Narendra Modi: ಕೋಟ್ಯಂತರ ಮೌಲ್ಯದ ಆಸ್ತಿ ಘೋಷಣೆ ಮಾಡಿದ ಪ್ರಧಾನಿ – ಕಳೆದ ಸಲಕ್ಕಿಂತ ಮೋದಿ ಆಸ್ತಿ ಹೆಚ್ಚಾದದೆಷ್ಟು ?!

Narendra Modi: ಪ್ರಧಾನಿ ನರೇಂದ್ರ ಮೋದಿ ಅವರು 2024 ರ ಲೋಕಸಭೆ ಚುನಾವಣೆಗೆ ಉತ್ತರ ಪ್ರದೇಶದ ವಾರಣಾಸಿ ಲೋಕಸಭಾ ಕ್ಷೇತ್ರದಿಂದ ಇಂದು ಮಂಗಳವಾರ ನಾಮಪತ್ರ ಸಲ್ಲಿಸಲು ಸಜ್ಜಾಗಿದ್ದು, ಮೂರನೇ ಅವಧಿಗೆ ದಾಖಲೆಯ ಅಂತರದಲ್ಲಿ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ. ನಾಮಪತ್ರ ಸಲ್ಲಿಕೆ ವೇಳೆ ಮೋದಿ ತಮ್ಮ ಆಸ್ತಿ ವಿವರ ಘೋಷಿಸಿಕೊಂಡಿದ್ದು, ಅದರಲ್ಲಿನ ಸ್ಥಿರತೆ, ಕೊಂಚ ಬದಲಾವಣೆ, 10 ವರ್ಷಗಳಲ್ಲಿನ ನಿಯತ್ತು, ಪ್ರಾಮಾಣಿಕತೆ ಎಂತವರನ್ನೂ ಬೆರಗು ಮಾಡುತ್ತದೆ. ಹಾಗಿದ್ರೆ ಮೋದಿ ಆಸ್ತಿ ಎಷ್ಟು, ಮೊದಲಿದ್ದದ್ಧು ಎಷ್ಟು, ಈಗ ಎಷ್ಟಿದೆ, ಎಷ್ಟು ಹೆಚ್ಚಾಗಿದೆ ಎಂಬುದನ್ನು ನೋಡಿಬರೋಣ.

ಕಳೆದ ಎಲೆಕ್ಷನ್ ವರ್ಷಕ್ಕೆ ಹೋಲಿಸಿದರೆ, ಪ್ರಧಾನಮಂತ್ರಿ(PM) ನರೇಂದ್ರ ಮೋದಿಯವರ ಆದಾಯ 111% ಆಗಿ ಬೆಳೆದಿದೆ. 2018-19ರ ಆರ್ಥಿಕ ವರ್ಷದಲ್ಲಿ ₹ 11 ಲಕ್ಷದಿಂದ 2022-23 ರಲ್ಲಿ ₹ 23.5 ಲಕ್ಷಕ್ಕೆ ಪಿಎಂ ಮೋದಿಯವರ ಆದಾಯವು ದ್ವಿಗುಣಗೊಂಡಿದೆ ಎಂದು ಮೋದಿಯ ಎಲೆಕ್ಷನ್ ನಾಮಿನೇಷನ್ ಪೇಪರ್‌ಗಳು ತೋರಿಸಿವೆ. ವಾರಣಾಸಿ ಲೋಕಸಭಾ ಕ್ಷೇತ್ರದಿಂದ ಮೂರನೇ ಬಾರಿಗೆ ಇಂದು ಮಂಗಳವಾರ ನಾಮಪತ್ರ ಸಲ್ಲಿಸಿರುವ ಪ್ರಧಾನಿ ನರೇಂದ್ರ ಮೋದಿಯವರು(Narendra Modi) ಒಟ್ಟಾರೆ ₹ 3.02 ಕೋಟಿ ಮೌಲ್ಯದ ಚರಾಸ್ತಿಯನ್ನು ಘೋಷಿಸಿದ್ದಾರೆ. ಆದರೆ ಮೋದಿ ಬಳಿ ಯಾವುದೇ ಕಾರು, ಮನೆ ಅಥವಾ ತುಂಡು ಭೂಮಿ ಕೂಡಾ ಹೊಂದಿಲ್ಲ ಎಂಬ ಮಾಹಿತಿ ಇದೀಗ ಬಹಿರಂಗವಾಗಿದೆ

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸಲ್ಲಿಸಿರುವ ಚುನಾವಣಾ ಅಫಿಡವಿಟ್ ಪ್ರಕಾರ, ಪ್ರಧಾನ ಮಂತ್ರಿಯ ಒಟ್ಟು ಆಸ್ತಿ 3.02 ಕೋಟಿ. ಅದರಲ್ಲಿ ₹2.86 ಕೋಟಿ ಮೌಲ್ಯದ ಸ್ಥಿರ ಠೇವಣಿ ಭಾರತೀಯ ಸ್ಟೇಟ್ ಬ್ಯಾಂಕ್ (SBI), ₹ 80,304 ಅವರ ಗಾಂಧಿನಗರ ಬ್ರಾಂಚಿನಲ್ಲಿ ಇವೆ. ವಾರಣಾಸಿಯ ಎರಡು ಬ್ಯಾಂಕ್ ಖಾತೆಗಳಲ್ಲಿ ಮತ್ತು ₹ ಕೈಯಲ್ಲಿ ಇರೋದು ಕೇವಲ 52,920 ನಗದು. ಅಲ್ಲದೆ ಅವರು ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರಗಳ (NSC) ಉಳಿತಾಯ ಯೋಜನೆಯಲ್ಲಿ ಪ್ರಧಾನಿ ಮೋದಿ ₹ 9.12 ಲಕ್ಷ ಹೂಡಿಕೆ ಮಾಡಿದ್ದಾರೆ. ₹ 2.68 ಲಕ್ಷ ಮೌಲ್ಯದ ನಾಲ್ಕು ಚಿನ್ನದ ಉಂಗುರಗಳನ್ನು ಮೋದಿ ಹೊಂದಿದ್ದಾರೆ ಎಂದು ಎಲೆಕ್ಷನ್ ಅಫಿಡವಿಟ್ ಹೇಳಿದೆ.

ಅಂದಹಾಗೆ 2018-19ರ ಆರ್ಥಿಕ ವರ್ಷದಲ್ಲಿ ₹ 11 ಲಕ್ಷದಿಂದ 2022-23 ರಲ್ಲಿ ₹ 23.5 ಲಕ್ಷಕ್ಕೆ ಪಿಎಂ ಮೋದಿಯವರ ತೆರಿಗೆಯ ಆದಾಯವು ದ್ವಿಗುಣಗೊಂಡಿದೆ ಎಂದು ನಾಮಿನೇಷನ್ ಪೇಪರ್‌ಗಳು ತೋರಿಸಿವೆ.

ಮೋದಿ ಶಿಕ್ಷಣಕ್ಕೆ ಸಂಬಂಧಿಸಿದ ಮಾಹಿತಿ:

ಪ್ರಧಾನ ಮಂತ್ರಿಯವರು 1978 ಯಲ್ಲಿ ದೆಹಲಿ ವಿಶ್ವವಿದ್ಯಾನಿಲಯದಿಂದ ಕಲೆ ಮತ್ತು 1983 ರಲ್ಲಿ ಗುಜರಾತ್ ವಿಶ್ವವಿದ್ಯಾನಿಲಯದಿಂದ ಮಾಸ್ಟರ್ ಆಫ್ ಆರ್ಟ್ಸ್ ಅನ್ನು ಪೂರ್ಣಗೊಳಿಸಿದ್ದಾರೆ. ಅವರ ವಿರುದ್ಧ ಯಾವುದೇ ಕ್ರಿಮಿನಲ್ ಮೊಕದ್ದಮೆಗಳು ಬಾಕಿ ಉಳಿದಿಲ್ಲ.

ಇನ್ನು 2014 ರಲ್ಲಿ ವಾರಣಾಸಿಯಿಂದ(Varanasi) ಮೊದಲ ಬಾರಿಗೆ ಸ್ಪರ್ಧಿಸಿದ್ದ ನರೇಂದ್ರ ಮೋದಿ ಅವರು ಅಲ್ಲಿಂದ ಸತತ ಮೂರನೇ ಅವಧಿಗೆ ಸ್ಪರ್ಧಿಸುತ್ತಿದ್ದಾರೆ. ಅವರು ಕಾಂಗ್ರೆಸ್(Congress)ನ ಯುಪಿ ಘಟಕದ ಅಧ್ಯಕ್ಷ ಅಜಯ್ ರಾಯ್ ವಿರುದ್ಧ ಸ್ಪರ್ಧಿಸಲಿದ್ದಾರೆ. ಗುಜರಾತಿನ ವಾರಣಾಸಿಯ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮೋದಿ ನಾಮಪತ್ರ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಅಮಿತ್ ಶಾ?Amith Shah), ಯುಪಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್(Yogi Adithyanath) ಸೇರಿದಂತೆ ಹಲವು ಎನ್‌ಡಿಎ ನಾಯಕರು ಉಪಸ್ಥಿತರಿದ್ದರು. ಗಂಗಾನದಿಯ ದಡದಲ್ಲಿ ದಶಾಶ್ವಮೇಧ ಘಾಟ್‌ನಲ್ಲಿ ಆರತಿ ಮಾಡಿದ ಪ್ರಧಾನಿ ಮೋದಿಯವರು ನಾಮಪತ್ರ ಸಲ್ಲಿಸುವ ಮೊದಲು ನಗರದ ಕಾಲಭೈರವ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದರು.

2 Comments
  1. […] ಇದನ್ನೂ ಓದಿ: Narendra Modi: ಕೋಟ್ಯಂತರ ಮೌಲ್ಯದ ಆಸ್ತಿ ಘೋಷಣೆ ಮಾಡ… […]

Leave A Reply

Your email address will not be published.