Kawasaki ninja 400: ಇತಿಹಾಸದ ಪುಟ ಸೇರಿದ ರೈಡರ್ಗಳ ನೆಚ್ಚಿನ ಬೈಕ್ ಕವಾಸಕಿ ನಿಂಜಾ 400 : ಭಾರತ ಸೇರಿದಂತೆ ವಿಶ್ವದಾದ್ಯಂತ ಮಾರಾಟ ನಿಲ್ಲಿಸಿದ ಕಂಪನಿ

kawasaki ninja 400: ನೀವು ಕವಾಸಕಿ ನಿಂಜಾ 400(kawasaki ninja 400) ಬೈಕ್ ಖರೀದಿಸುವ ಕನಸು ಕಾಣುತ್ತಿದ್ದರೆ, ನಿಮಗೊಂದು ಕೆಟ್ಟ ಸುದ್ದಿಯಿದೆ. ಈ ಅದ್ಭುತ ನಿಂಜಾ 400(kawasaki ninja 400) ಬೈಕ್  ಇನ್ನು ಮುಂದೆ ಭಾರತದಲ್ಲಿ ತನ್ನ ಮಾರಾಟವನ್ನು ಸಂಪೂರ್ಣವಾಗಿ ನಿಲ್ಲಿಸಲಿದೆ. ಕಂಪನಿಯು ಅದರ ಉತ್ಪಾದನೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿದೆ ಮತ್ತು ಅದರ ಬದಲಿಗೆ ಅದಕ್ಕಿಂತಲೂ  ಹೆಚ್ಚು ಶಕ್ತಿಶಾಲಿಯಾದ ನಿಂಜಾ 500(kawasaki ninja 500) ಅನ್ನು ಬೈಕ್ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ.

ಕವಾಸಕಿ ಭಾರತದಲ್ಲಿ ತನ್ನ ಜನಪ್ರಿಯ ಮೋಟಾರ್‌ ಬೈಕ್ ಗಳಲ್ಲಿ ಒಂದನ್ನು ಸ್ಥಗಿತಗೊಳಿಸಿದೆ. ಕವಾಸಕಿ ನಿಂಜಾ ಇನ್ನು ಮುಂದೆ ದೇಶದಲ್ಲಿ ಮಾರಾಟಕ್ಕೆ ಲಭ್ಯವಿರುವುದಿಲ್ಲ ಎಂದು ದು ಕಂಪನಿ ಘೋಷಿಸಿದೆ. ನಿಂಜಾ 500 ಬಿಡುಗಡೆಯಾದ ಕೆಲವೇ ತಿಂಗಳುಗಳ ನಂತರ ಕಂಪನಿಯು ನಿಂಜಾ 400(kawasaki ninja 400) ಅನ್ನು ನಿಲ್ಲಿಸಲು ನಿರ್ಧರಿಸಿದೆ. ನಿಂಜಾ 400(kawasaki ninja 400) ಅನ್ನು ಕೊನೆಯದಾಗಿ 5.24 ಲಕ್ಷ ರೂ. (ಎಕ್ಸ್ ಶೋರೂಮ್) ಗೆ ನಿಗದಿಪಡಿಸಲಾಗಿದೆ, ಇದು ನಿಂಜಾ 500(kawasaki ninja 500) ನಂತೆಯೇ ಇದೆ. ಭಾರತದಲ್ಲಿ CBU ಮತ್ತು ನಿಂಜಾ 300(kawasaki ninja 300) ರ ಉತ್ತರಾಧಿಕಾರಿಯಾಗಿದ್ದು ಇದು ಪ್ರಸ್ತುತ ದೇಶದಲ್ಲಿ ಮಾರಾಟಕ್ಕೆ ಲಭ್ಯವಿದೆ.

ಕವಾಸಕಿ ನಿಂಜಾ 400 ಏಕೆ ಸ್ಥಗಿತಗೊಂಡಿತು?

ಕೆಲವು ಸಮಯದ ಹಿಂದೆ ಪರಿಚಯಿಸಲಾದ ಕವಾಸಕಿ ನಿಂಜಾ 400 ಅನ್ನು ಹಳೆಯ ನಿಂಜಾ 300 ಬದಲಿಗೆ ತರಲಾಗಿದೆ. ಆದರೆ, ನಿಂಜಾ 300 ಅನ್ನು ಭಾರತದಲ್ಲಿ ಮಾತ್ರ ತಯಾರಿಸಲಾಗುತ್ತದೆ, ಇದರಿಂದಾಗಿ ಅದರ ಬೆಲೆ ಸಾಕಷ್ಟು ಕಡಿಮೆಯಾಗಿದೆ. ಅದೇ ಸಮಯದಲ್ಲಿ ಕವಾಸಕಿ ನಿಂಜಾ 400(kawasaki ninja 400) ಮತ್ತು ಹೊಸ ನಿಂಜಾ 500 ಅನ್ನು ವಿದೇಶದಿಂದ ತರಿಸಲಾಗುತ್ತದೆ. ಆದ್ದರಿಂದ ಅವುಗಳ ಮೇಲೆ ಇಂಪೋರ್ಟ್ ಡ್ಯೂಟಿ ಚಾರ್ಜಸ್(Import duty charges)ಹಾಕುವುದರಿಂದ ಸ್ವಲ್ಪ ದುಬಾರಿಯಾಗಿರುತ್ತವೆ.

ಇದನ್ನೂ ಓದಿ: Actor Chiranjeevi: ಚುನಾವಣಾ ಸಮಯದಲ್ಲಿ ಪವನ್ ಕಲ್ಯಾಣ್ ಬಗ್ಗೆ ಚಿರಂಜೀವಿ ಸೆನ್ಸೇಷನಲ್ ಕಾಮೆಂಟ್! ಏನು ಗೊತ್ತಾ?

ಆದರೆ ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಎರಡೂ ಬೈಕ್‌ಗಳ ಬೆಲೆ ಬಹುತೇಕ ಒಂದೇ ಆಗಿತ್ತು. ಈ ಕಾರಣಕ್ಕಾಗಿ ಕಂಪನಿಯು ಕವಾಸಕಿ ನಿಂಜಾ 400 ಅನ್ನು ನಿಲ್ಲಿಸಲು ನಿರ್ಧರಿಸಿದೆ. ಕವಾಸಕಿ ನಿಂಜಾ 400 ಇನ್ನು ಮುಂದೆ ವಿಶ್ವಾದ್ಯಂತ ಎಲ್ಲಿಯೂ ಸಹ ಲಭ್ಯವಿರುವುದಿಲ್ಲ. ಕವಾಸಕಿ ನಿಂಜಾ 400 ಅನ್ನು ಸ್ಥಗಿತಗೊಳಿಸುವುದಾಗಿ ಘೋಷಿಸಿದಾಗ, ಅದರ ಉಳಿದ ಸ್ಟಾಕ್ ಅನ್ನು ತ್ವರಿತವಾಗಿ ಮಾರಾಟ ಮಾಡಲು ಕಂಪನಿಯು ಉತ್ತಮ ರಿಯಾಯಿತಿಗಳನ್ನು ನೀಡಿದೆ.

ಕವಾಸಕಿ ನಿಂಜಾ 400 ಮತ್ತು ನಿಂಜಾ 500 ನಡುವಿನ ವ್ಯತ್ಯಾಸ :

ಕವಾಸಕಿ ನಿಂಜಾ 400cc(kawasaki ninja 400) ಗಿಂತ ಸ್ವಲ್ಪ ಕಡಿಮೆ ಅಂದರೆ 399 CC ಎಂಜಿನ್ ಹೊಂದಿತ್ತು ಈ ಎಂಜಿನ್ ಹೆಚ್ಚಿನ ವೇಗದಲ್ಲಿ (10,000 rpm ನಲ್ಲಿ) 44 ಹಾರ್ಸ್ ಪವರ್ ಶಕ್ತಿಯನ್ನು ನೀಡುತಿತ್ತು. ಅಲ್ಲದೆ, ವೇಗವನ್ನು ಹೆಚ್ಚಿಸುವಾಗ (8,000 rpm ನಲ್ಲಿ), ಇದು 37 ನ್ಯೂಟನ್ ಮೀಟರ್‌ಗಳ ಟಾರ್ಕ್ ಅನ್ನು ನೀಡಿತಿತ್ತು. ಈ ಎಂಜಿನ್ ವಿಶೇಷ ಗೇರ್  ಬಾಕ್ಸ್ ಹೊಂದಿತ್ತು.

ಹೊಸ ನಿಂಜಾ 500(kawasaki ninja 500) ಸ್ವಲ್ಪ ದೊಡ್ಡದಾದ, ಟ್ವಿನ್ ಕೂಲ್, 451 ಸಿಸಿ ಎಂಜಿನ್ ಹೊಂದಿದೆ. ಆದಾಗ್ಯೂ, ಈ ಎಂಜಿನ್ ಹೆಚ್ಚಿನ ವೇಗದಲ್ಲಿ ಅತಿಹೆಚ್ಚು ಹೆಚ್ಚು ಶಕ್ತಿಶಾಲಿ ಎಂದು ಸಾಬೀತುಪಡಿಸಿದೆ. ಇದರಿಂದ ಸವಾರಿ ಸುಲಭವಾಗುತ್ತದೆ. ಈ ಎಂಜಿನ್ 9,000 rpm ನಲ್ಲಿ 45 ಹಾರ್ಸ್ ಪವರ್ ಶಕ್ತಿಯನ್ನು ಮತ್ತು 6,000 rpm ನಲ್ಲಿ 42.6 ನ್ಯೂಟನ್ ಮೀಟರ್‌ಗಳ ಟಾರ್ಕ್ ಅನ್ನು ನೀಡುತ್ತದೆ. ನಿಂಜಾ 500(kawasaki ninja 500) ಕೂಡ 6  ಗೇರ್ ಬಾಕ್ಸ್ ಹೊಂದಿದೆ.

ನಿಂಜಾ 500 ಭಾರತೀಯ ಮಾರುಕಟ್ಟೆಯಲ್ಲಿ ಸ್ಪರ್ಧೆ :

ಈಗ ಭಾರತೀಯ ಮಾರುಕಟ್ಟೆಯಲ್ಲಿ, ನಿಂಜಾ 500(kawasaki ninja 500) ಎಪ್ರಿಲಿಯಾ RS 157, KTM RC 390 ಮತ್ತು ಯಮಹಾ YZF R3 ನಂತಹ ಬೈಕ್‌ಗಳೊಂದಿಗೆ ಸ್ಪರ್ಧಿಸಲಿದೆ.

ಇದನ್ನೂ ಓದಿ: Akshaya Trithiya: ಅಕ್ಷಯ ತೃತೀಯ ಸಂಭ್ರಮ – ರಾಜ್ಯದಲ್ಲಿ ಒಂದೇ ದಿನ 2,050 ಕೆಜಿ ಚಿನ್ನ, 1,900 ಕೆಜಿ ಬೆಳ್ಳಿ ಮಾರಾಟ !!

Leave A Reply

Your email address will not be published.