Akshaya Trithiya: ಅಕ್ಷಯ ತೃತೀಯ ಸಂಭ್ರಮ – ರಾಜ್ಯದಲ್ಲಿ ಒಂದೇ ದಿನ 2,050 ಕೆಜಿ ಚಿನ್ನ, 1,900 ಕೆಜಿ ಬೆಳ್ಳಿ ಮಾರಾಟ !!
Akshya Trithiya: ಅಕ್ಷಯ ತೃತೀಯ ಎಂದಾಕ್ಷಣ ನೆನಪಾಗುವುದೇ ಚಿನ್ನ, ಬೆಳ್ಳಿ ಖರೀದಿ. ಅಂತೆಯೇ ನಿನ್ನೆ (ಮೇ 11) ಅಕ್ಷರ ತೃತೀಯ ಸಂಭ್ರಮ. ಅದೂ ಕೂಡ ಈ ಸಲ ಶುಕ್ರವಾರ ಅಕ್ಷಯ ತೃತೀಯ(Akshaya Trithiya) ಬಂದ ಕಾರಣ ರಾಜ್ಯದ ಚಿನ್ನ, ಬೆಳ್ಳಿ ಅಂಗಡಿಗಳೆಲ್ಲಾ ಗ್ರಾಹಕರಿಂದ ತುಂಬಿ ತುಳುಕಿದ್ದವು. ಈ ಹಿನ್ನೆಲೆಯಲ್ಲಿ ನಿನ್ನೆ ಒಂದೇ ದಿನ ಇಡೀ ರಾಜ್ಯದಲ್ಲಿ ಎಷ್ಟು ಕೆಜಿ ಚಿನ್ನ, ಬೆಳ್ಳಿ(Gold-Silver) ಮಾರಾಟವಾಗಿದೆ ಎಂದು ತಿಳಿದರೆ ನೀವೇ ಶಾಕ್ ಆಗ್ತೀರಾ!!
ಅಕ್ಷಯ ತೃತೀಯ ಈ ಬಾರಿ ಶುಕ್ರವಾರ ಬಂದಿದ್ದರಿಂದ ಬೆಂಗಳೂರು(Bengaluru) ಸೇರಿದಂತೆ ರಾಜ್ಯಾದ್ಯಂತ ಚಿನ್ನಾಭರಣಗಳ ಖರೀದಿ ಸಂಭ್ರಮ ಜೋರಾಗಿ ನಡೆಯಿತು. ದೊಡ್ಡದು, ಸಣ್ಣ ಮದು ಎಂದು ಎಂದು ಲೆಕ್ಕಿಸದೆ ಆಭರಣ ಮಳಿಗೆಗಳ ಮುಂದೆ ದೊಡ್ಡ ಜನಸಾಗರವೇ ನೆರೆದಿತ್ತು. ನಿರೀಕ್ಷೆಗಿಂತ ಹೆಚ್ಚಿನ ಪ್ರಮಾಣದಲ್ಲಿಯೇ ಖರೀದಿ ನಡೆಯಿತು. ಈ ಹಿನ್ನೆಲೆಯಲ್ಲಿ ನಿನ್ನೆ ಒಂದೇ ದಿನ ರಾಜ್ಯಾದ್ಯಂತ ಅಕ್ಷಯ ತೃತೀಯ ಪ್ರಯುಕ್ತ 2050 ಕೆ.ಜಿ.ಗೂ ಅಧಿಕ ಚಿನ್ನ ಹಾಗೂ 1900 ಕೆ.ಜಿ.ಗೂ ಹೆಚ್ಚು ಬೆಳ್ಳಿ ಮಾರಾಟವಾಗಿದೆ.
ಇದನ್ನೂ ಓದಿ: Mangaluru: ವಿಮಾನ ಪ್ರಯಾಣಿಕನ ಅನುಚಿತ ವರ್ತನೆ; ಸಮುದ್ರಕ್ಕೆ ಹಾರುವುದಾಗಿ ಬೆದರಿಕೆ
ಈ ಕುರಿತು ಕರ್ನಾಟಕ ರಾಜ್ಯ ಆಭರಣ ವರ್ತಕರ ಒಕ್ಕೂಟ ಮಾಹಿತಿ ನೀಡಿದ್ದು ಕಳೆದ ವರ್ಷಕ್ಕಿಂತ ಈ ಬಾರಿ ಶೇ.18ರಷ್ಟು ಹೆಚ್ಚುವರಿ ವ್ಯಾಪಾರ ನಡೆದಿದೆ ಎಂದು ತಿಳಿಸಿದೆ. ಅಂದಹಾಗೆ ಶುಕ್ರವಾರ ಬೆಳಗ್ಗೆಯಿಂದಲೇ ಆಭರಣ ಮಳಿಗೆಗಳನ್ನು ತೆರೆಯಲಾಗಿತ್ತು. ಕೆಲ ಮಳಿಗೆಗಳು ರಾತ್ರಿ 10-11 ಗಂಟೆವರೆಗೆ ವಹಿವಾಟು ನಡೆಸಿದವು. ಗ್ರಾಹಕರ ಆತಿಥ್ಯಕ್ಕಾಗಿ ಕೆಲವೆಡೆ ಮಳಿಗೆ ಹೊರಗಡೆಯೇ ಪೆಂಡಾಲ್, ಚೇರ್‌ಗಳನ್ನು ಹಾಕಲಾಗಿತ್ತು. ಜ್ಯೂಸ್, ಮಜ್ಜಿಗೆ ಕೊಟ್ಟು ಒಳಗಡೆ ಕಳುಹಿಸಲಾಗುತ್ತಿತ್ತು. ಜನರ ನೂಕುನುಗ್ಗಲು ತಡೆಯಲು ಬ್ಯಾರಿಕೇಡ್‌ಗಳನ್ನೂ ಹಾಕಲಾಗಿತ್ತು. ಮತ್ತೊಂದೆಡೆ ದೊಡ್ಡ ದೊಡ್ಡ ಮಳಿಗೆಗಳಲ್ಲಿ ಆಭರಣಗಳ ಪ್ರದರ್ಶನಕ್ಕೆ ವಿಶೇಷ ವ್ಯವಸ್ಥೆ ಮಾಡಲಾಗಿತ್ತು ಎಂದು ತಿಳಿದುಬಂದಿದೆ.
ಅಲ್ಲದೆ ಅಕ್ಷಯ ತೃತೀಯಕ್ಕೆ ಚಿನ್ನಾಭರಣಗಳ ಖರೀದಿಗಿಂತ ಹೂಡಿಕೆ ಸಲುವಾಗಿ ‘ಗೋಲ್ಡ್ ಕಾಯಿನ್’ಗಳ ಖರೀದಿ ಹೆಚ್ಚಾಗಿತ್ತು. 1 ರಿಂದ 100 ಗ್ರಾಂವರೆಗೂ ಕಾಯಿನ್‌ಗಳು ಲಭ್ಯವಿದ್ದು, ಹಲವರು ಖರೀದಿಸಿದ್ದಾರೆ. ಒಟ್ಟಿನಲ್ಲಿ ಕಳೆದ ವರ್ಷಕ್ಕಿಂತ ಚಿನ್ನಾಭರಣ ಮಾರಾಟ ಶೇ.18ರಷ್ಟು ಹೆಚ್ಚಾಗಿದೆ. ಒಂದೇ ದಿನದಲ್ಲಿ ಸಹಸ್ರ ಕೋಟಿಗೂ ಮೀರಿದ ವಹಿವಾಟು ನಡೆದಿದೆ
ಇದನ್ನೂ ಓದಿ: Puttur: ಮದ್ಯ ಸೇವಿಸಿ ನೆರೆಮನೆಗೆ ತೆರಳಿ ಗಲಾಟೆ ಯತ್ನ; ಸಂಕೋಲೆ ಕಟ್ಟಿ ಎಳೆತರುವಾಗ ಯುವಕ ಸಾವು