Health Tips: ಈ ಆಹಾರಗಳನ್ನು ಸೇವಿಸುವುದರಿಂದ ರಕ್ತದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆಯಾಗುತ್ತೆ : ಆ ಆಹಾರಗಳು ಯಾವುವು ಗೊತ್ತಾ?

Health Tips- bad cholesterol: ನಮ್ಮ ದೇಹವನ್ನು ಎಷ್ಟು ಆರೋಗ್ಯಯುತವಾಗಿ ಕಾಪಾಡಿಕೊಳ್ಳುತ್ತೇವೆಯೋ ಅಷ್ಟು ದಿನ ನೆಮ್ಮದಿಯಾಗಿ ಜೀವಿಸಬಹುದು. ಒಂದು ವೇಳೆ ನಮ್ಮ ದೇಹದಲ್ಲಿ ಸಣ್ಣ ಏರುಪೇರಾದರೂ ಸಹ ಇಡೀ ದೇಹ ಅದಕ್ಕೆ ಪ್ರತಿಕ್ರಿಸುತ್ತದೆ. ಅದರಲ್ಲೂ ರಕ್ತದಲ್ಲಿ ಕೊಲೆಸ್ಟ್ರಾಲ್(bad cholesterol) ನಂತಹ ಕಾಯಿಲೆಗಳು ನಮ್ಮ ಜೀವಕ್ಕೆ ಕುತ್ತಾಗಿ ಪರಿಣಮಿಸುತ್ತವೆ. ಹಾಗಾದರೆ ಇದಕ್ಕೆ ಚಿಕಿತ್ಸೆ ಇಲ್ಲವಾ ಎಂದರೆ ಖಂಡಿತ ಇದೆ. ಸಾಮಾನ್ಯವಾಗಿ ಕೊಲೆಸ್ಟ್ರಾಲ್ನಲ್ಲಿ ಎರಡು ವಿಧಗಳಿವೆ. ಒಂದು ಒಳ್ಳೆಯ ಕೊಲೆಸ್ಟ್ರಾಲ್ ಮತ್ತು ಇನ್ನೊಂದು ಕೆಟ್ಟ ಕೊಲೆಸ್ಟ್ರಾಲ್(bad cholesterol), ಕೆಟ್ಟ ಕೊಲೆಸ್ಟ್ರಾಲ್ ಅನ್ನು ಎಲ್ಲಿಲ್ ಎಂದು ಕರೆಯಲಾಗುತ್ತದೆ. ಇದು -ರಕ್ತನಾಳಗಳಲ್ಲಿ ರಕ್ತ ಸಂಚಾರವನ್ನು( blood flow) ತಡೆಯುತ್ತದೆ ಮತ್ತು ಹೃದಯಕ್ಕೆ ರಕ್ತವನ್ನು(blood) ತಲುಪದಂತೆ ಮಾಡುತ್ತದೆ.

ಇದನ್ನೂ ಓದಿ: Abdu Rozik marriage: ಕೋಟ್ಯಧಿಪತಿ ಬಿಗ್‌ಬಾಸ್‌ ಖ್ಯಾತಿ ಅಬ್ದು ಮದುವೆಯಂತೆ! ಅದೃಷ್ಟವಂತ ಹುಡುಗಿ ಯಾರು ಗೊತ್ತೇ?

ಇದರಿಂದಾಗಿ ಹೃದಯಾಘಾತ(Heart attack) ಮತ್ತು ಪಾರ್ಶ್ವವಾಯುಗಳಂತಹ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಬೆಳಗಿನ ಉಪಾಹಾರದಲ್ಲಿ(Tiffin) ಉತ್ತಮವಾದ ಆಹಾರವನ್ನು ತೆಗೆದುಕೊಳ್ಳಬೇಕು. ಏಕೆಂದರೆ ನಾವು ರಾತ್ರಿಯಿಡೀ ಏನನ್ನೂ ತಿನ್ನುವುದಿಲ್ಲ. ಆದ್ದರಿಂದ ಬೆಳಗಿನ ಸಮಯದಲ್ಲಿ ಹೊಟ್ಟೆ ಖಾಲಿಯಾಗಿರುತ್ತದೆ. ಈ ಸಮಯದಲ್ಲಿ ಉತ್ತಮ ಆಹಾರ ಸೇವಿಸಿದರೆ ಪೋಷಕಾಂಶಗಳು ದೇಹಕ್ಕೆ ಬೇಗ ಹೀರಲ್ಪಡುತ್ತವೆ.

ಇದನ್ನೂ ಓದಿ: Curd Tips: ಮೊಸರನ್ನು ಈ ಆಹಾರದೊಂದಿಗೆ ಯಾವುದೇ ಕಾರಣಕ್ಕೂ ತಿನ್ನಬೇಡಿ, ಅಪಾಯ ಖಂಡಿತ!

ಅದಕ್ಕಾಗಿ ಯಾವ ಆಹಾರಗಳನ್ನು ತೆಗೆದುಕೊಳ್ಳಬೇಕೆಂದು ತಿಳಿಯಿರಿ.

ಓಟ್ಸ್ : ಓಟ್ಸ್(oat) ಫೈಬರ್‌ನ( Fiber) ಉತ್ತಮ ಮೂಲವಾಗಿದೆ. ಫೈಬರ್ ಕೊಲೆಸ್ಟ್ರಾಲ್(bad cholesterol) ಅನ್ನು ಕರಗಿಸುತ್ತದೆ ಮತ್ತು ಅದನ್ನು ಹೊರಹಾಕುತ್ತದೆ. ಇದಕ್ಕೆ ನಾರಿನಂಶ ಸೇವಿಸುವುದರಿಂದ ಹೃದಯಕ್ಕೆ ಒಳ್ಳೆಯದು. ಓಟ್ಸ್ ಅನ್ನು ಹಲವು ವಿಧಗಳಲ್ಲಿ ತೆಗೆದುಕೊಳ್ಳಬಹುದಾಗಿದೆ. ಇನ್ನು ಮಸಾಲಾ ಓಟ್ಸ್ ಅನ್ನು ಹಾಲಿನೊಂದಿಗೆ ತೆಗೆದುಕೊಳ್ಳಬಹುದು.

ಸಾಲ್ಮನ್ ಮೀನು : ಸಾಲ್ಮನ್ ಮೀನುಗಳಲ್ಲಿ(Salman fish) ಒಮೆಗಾ 3(Omega 3)ಕೊಬ್ಬಿನಾಮ್ಲಗಳು ಅಧಿಕವಾಗಿರುತ್ತವೆ. ಇದು ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುವ ಆರೋಗ್ಯಕರ ಕೊಬ್ಬನ್ನು ಹೊಂದಿರುತ್ತದೆ. ಇದರೊಂದಿಗೆ ದೇಹದಲ್ಲಿ ಟ್ರೈಗ್ಲಿಸರೈಡ್‌ಗಳ ಮಟ್ಟವು ಕಡಿಮೆಯಾಗುತ್ತದೆ.

ಮೊಟ್ಟೆಗಳೊಂದಿಗೆ ಸೊಪ್ಪುಗಳು : ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಹಳದಿ ಲೋಳೆಯೊಂದಿಗೆ(egg), ಪಾಲಕ್ ನಂತಹ ಫೈಬರ್ ಭರಿತ ಆಹಾರಗಳೊಂದಿಗೆ ಸೇವಿಸಿ. ಫೈಬರ್ ಸಮೃದ್ಧವಾಗಿರುವ ಪ್ರೋಟೀನ್(Protein) ಅನ್ನು ತಿನ್ನುವುದು ನಿಮ್ಮ ಕೊಲೆಸ್ಟ್ರಾಲ್ (Cholesterol) ಅನ್ನು ಕರಗಿಸುತ್ತದೆ. ಈ ಉಪಹಾರದಲ್ಲಿ ಪ್ರೋಟೀನ್ ಮತ್ತು ಫೈಬರ್ ಸಮೃದ್ಧವಾಗಿದೆ.

ನೆನೆಸಿದ ಬಾದಾಮಿ : ಬಾದಾಮಿಯನ್ನು(Almond) ನೆನೆಸಿ ತಿನ್ನುವುದು ಉತ್ತಮ. ಹಾರ್ವರ್ಡ್ ವಿಶ್ವವಿದ್ಯಾನಿಲಯದ ಪ್ರಕಾರ, ಪ್ರತಿದಿನ ಬಾದಾಮಿ ತಿನ್ನುವುದರಿಂದ ಕೆಟ್ಟ ಕೊಲೆಸ್ಟ್ರಾಲ್(Bad cholesterol) ಅನ್ನು ಶೇಕಡಾ 5.ರಷ್ಟು ಕಡಿಮೆ ಮಾಡಬಹುದು. ಇವುಗಳ ಹಾಲನ್ನು ಸೇವಿಸುವುದರಿಂದ ರಕ್ತದಲ್ಲಿನ ಕಲ್ಮಶಗಳೂ ಕಡಿಮೆಯಾಗುತ್ತವೆ. ಪ್ರತಿದಿನ ರಾತ್ರಿ ಬಾದಾಮಿಯನ್ನು(Almond) ನೆನೆಸಿ ಬೆಳಗ್ಗೆ ತಿಂದರೆ ಕೊಲೆಸ್ಟ್ರಾಲ್(Bad cholesterol) ಕಡಿಮೆಯಾಗುವುದು ಖಂಡಿತ.

ಕಿತ್ತಳೆ : ಕಿತ್ತಳೆಯಲ್ಲಿ(Orange) ವಿಟಮಿನ್ ಸಿ(Vitamin c)ಅಧಿಕವಾಗಿದೆ. ಇದು ಫೈಟೊಸ್ಟೆರಾಲ್ ಅನ್ನು ಹೊಂದಿರುತ್ತದೆ. ಇದು ಕಡಿಮೆ ಸಾಂದ್ರತೆಯ ಲಿಪೊಪ್ರೋಟೀನ್ ಅನ್ನು 7.5 ರಿಂದ 12 ಪ್ರತಿಶತದಷ್ಟು ಕಡಿಮೆ ಮಾಡುತ್ತದೆ. ಇದರಲ್ಲಿ ಫೈಬರ್ ಕೂಡ ಇದೆ. ಆದ್ದರಿಂದ, ನಿಮ್ಮ ಆಹಾರದಲ್ಲಿ ಕಿತ್ತಳೆ ಮತ್ತು ನಿಂಬೆಹಣ್ಣಿನಂತಹ ಹಣ್ಣುಗಳನ್ನು ಸೇರಿಸಿ.

ಪನೀರ್ : ಹಾಲಿನಿಂದ ತಯಾರಿಸಿದ ಪನೀರ್(Panir) ಸೇವನೆಯು ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ. ಇವುಗಳನ್ನು ಕರಿಬೇವಿನಂತೆ ಬೇಯಿಸಿ ತಿನ್ನಬಹುದು. ಅಥವಾ ಇದನ್ನು ಚಪಾತಿ(Chapati) ಹಿಟ್ಟಿನೊಂದಿಗೆ ಬೆರೆಸಿ ಪರಾಠಾಗಳಾಗಿ(Parata) ಮಾಡಬಹುದು.

6 Comments
  1. MichaelLiemo says

    ventolin 90: Buy Albuterol inhaler online – ventolin tablet 4mg
    ventolin discount

  2. MichaelLiemo says

    ventolin cost in canada: Ventolin inhaler – ventolin inhaler
    ventolin over the counter singapore

  3. Josephquees says

    prednisone 4mg: buy prednisone tablets online – 1 mg prednisone daily

  4. Josephquees says

    Semaglutide pharmacy price: buy rybelsus – Buy semaglutide pills

  5. Timothydub says

    mexican mail order pharmacies: medication from mexico – mexican online pharmacies prescription drugs

  6. Timothydub says

    indian pharmacy online: Indian pharmacy international shipping – reputable indian online pharmacy

Leave A Reply

Your email address will not be published.