ATM Rules: ಯಾವುದೇ ಚಾರ್ಜ್ ಇಲ್ಲದೇ ಎಟಿಎಂನಿಂದ ಹಣ ಡ್ರಾ ಹೇಗೆ ಸಾಧ್ಯ ಗೊತ್ತಾ?

ATM Rules: ವೇಗವಾಗಿ ಓಡುತ್ತಿರುವ ಲೈಫ್ ಸ್ಟೈಲ್ ನಲ್ಲಿ ಹಣ ಡ್ರಾ ಮಾಡಲು ಬ್ಯಾಂಕ್ ಲೈನ್‌ಗಳಲ್ಲಿ ಗಂಟೆಗಟ್ಟಲೆ ಕಾಯುವಷ್ಟು ತಾಳ್ಮೆ ಯಾರಿಗೂ ಇರುವುದಿಲ್ಲ. ಅದಲ್ಲದೆ ಇತ್ತೀಚೆಗೆ ಇ-ಬ್ಯಾಂಕಿಂಗ್‌ನಂತೆ ಎಟಿಎಂಗಳು ಕೂಡಾ ಹೆಚ್ಚು ಚಾಲ್ತಿಯಲ್ಲಿದೆ. ಮುಖ್ಯವಾಗಿ ಇಂದಿಗೂ ಹಣದ ಅಗತ್ಯವಿರುವ ಕೆಲವು ಸ್ಥಳಗಳಿರುವಾಗ, ಆನ್‌ಲೈನ್ ವಹಿವಾಟು ಸಾಧ್ಯವಾಗದಿರುವಲ್ಲಿ, ಅನೇಕ ಜನರು ಎಟಿಎಂ ಹುಡುಕಿಕೊಂಡು ಹೋಗುವುದು ಅನಿವಾರ್ಯ. ಆದ್ರೆ ಎಟಿಎಂ ಬಳಸುವ ಕೆಲವು ನಿಯಮಗಳು (ATM Rules) ಅನೇಕರಿಗೆ ತಿಳಿದಿಲ್ಲ. ಅಂತವರಿಗೆ ಇಲ್ಲಿದೆ ಎಟಿಎಂ ನ ಸಂಪೂರ್ಣ ಮಾಹಿತಿ.

ಇದನ್ನೂ ಓದಿ: Chattisghar : ‘ಓಯೋ’ ಬಂದ್ ಮಾಡಿಸಿದ BJP ಶಾಸಕ – ರೊಚ್ಚಿಗೆದ್ದು MLA ಕಛೇರಿ ಮುಂದೆಯೇ ಆಟ ಶುರುಮಾಡಿದ ಜೋಡಿ !!

ನೀವು ಎಟಿಎಂನಿಂದ ದಿನಕ್ಕೆ ಹಲವಾರು ಬಾರಿ ಹಣ ಹಿಂಪಡೆಯಬಹುದಾದರೂ, ಒಂದು ನಿರ್ದಿಷ್ಟ ಮಿತಿ ಇದೆ. ಆದರೆ ಇದು ಬ್ಯಾಂಕ್‌ನಿಂದ ಬ್ಯಾಂಕ್‌ಗೆ ಬದಲಾಗುತ್ತದೆ. ಇದು ವಿಭಿನ್ನ ಬ್ಯಾಂಕಿನ ಸ್ವಂತ ನಿಯಮವನ್ನು ಅವಲಂಬಿಸಿರುತ್ತದೆ.

ಇದನ್ನೂ ಓದಿ: Guest Lecturer Suicide: ಅತಿಥಿ ಉಪನ್ಯಾಸಕಿ ಆತ್ಮಹತ್ಯೆಗೆ ಬಿಗ್‌ ಟ್ವಿಸ್ಟ್‌;

ಹೌದು, ಒಂದು ದಿನದಲ್ಲಿ ಹಿಂಪಡೆಯಬಹುದಾದ ನಿಖರವಾದ ಹಣದ ಮೊತ್ತವನ್ನು ಸಹ ಬ್ಯಾಂಕ್ ನಿರ್ದಿಷ್ಟಪಡಿಸುತ್ತದೆ. ಒಂದು ದಿನದಲ್ಲಿ ಬ್ಯಾಂಕ್ ಗರಿಷ್ಠ 10,000 ರೂಪಾಯಿಗಳನ್ನು ಹಿಂಪಡೆಯಬಹುದು. ಆದರೆ ಬೇರೆಡೆ ಗರಿಷ್ಠ 25,000 ರೂಪಾಯಿಗಳನ್ನು ಹಿಂಪಡೆಯಬಹುದು. ನೀವು ಯಾವುದೇ ಬ್ಯಾಂಕ್‌ನಿಂದ 50 ಸಾವಿರ ರೂಪಾಯಿಗಳವರೆಗೆ ಹಿಂಪಡೆಯಬಹುದು.

ಭಾರತೀಯ ರಿಸರ್ವ್ ಬ್ಯಾಂಕ್ ಮಾರ್ಗಸೂಚಿಗಳ ಪ್ರಕಾರ, ನೀವು ಯಾವುದೇ ಬ್ಯಾಂಕಿನ ಎಟಿಎಂನಿಂದ ತಿಂಗಳಿಗೆ ಗರಿಷ್ಠ 5 ಉಚಿತ ವಿತ್ ಡ್ರಾಗಳನ್ನು ಮಾಡಬಹುದು. ಆದರೆ ಅದಕ್ಕಿಂತ ಹೆಚ್ಚು ಹಣವನ್ನು ಹಿಂಪಡೆಯಲು, ಪ್ರತಿ ಬಾರಿ ಹಣವನ್ನು ಹಿಂಪಡೆಯಲು ಗರಿಷ್ಠ 21 ರೂಪಾಯಿಗಳಿಗೆ ಶುಲ್ಕವನ್ನು ಕಡಿಮೆ ಮಾಡಲಾಗುತ್ತದೆ. ಆದರೆ ಈ ಶುಲ್ಕವು ಬ್ಯಾಂಕ್‌ನಿಂದ ಬ್ಯಾಂಕ್‌ಗೆ ಬದಲಾಗುತ್ತದೆ.

Leave A Reply

Your email address will not be published.