South Actress: ಖ್ಯಾತ ನಟಿ ಪಕ್ಕದ ಮನೆಯ ಯುವಕನ ಪ್ರೀತಿಯಲ್ಲಿ ಬಿದ್ದಿದ್ದು ಹೇಗೆ ಗೊತ್ತಾ? ಇದೊಂದು ವಿಚಿತ್ರ ಲವ್ ಸ್ಟೋರಿ!
South Actress: ಪ್ರೀತಿಗೆ ಕಣ್ಣಿಲ್ಲ ಆದ್ರು ಅದಕ್ಕೊಂದು ಪರಿಶುದ್ಧತೆ ಇದೆ. ಈ ಪ್ರೀತಿ ಅನ್ನೋದು ಸಮಯ, ಸಂದರ್ಭ, ವ್ಯಕ್ತಿ, ಯಾವುದನ್ನು ಲೆಕ್ಕಿಸುವುದಿಲ್ಲ. ಅಂತೆಯೇ ಖ್ಯಾತ ನಟಿಯೊಬ್ಬರ (South Actress) ಪ್ರೀತಿ ಕಥೆ ನೀವು ತಿಳಿಯಲೇ ಬೇಕು. ಹೌದು, 80ರ ದಶಕದಲ್ಲಿ ಕನಸಿನ ಕನ್ಯೆಯಾಗಿದ್ದ ನಟಿ ನಾಡಿಯಾ ಹೇಗೆ ಪ್ರೀತಿಸಿ ಮದುವೆ ಆದ್ರು ಅನ್ನೋದು ಒಂದು ಸುಂದರ ಪ್ರೇಮ ಕಥೆಯನ್ನು ಬಿಚ್ಚಿಡುತ್ತದೆ.
ಇದನ್ನೂ ಓದಿ: Pejavara Shri: ಅಯೋಧ್ಯೆಲ್ಲಿ ರಾಮ ಮಂದಿರ ಕಟ್ಟಿದ್ದು ಮೋದಿ ನೇತೃತ್ವದ ಕೇಂದ್ರ ಸರ್ಕಾರವಲ್ಲ – ಪೇಜಾವರ ಶ್ರೀ ಸ್ಟೇಟ್ಮೆಂಟ್ !!
ಸಾಮಾನ್ಯವಾಗಿ ನಟ ನಟಿಯರು ಅವರ ಪ್ರೊಪೆಷನ್ ತಕ್ಕಂತೆ ನಿರ್ದೇಶಕನನ್ನೋ, ನಟನನ್ನೋ, ಹೀರೋ, ಪ್ರೊಡ್ಯೂರನ್ನೋ ಹುಡುಕಿ ಮದುವೆ ಆಗುತ್ತಾರೆ . ಆದ್ರೆ ಈ ನಟಿ ಹಾಗಲ್ಲ ಇವರು ಪ್ರೀತಿ ಬಲೆಗೆ ಬಿದ್ದು ತಮ್ಮ ಮನೆಯ ನೆರೆ ಮನೆಯ ಯುವಕನನ್ನೇ ಮದುವೆ ಆಗಿದ್ದಾರೆ. ಅದೂ ಕೂಡ ಪತ್ರಗಳ ಮೂಲಕ. ಹೌದು, ಅಕ್ಕ -ಪಕ್ಕ ವಾಸಿಸುವ ಯುವಕ-ಯುವತಿ ಪ್ರೀತಿಯಲ್ಲಿ ಬಿದ್ದಿರುವ ಸುಂದರ ಲವ್ ಸ್ಟೋರಿ ಎನ್ನಬಹುದು. ಆ ನಟಿ ಬೇರೆ ಯಾರು ಅಲ್ಲ. ತಮಿಳು ಚಿತ್ರರಂಗದ 80 ರ ದಶಕದಲ್ಲಿ ಕನಸಿನ ಕನ್ಯೆಯಾಗಿದ್ದ ನಟಿ ನಾಡಿಯಾ ಅವರು. ಹೌದು, ಕೇರಳ ಮೂಲದ ನಾಡಿಯಾ ಅವರ ಜನ್ಮ ಹೆಸರು ಜೆರಿನಾ ಮೊಯ್ದು. ಚಿತ್ರಕ್ಕಾಗಿ ತನ್ನ ಹೆಸರನ್ನು ನಾಡಿಯಾ ಎಂದು ಬದಲಾಯಿಸಿಕೊಂಡರು.
ಇದನ್ನೂ ಓದಿ: Panambur: ರಿಕ್ಷಾ ಚಾಲಕನ ಮೇಲೆ ಸ್ಥಳೀಯ ರಿಕ್ಷಾ ಚಾಲಕರಿಂದ ಹಲ್ಲೆ-ದೂರು ದಾಖಲು
ಅವರು 1984 ರಲ್ಲಿ ‘ನೋಕತೆ ದೂರತು ಕಣ್ಣುಂ ನಾಡು’ ಚಿತ್ರದ ಮೂಲಕ ಮಲಯಾಳಂನಲ್ಲಿ ಮೊದಲ ಬಾರಿಗೆ ನಟಿಸಿದರು. ಅವರು ತಮ್ಮ ಮೊದಲ ಚಿತ್ರದಲ್ಲೇ ತಮ್ಮ ಸೌಂದರ್ಯ ಮತ್ತು ಅದ್ಭುತ ಅಭಿನಯದಿಂದ ಅಭಿಮಾನಿಗಳನ್ನು ಆಕರ್ಷಿಸಿದರು. ಅವರ ಅಭಿನಯದಿಂದಲೇ ಅವರಿಗೆ ಪಕ್ಕದಲ್ಲಿಯೇ ತಮಿಳಿನಲ್ಲಿಯೂ ಆಫರ್ ಹೆಚ್ಚಾಯಿತು. ಇನ್ನು ನಟಿ ನಾಡಿಯಾ ತಮ್ಮ ಮೊದಲ ಮಲಯಾಳಂ ಚಿತ್ರಕ್ಕೆ ಅತ್ಯುತ್ತಮ ನಟಿಗಾಗಿ ಫಿಲ್ಮ್ಫೇರ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು. ಆ ನಂತರ ನಾಡಿಯಾಗೆ ಸಿನಿಮಾ ಅವಕಾಶಗಳು ಬರುತ್ತಲೇ ಇದ್ದವು. ನಿರ್ದೇಶಕ ತುಳಸಿ 1985ರಲ್ಲಿ ತಮಿಳು ಸಿನಿಮಾ ‘ಪೂವೆ ಪೂಚೂಡವ’ ಮೂಲಕ ತಮಿಳು ಚಿತ್ರರಂಗಕ್ಕೆ ನಾಯಕಿಯಾಗಿ ಎಂಟ್ರಿ ಕೊಟ್ಟರು.
ಆದ್ರೆ ನಟಿ ನಾಡಿಯ ತನ್ನ ಮನೆಯ ಸಮೀಪ ವಾಸವಿದ್ದ ಶಿರೀಶ್ ಗಡ್ಪೋಲ್ ಎಂಬಾತನನ್ನು ತುಂಬಾ ಪ್ರೀತಿಸುತ್ತಿದ್ದರು. ಪತ್ರಗಳ ಮೂಲಕ ಮುಂದುವರಿದ ಇವರಿಬ್ಬರ ಪ್ರೀತಿ ಕೊನೆಗೆ ಮನೆಯಲ್ಲಿ ಬೆಳಕಿಗೆ ಬಂದಿದ್ದು, ಬೇರೆ ಬೇರೆ ಧರ್ಮದವರಾಗಿದ್ದರೂ ಪೋಷಕರ ಒಪ್ಪಿಗೆ ಮೇರೆಗೆ 1988ರಲ್ಲಿ ವಿವಾಹವಾದರು. ಆದ್ರೆ ಅಂದು ಅತ್ಯಂತ ಜನಪ್ರಿಯ ನಟಿಯಾಗಿದ್ದ ನಾಡಿಯಾ ಮದುವೆಯ ನಂತರ ನಟನೆ ಬಿಟ್ಟಿದ್ದು ಅಭಿಮಾನಿಗಳಿಗೆ ಬೇಸರ ತಂದಿತ್ತು. ಆದರೆ ಫ್ಯಾಮಿಲಿಗೆ ಆದ್ಯತೆ ಕೊಟ್ಟ ನಟಿ ಸಿನಿಮಾಗಳನ್ನು ಬಿಟ್ಟಿದ್ದರು.
ಮದುವೆಯ ನಂತರ ಅಮೇರಿಕಾಕ್ಕೆ ಹಾರಿದ ನಾಡಿಯಾ 2008 ರಲ್ಲಿ ಜಯಂ ರವಿ ಅಭಿನಯದ ಎಂ ಕುಮಾರನ್, ನನ್ ಆಫ್ ಮಹಾಲಕ್ಷ್ಮಿ ಚಿತ್ರದ ಮೂಲಕ ರೀ-ಎಂಟ್ರಿ ಕೊಟ್ಟರು. ಈ ಸಿನಿಮಾದಲ್ಲಿ ಅವರು ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಪ್ರಕಾಶ್ ರಾಜ್ ಕೂಡಾ ಈ ಮೂವಿಯಲ್ಲಿ ನಟಿಸಿದ್ದಾರೆ. ಈ ಸಿನಿಮಾ ಮೂಲಕ ಅವರು ಮತ್ತೆ ತನ್ನ ಕೆರಿಯರ್ ಮುಂದುವರೆಸಿದ್ದಾರೆ. ಸದ್ಯ ಇನ್ನೂ 25ರ ಯುವತಿಯಂತೆ ಇರುವ ನಾಡಿಯಾ ತನ್ನ ಪ್ರೀತಿಯ ಪತಿಯೊಂದಿಗೆ ಇರುವ ಫೋಟೋಗಳು ಸದ್ಯ ಅಂತರ್ಜಾಲದಲ್ಲಿ ಎಲ್ಲರ ಗಮನ ಸೆಳೆಯುತ್ತಿವೆ. ನಾಡಿಯಾಗೆ ಈಗ ಸನಮ್ ಮತ್ತು ಜನಾ ಎಂಬ ಇಬ್ಬರು ಹೆಣ್ಣು ಮಕ್ಕಳಿದ್ದಾರೆ.