Home Interesting Anant Ambani: ಆನೆಗಳನ್ನು ರಕ್ಷಿಸಲು 3,500 ಕಿ.ಮೀ ಸಂಚರಿಸಿದ ಅನಂತ್ ಅಂಬಾನಿ ತಂಡ : ನೆಟ್ಟಿಗರಿಂದ...

Anant Ambani: ಆನೆಗಳನ್ನು ರಕ್ಷಿಸಲು 3,500 ಕಿ.ಮೀ ಸಂಚರಿಸಿದ ಅನಂತ್ ಅಂಬಾನಿ ತಂಡ : ನೆಟ್ಟಿಗರಿಂದ ಬಾರಿ ಮೆಚ್ಚುಗೆ

Anant Ambani

Hindu neighbor gifts plot of land

Hindu neighbour gifts land to Muslim journalist

Anant Ambani: ರಿಲಯನ್ಸ್ ಮುಖ್ಯಸ್ಥ ಮುಖೇಶ್ ಅಂಬಾನಿ(‍ Mukesh Ambani) ಅವರ ಕಿರಿಯ ಪುತ್ರ ಅನಂತ್ ಅಂಬಾನಿಗೆ(Ananth Ambani) ಪ್ರಾಣಿಗಳ ಮೇಲೆ ಅಪಾರ ಪ್ರೀತಿಹೊಂದಿದ್ದು. ಅವರು ಪ್ರಾಣಿ ಕಲ್ಯಾಣ ಕೇಂದ್ರವನ್ನು ನಡೆಸುತ್ತಿದ್ದಾರೆ. ಗುಜರಾತ್‌ನ ಜಾಮ್‌ ನಗರದಲ್ಲಿ ‘ವಂತರಾ'(Vantara) ಎಂಬ ಹೆಸರಿನ ಪ್ರಾಣಿ ಚಿಕಿತ್ಸಾಲಯವನ್ನು ತೆರೆದಿದ್ದಾರೆ, ಈ ಚಿಕಿತ್ಸಾಲಯದಲ್ಲಿ ಅನಾರೋಗ್ಯದಿಂದ ಬಳಲುತ್ತಿರುವ ಪ್ರಾಣಿಗಳಿಗೆ ಚಿಕಿತ್ಸೆ ನೀಡಲಾಗುತ್ತದೆ. ಈ ಕ್ರಮದಲ್ಲಿ ಇತ್ತೀಚೆಗೆ ಅಸ್ವಸ್ಥಗೊಂಡಿದ್ದ ಆನೆ ಹಾಗೂ ಮಗುವನ್ನು ರಕ್ಷಿಸಲು ‘ವಂತರ'(Vantara) ಸಿಬ್ಬಂದಿ 3500 ಕಿಲೋಮೀಟರ್ ಪ್ರಯಾಣಿಸಿದ ಘಟನೆ ನಡೆದಿದೆ. ಅವರ ಬಗ್ಗೆ ಮಾಹಿತಿ ಪಡೆದ 24 ಗಂಟೆಯೊಳಗೆ ಸ್ಥಳಕ್ಕೆ ಆಗಮಿಸಿದ ಅಂಬಾನಿ ತಂಡ ಚಿಕಿತ್ಸೆ ನೀಡಿ ಗಜರಾಜನ ಪ್ರಾಣ ಉಳಿಸಿದ್ದಾರೆ.

ಇದನ್ನೂ ಓದಿ: Verendra sehavag: 400 ಕೋಟಿ ಲಾಭ ಇದ್ದರು ಹೀಗೆಕೆ ಮಾಡುತ್ತೀರಿ : ಲಕ್ನೋ ಸೂಪರ್ ಜೈಂಟ್ಸ್ ಮಾಲೀಕನ ವಿರುದ್ಧ ಗುಡುಗಿದ ವೀರೆಂದ್ರ ಸೆಹ್ವಾಗ್

ಮುಖೇಶ್ (Mukesh Ambani)ಅವರ ಹಿರಿಯ ಪುತ್ರ ಆಕಾಶ್ ಅಂಬಾನಿ(Akash Ambani) ಟ್ವಿಟರ್ ಮೂಲಕ ತಮ್ಮ ಸಹೋದರನನ್ನು ಹೊಗಳಿದ್ದಾರೆ. ತ್ರಿಪುರಾದ(Tripurar) ಉನಕೋಟಿ ಜಿಲ್ಲೆಯಲ್ಲಿ ಪ್ರತಿಮಾ ಎಂಬ ಆನೆ ಮತ್ತು ಅದರ ಮರಿ ಮಾಣಿಕ್ಲಾಲ್ ಅನಾರೋಗ್ಯದಿಂದ ಬಳಲುತ್ತಿರುವ ಬಗ್ಗೆ ವಂತಾರVan ತಂಡಕ್ಕೆ ಮಾಹಿತಿ ಲಭಿಸಿದ್ದು ಚಿಕಿತ್ಸೆ ನೀಡುವಂತೆ ಮನವಿ ಮಾಡಲಾಗಿತ್ತು. ಸಂಸ್ಥೆಗೆ ಬಂದ ಇ-ಮೇಲ್ ಗೆ ಸ್ಪಂದಿಸಿದ ಸಿಬ್ಬಂದಿ ಕೂಡಲೇ ಉನಕೋಟಿಗೆ ತೆರಳಿದರು. ಅವರು 24 ಗಂಟೆಗಳಲ್ಲಿ 3,500 ಕಿಮೀ ದೂರದ ಪ್ರದೇಶವನ್ನು ತಲುಪಿದರು. ವನತಾರಾ(VanaTaara) ವೈದ್ಯಕೀಯ ತಂಡ ತಕ್ಷಣ ಚಿಕಿತ್ಸೆ ಆರಂಭಿಸಿದೆ. ಔಷಧದ ಜತೆಗೆ ಆಹಾರ ನೀಡಿದ ಬಳಿಕ ಆನೆ ಮತ್ತು ಮರಿ ಚೇತರಿಸಿಕೊಂಡಿವೆ. ಅವುಗಳನ್ನು ಕೆಲವು ದಿನಗಳ ಕಾಲ ಕೈಲಾಶರ್ ಪ್ರದೇಶದಲ್ಲಿ ಇರಿಸಲಾಗಿತ್ತು ಮತ್ತು ನಂತರ ಗುಜರಾತ್‌ಗೆ(Gujarat) ಸ್ಥಳಾಂತರಿಸಲಾಯಿತು.

ಇದನ್ನೂ ಓದಿ: Streaming Plans: ಜಿಯೋ ಸಿಮ್ ಯೂಸ್ ಮಾಡುವವರಿಗೆ ಗುಡ್ ನ್ಯೂಸ್, ಈ ಒಟಿಟಿ ಪ್ಲಾಟ್ ಫಾರ್ಮ್ ಗಳು ಫ್ರೀಯಾಗಿ ನೋಡಬಹುದು!

ತಾಯಿ ಆನೆಯ ದೇಹದ ಮೇಲೆ ಹಲವಾರು ಗಾಯಗಳು ಕಂಡುಬಂದಿವೆ. ಒಂದು ಕಣ್ಣಿಗೂ ಗಾಯಗೊಂಡಿದ್ದು, ಅಹಾರವಿಲ್ಲದೆ ಪರಿತಪಿಸಿದ್ದವು ಎಂದು ವನತಾರಾ ತಂಡದ ವೈದ್ಯರು ತಿಳಿಸಿದ್ದಾರೆ.