Prajwal Revanna Video: ನನ್ನ ಯಾರೂ ಕಿಡ್ನ್ಯಾಪ್‌ ಮಾಡಿಲ್ಲ- ಸಂತ್ರಸ್ತೆ ಮಹಿಳೆ ವಿಡಿಯೋ ವೈರಲ್ ‌

Share the Article

Prajwal Revanna Video: ಹಾಸನ ಪ್ರಜ್ವಲ್‌ ರೇವಣ್ಣ ಪ್ರಕರಣದಲ್ಲಿ ಇದೀಗ ಮಹತ್ವದ ಮಾಹಿತಿಯ ಪ್ರಕಾರ, ಈ ಪ್ರಕರಣದ ಅಪಹರಣ ಮಾಡಿದ ಸಂತ್ರಸ್ತೆಯದ್ದು ಎನ್ನಲಾದ ಮಹಿಳೆಯ ವೀಡಿಯೋ ಇದೀಗ ಭಾರೀ ವೈರಲ್‌ ಆಗಿದ್ದು, ವಿಡಿಯೋದಲ್ಲಿ ” ನನ್ನನ್ನು ಯಾರೂ ಕಿಡ್ನಾಪ್‌ ಮಾಡಿಲ್ಲ. ನಾನು ನಮ್ಮ ಊರಿಗೆ ನಾಲ್ಕು ದಿನ ಕಳೆದು ಬರಲು ಊರಿಗೆ ಹೋಗಿದ್ದೆ. ಆದರೆ ಊರಿಗೆ ಬರುವುದರೊಳಗೆ ಏನೇನೋ ವಿಡಿಯೋ ಮಾಡಿದ್ದಾರೆ” ಎಂದು ಹೇಳಿದ್ದಾರೆ.

ಇದನ್ನೂ ಓದಿ: Exam Postponed: ಪ್ರಾಯೋಗಿಕ ಪರೀಕ್ಷೆ ಮುಂದಕ್ಕೆ

ಸುಮಾರು 2 ನಿಮಿಷ 32 ಸೆಕೆಂಡ್‌ ಇರುವ ಈ ವಿಡಿಯೋದಲ್ಲಿ ಹೇಳಿದ್ದೇನೆಂದರೆ, ಊರಿನ ಜನರು ಏನೇನೋ ಮಾತನಾಡೋದನ್ನ ಕೇಳಿ ಬೇಸರವಾಗಿದ್ದು, ನೆಂಟರ ಮನೆಗೆಂದು ಬಂದಿದ್ದೆ. ಆದರೆ ಇಂದು ಟಿವಿ ನೋಡಿದಾಗ ತಿಳಿಯಿತು. ಈ ರೀತಿ ಮಾಡಿದ್ದಾರೆಂದು. ಯಾಕಪ್ಪ ಹೀಗೆ ಮಾಡಿದ್ರಿ ಎಂದು ಯೋಚನೆ ಬಂತು. ಆದರೆ ನನಗೆ ಯಾವುದೇ ತೊಂದರೆ ಆಗಿಲ್ಲ. ಯಾರೂ ಅಪಹರಿಸಿಲ್ಲ. ಯಾಕೆ ಈ ರೀತಿ ಮಾಡ್ತಾ ಇದ್ದಾರೆ? ನಮಗೆ ಭವಾನಿ ಅಕ್ಕ ಆಗಲಿ, ರೇವಣ್ಣ, ಪ್ರಜ್ವಲ್‌, ಬಾಬಣ್ಣ ಅವರಿಂದ ಯಾವುದೇ ತೊಂದರೆ ಆಗಿಲ್ಲ. ನಮ್ಮನ್ನು ಚೆನ್ನಾಗಿ ನೋಡಿಕೊಂಡು ಕಳಿಸಿದ್ದಾರೆ ಎಂದಿದ್ದಾರೆ.

ಇದನ್ನೂ ಓದಿ: Crime: ಉದ್ಯಾನದಲ್ಲಿ ಕುಳಿತಿದ್ದ ಪ್ರೇಮಿಗಳ ಮೇಲೆ ಅನ್ಯಕೋಮಿನ ಯುವಕರಿಂದ ಹಲ್ಲೆ

ಮೊಬೈಲ್‌ ಆಗಲಿ, ಅದಕ್ಕೂ ನಮಗೂ ಯಾವುದೇ ರೀತಿಯ ಸಂಬಂಧ ಇಲ್ಲ. ನನ್ನ ಯಾರೂ ಕಿಡ್ನಾಪ್‌ ಮಾಡಿಲ್ಲ. ಎರಡು ದಿನದಲ್ಲಿ ಬರ್ತೇನೆ. ಯಾರು ಏನೇ ಅಂದರೂ ತಲೆಗೆ ಹಾಕೋಬೇಡಿ. ಆರಾಮವಾಗಿರಿ. ನಾನು ಸುರಕ್ಷಿತವಾಗಿದ್ದೀನಿ. ಪೊಲೀಸರನ್ನು ಮನೆಗೆ ಕಳುಹಿಸಿ ಟಾರ್ಚರ್‌ ಕೊಡಬೇಡಿ. ಮಕ್ಕಳು ಮರಿ ಇರ್ತಾರೆ. ಭಯ ಪಡುತ್ತಾರೆ. ನಾವು ಕೂಲಿ ಮಾಡಿ ಜೀವನ ಮಾಡುವವರು. ನಮ್ಮ ಹೊಟ್ಟೆಮೇಲೆ ಹೊಡೀಬೇಡಿ.

ನನಗೆ ಯಾರಿಂದ ತೊಂದರೆ ಆಗಿಲ್ಲ. ಏನಾದರೂ ತೊಂದರೆ ಆದರೆ ನಾನೇ ಹೇಳುತ್ತೇನೆ. ನೀವು ತೊಂದರೆ ಕೊಟ್ಟರೆ ನನಗೆ ಹಾಗೂ ಗಂಡನಿಗೆ ಏನಾದರೂ ಆದರೆ ನೀವೇ ಜವಾಬ್ದಾರಿ ಆಗಬೇಕಾಗುತ್ತದೆ ಎಂದು ಪೊಲೀಸರ ಮೇಲೆ ಹರಿಹಾಯ್ದಿದ್ದಾರೆ ಮಹಿಳೆ.

Leave A Reply