Mumbai Dust Storm: ಮುಂಬಯಿನಲ್ಲಿ ಮಳೆ, ಗಾಳಿಗೆ ಉರುಳಿದ ಬೃಹತ್ ಹೋರ್ಡಿಂಗ್, 8 ಸಾವು

Mumbai Dust Storm: ನಗರದಲ್ಲಿ ಸೋಮವಾರ ಬಿರುಗಾಳಿ ಸಹಿತ ಭಾರಿ ಮಳೆಗೆ ಜನಜೀವನ ಅಸ್ತವ್ಯಸ್ಥಗೊಂಡಿತು. ಘಾಟ್ಕೋಪರ್ ಪ್ರದೇಶದಲ್ಲಿ ಬೃಹತ್ ಜಾಹೀರಾತು ಫಲಕವೊಂದು(ಹೋರ್ಡಿಂಗ್) ಕುಸಿದು ಎಂಟು ಮೃತಪಟ್ಟಿದ್ದು, 60 ಮಂದಿ ಗಾಯಗೊಂಡಿದ್ದಾರೆ. ಸಂಕಟಕ್ಕೆ ಸಿಲುಕಿರುವವರನ್ನು ಪಾರು ಮಾಡಲು ಎನ್‌ಡಿಆ‌ರ್.ಎಫ್ ಕಾರ್ಯಾಚರಣೆ ನಡೆಸಿತು. ಅಗ್ನಿಶಾಮಕ ಸಿಬ್ಬಂದಿ ಕೂಡ ಕಾರ್ಯನಿರತರಾದರು.

ಇದನ್ನೂ ಓದಿ: Prajwal Revanna Case: ‘ಅಮ್ಮನನ್ನು ರೇಪ್ ಮಾಡಿ, ನನ್ನ ಬಟ್ಟೆ ಬಿಚ್ಚಿಸ್ತಿದ್ರು’ – ಪ್ರಜ್ವಲ್ ದೌರ್ಜನ್ಯದ ಭಯಾನಕ ಘಟನೆ ಬಿಚ್ಚಿಟ್ಟ ಸಂತ್ರಸ್ತೆ!!

ಧೂಳು ಮತ್ತು ಮಳೆಯಿಂದ ವಾಹನ ಸಂಚಾರದಲ್ಲೂ ಭಾರಿ ವ್ಯತ್ಯಯ ಉಂಟಾಯಿತು. ದಾದರ್, ಕುರ್ಲಾ, ಮಹಿಮ್, ಘಾಟ್ ಕೋಪರ್‌ಗಳಲ್ಲಿ ಹೆಚ್ಚು ಹಾನಿಯಾಗಿದೆ. ವಡದಲದಲ್ಲಿ ಕಾರೊಂದು ತಲೆಕೆಳಗಾಗಿ ಬಿದ್ದಿತ್ತು. ಅದನ್ನು ಎತ್ತುವಾಗ ಮತ್ತೆ ಬಿದ್ದು ಕೆಲವರಿಗೆ ಗಾಯಗಳಾಗಿದೆ.

ಇದನ್ನೂ ಓದಿ: Health Care: ಯಾವುದೇ ಕಾರಣಕ್ಕೂ ಈ ಪದಾರ್ಥಗಳನ್ನು ರಾತ್ರಿಯಿಡೀ ಫ್ರಿಡ್ಜ್ ನಲ್ಲಿ ಇಡಬೇಡಿ, ಇಲ್ಲಿದೆ ನೋಡಿ ಟಿಪ್ಸ್

ಏಕಾಏಕಿಯಾಗಿ ಗಾಳಿ ಸಹಿತ ಮಳೆ ಕಾಣಿಸಿಕೊಂಡಿದ್ದರಿಂದ ರೈಲು ಸಂಚಾರ, ವಿಮಾನ ಸಂಚಾರದಲ್ಲೂ ಭಾರಿ ವ್ಯತ್ಯಯ ಉಂಟಾಯಿತು. ಕಡಿಮೆ ಗೋಚರತೆ ಇದ್ದ ಕಾರಣ ವಿಮಾನಗಳ ದಿಕ್ಕನ್ನು ಬದಲಿಸಲಾಯಿತು. 25ಕ್ಕೂ ಹೆಚ್ಚು ವಿಮಾನಗಳ ಹಾರಾಟವನ್ನು ತಾತ್ಕಾಲಿಕವಾಗಿ ರದ್ದುಗೊಳಿಸಲಾಯಿತು.

Leave A Reply

Your email address will not be published.