Charlie 777: 6 ಮುದ್ದಾದ ಮರಿಗಳಿಗೆ ಜನ್ಮ ನೀಡಿದ ಚಾರ್ಲಿ 777! ರಕ್ಷಿತ್ ಶೆಟ್ಟಿ ಲೈವ್ ವಿಡಿಯೋ ವೈರಲ್ !

Charlie 777: ಚಾರ್ಲಿ 777 ಚಿತ್ರ ಮನಸ್ಸಿಗೆ ಬಂದಾಗ ಮೊದಲು ನೆನಪಿಗೆ ಬರೋದೇ ಮುದ್ದಿನ ನಾಯಿ. ಹೌದು, ರಕ್ಷಿತ್ ಶೆಟ್ಟಿ ಅಭಿನಯದ ಚಾರ್ಲಿ 777 (charlie 777) ಚಿತ್ರದಲ್ಲಿ ಎಲ್ಲರ ಮನಸ್ಸನ್ನು ಮುದ್ದಿನ ನಾಯಿ ಚಾರ್ಲಿ ಗೆದ್ದು ಬಿಟ್ಟಿದೆ. ಇದೀಗ ನಾಯಿ ಚಾರ್ಲಿ 6 ಮುದ್ದಾದ ಮರಿಗಳಿಗೆ ಜನ್ಮ ನೀಡಿದೆ ಅನ್ನೋದು ಖುಷಿ ಸುದ್ದಿ ಆಗಿದೆ.

https://www.instagram.com/reel/C6_a6jAJDp-/?igsh=YzljYTk1ODg3Zg==

ಹೌದು, ಚಾರ್ಲಿ 6 ಮರಿಗಳಿಗೆ ಜನ್ಮ ನೀಡಿದೆ. ಇದೀಗ ಮುದ್ದಿನ ಚಾರ್ಲಿ ಹಾಗೂ ಮರಿಗಳನ್ನು ನೋಡಲು ನಟ ರಕ್ಷಿತ್ ಶೆಟ್ಟಿ ತಮ್ಮೆಲ್ಲಾ ಕೆಲಸಗಳನ್ನು ಬಿಟ್ಟು ಮೈಸೂರಿಗೆ ಆಗಮಿಸಿದ್ದು, ಚಾರ್ಲಿ ಜೊತೆ ಕೆಲ ಹೊತ್ತು ಕಳೆದಿದ್ದಾರೆ.

ಇದನ್ನೂ ಓದಿ: Patna: ಲೋಕಸಭಾ ಚುನಾವಣೆ- ಮಗನ ವಿರುದ್ಧ ತಾಯಿ ಸ್ಪರ್ಧೆ !!

ಚಾರ್ಲಿ ಹಾಗೂ ಚಾರ್ಲಿಯ ಮರಿಗಳನ್ನು ಲೈವ್ ವಿಡಿಯೋ ಪೋಸ್ಟ್ ಮಾಡಿದ್ದು, ದಿಢೀರ್ ಲೈವ್ ಬಂದಿದ್ದೇನೆ. ಇದು ಪ್ಲಾನ್ ಮಾಡಿ ಬಂದಿರುವ ಲೈವ್ ಅಲ್ಲ. ಚಾರ್ಲಿ 777 ಚಿತ್ರ ಬಿಡುಗಡೆಯಾಗಿ ಸರಿಸುಮಾರು 2 ವರ್ಷ ಉರುಳಿದೆ. ಚಿತ್ರ ಬಿಡುಗಡೆಯಾದ ಬಳಿಕ, ಚಾರ್ಲಿ ತಾಯಿಯಾದರೆ ಈ ಪಯಣ ಸಂಪೂರ್ಣವಾಗಲಿದೆ ಎಂದು ನಾನು ಎಂದುಕೊಳ್ಳುತ್ತಿದ್ದೆ ಎಂದು ರಕ್ಷಿತ್ ಶೆಟ್ಟಿ ಲೈವ್ ವಿಡಿಯೋ ಆರಂಭಿಸಿದ್ದಾರೆ. ನನಗೆ ಹಾಗೂ ಇಡೀ ಚಿತ್ರ ತಂಡಕ್ಕೆ ಚಾರ್ಲಿ ತಾಯಿಯಾಗಬೇಕು ಅನ್ನೋ ಆಲೋಚನೆಯಿತ್ತು. ಈ ಕುರಿತು ನಾನು ಚಾರ್ಲಿಗೆ ತರಬೇತಿ ನೀಡಿದ ಟ್ರೈನರ್ ಪ್ರಮೋದ್‌ಗೆ ಪದೇ ಪದೇ ಕೇಳುತ್ತಿದ್ದೆ. ಆದರೆ ಚಾರ್ಲಿಗೆ ವಯಸ್ಸಾಗಿದೆ. ಹೀಗಾಗಿ ಸಾಧ್ಯತೆಗಳು ಕಡಿಮೆ ಅನ್ನೋ ಉತ್ತರ ಯಾವತ್ತೂ ಬರುತ್ತಿತ್ತು. ಆದರೆ ಅಚ್ಚರಿ ಎಂಬಂತೆ ಮೇ.09ರಂದು ಚಾರ್ಲಿ ಮುದ್ದಾಗ 6 ಮರಿಗಳಿಗೆ ಜನ್ಮ ನೀಡಿದ್ದಾಳೆ. ಇದಕ್ಕೊಸ್ಕರ ನಾನು ಮೈಸೂರಿಗೆ ಬಂದಿದ್ದೇನೆ ಎಂದಿದ್ದಾರೆ.

ಇದನ್ನೂ ಓದಿ: INDIA: ದೇಶಾದ್ಯಂತ 5 ಕೆಜಿ ಪಡಿತರ ವಿತರಣೆಯನ್ನು ದುಪ್ಪಟ್ಟು ಮಾಡುತ್ತೇವೆ – ಇಂಡಿಯಾ ಕೂಟ ಘೋಷಣೆ !!

ಇದೀಗ ಮೈಸೂರಿನಲ್ಲಿರುವ ಪ್ರಮೋದ್ ಮನೆಯಲ್ಲಿ ಚಾರ್ಲಿ 6 ಮರಿಗಳಿಗೆ ಜನ್ಮ ನೀಡಿದೆ. ಇದೇ ವೇಳೆ ಚಾರ್ಲಿಯನ್ನು ತೋರಿಸಿದ ರಕ್ಷಿತ್ ಶೆಟ್ಟಿ, ಮರಿಗಳನ್ನು ತೋರಿಸಿದ್ದಾರೆ.

6 ಮರಿಗಳ ಪೈಕಿ 5 ಹೆಣ್ಣು ನಾಯಿ ಮರಿ ಹಾಗೂ 1 ಗಂಡು ನಾಯಿ ಮರಿ ಎಂದು ರಕ್ಷಿತ್ ಶೆಟ್ಟಿ ಸಂಪೂರ್ಣ ವಿವರ ನೀಡಿದ್ದಾರೆ. ಸದ್ಯ ಚಾರ್ಲಿ ಹಾಗೂ 6 ಮರಿಗಳೂ ಆರೋಗ್ಯವಾಗಿದೆ. ಇದೀಗ ರಕ್ಷಿತ್ ಶೆಟ್ಟಿ ವಿಡಿಯೋ ಭಾರಿ ವೈರಲ್ ಆಗಿದೆ.

2 Comments
  1. […] ಇದನ್ನೂ ಓದಿ: Charlie 777: 6 ಮುದ್ದಾದ ಮರಿಗಳಿಗೆ ಜನ್ಮ ನೀಡಿದ ಚಾರ… […]

Leave A Reply

Your email address will not be published.