ರ ಸಲ್ಲಿಸಿದ್ದರು.

ಕಾರಾಕಾಟ್ ಕ್ಷೇತ್ರದ ಎನ್‌ಡಿಎ(NDA) ಅಭ್ಯರ್ಥಿಯಾಗಿ ರಾಷ್ಟ್ರೀಯ ಲೋಕ ಮೋರ್ಚಾ ಅಧ್ಯಕ್ಷ ಉಪೇಂದ್ರ ಕುಶ್ವಾಹ ನಾಮಪತ್ರ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಎನ್‌ಡಿಎ ಅಭ್ಯರ್ಥಿ ವಿರುದ್ಧ ಸ್ಪರ್ಧಿಸದಂತೆ ಪವನ್ ಸಿಂಗ್ ಅವರಿಗೆ ಬಿಜೆಪಿ ಹಿರಿಯ ಮುಖಂಡರು ಸೂಚಿಸಿದ್ದರು. ಆದರೂ ಸಿಂಗ್ ಕಣದಿಂದ ಹಿಂದೆ ಸರಿಯಲಿಲ್ಲ. ಇದೀಗ ಅವರ ತಾಯಿ ಪ್ರತಿಮಾ ಕೂಡ ಅದೇ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿ ಕುತೂಹಲಕ್ಕೆ ಕಾರಣವಾಗಿದ್ದಾರೆ.

2 Comments
  1. […] ಇದನ್ನೂ ಓದಿ: Patna: ಲೋಕಸಭಾ ಚುನಾವಣೆ- ಮಗನ ವಿರುದ್ಧ ತಾಯಿ ಸ್… […]

Leave A Reply

Your email address will not be published.