Kitchen Tips: ಪಾತ್ರೆಯಿಂದ ಹಾಲು ಉಕ್ಕಿ ಚೆಲ್ಲುತ್ತೆ ಅನ್ನೋ ಟೆನ್ಷನ್ ಬಿಡಿ! ಈ ಟಿಪ್ಸ್ ಫಾಲೋ ಮಾಡಿದ್ರೆ ಸಾಕು!
Kitchen Tips: ಮನೆಯಲ್ಲಿ ದಿನನಿತ್ಯ ಹಾಲಿನ ಉಪಯೋಗ ಇದ್ದೇ ಇದೆ. ಅದರಲ್ಲೂ ಹಾಲು ಬೇಗ ಕೆಟ್ಟು ಹೋಗುತ್ತದೆ. ಹಾಗಾಗಿ ಮನೆಯಲ್ಲಿರುವ ಹಾಲನ್ನು ಆಗಾಗ ಕಾಯಿಸುವುದು ಬಹಳ ಮುಖ್ಯ. ಸದ್ಯ ಹಾಲನ್ನು ಬಿಸಿಮಾಡಲು ಒಲೆಯ ಅಥವಾ ಗ್ಯಾಸ್ ಮೇಲೆ ಇಟ್ಟು ನೀವು ಒಂದು ಕ್ಷಣಕ್ಕೆ ಯಾಮಾರಿದರು ಸಾಕು ಹಾಲು ಉಕ್ಕಿ ಹರಿದಿರುತ್ತದೆ. ಇನ್ನು ಹಾಲುಕ್ಕಿದ ಒಲೆಯನ್ನು ಒರೆಸುವ ಕಷ್ಟ ಯಾರಿಗೂ ಬೇಡ. ಜೊತೆಗೆ ಹಾಲು ತಳವನ್ನೂ ಹಿಡಿದಿರುತ್ತದೆ. ಮೂಸಿ ನೋಡಿದರೆ, ಹಾಲಿನ ಪರಿಮಳ ಹಾರಿ ಹೋಗಿ ಸೀದ ವಾಸನೆ ಹಾಲಿಗೆ ಬಂದಿರುತ್ತದೆ.
ಸದ್ಯ ಹಾಲು ಪಾತ್ರೆಯಿಂದ ಉಕ್ಕಿ ಹೊರಗೆ ಚೆಲ್ಲದಂತೆ ನೀವು ಈ ವಿಧಾನವನ್ನು (Kitchen Tips) ಅನುಸರಿಸುವ ಮೂಲಕ ಹಾಲನ್ನು ಸುಲಭವಾಗಿ ಕಾಯಿಸಬಹುದು.
ನೀವು ಯಾವಾಗಲೂ ಹಾಲನ್ನು ಬಿಸಿ ಮಾಡುವಾಗ, ಸ್ಟವ್ ಉರಿಯನ್ನು ತುಂಬಾ ಕಡಿಮೆ ಇರಿಸಿ. ಹೀಗೆ ಮಾಡುವುದರಿಂದ ಹಾಲು ಪಾತ್ರೆಯಿಂದ ಉಕ್ಕಿ ಹೊರ ಬರುವುದಿಲ್ಲ. ಇದು ಅತ್ಯುತ್ತಮ ಮಾರ್ಗಗಳಲ್ಲಿ ಒಂದಾಗಿದೆ. ಹಾಲನ್ನು ಈ ರೀತಿ ಕಾಯಿಸಿದರೆ ಚಿಂತಿಸುವ ಅಗತ್ಯವಿರುವುದಿಲ್ಲ.
ಇದನ್ನೂ ಓದಿ: Janhavi Kapoor: ಜಾನ್ವಿ ಕಪೂರ್ ಮದುವೆ ಬಗ್ಗೆ ಮತ್ತೊಮ್ಮೆ ವದಂತಿ : ಅಸಲಿಗೆ ಏನಾಯ್ತು ಗೊತ್ತಾ? : ಇಲ್ಲಿ ನೋಡಿ
ಇನ್ನು ಹಾಲನ್ನು ಯಾವಾಗಲೂ ಬಿಸಿ ಮಾಡುವ ಪಾತ್ರೆಯ ಮೇಲ್ಭಾಗವನ್ನು ಎಲ್ಲಾ ಕಡೆಯೂ ನೀರಿನಿಂದ ತೇವಗೊಳಿಸಿ, ನಂತರ ಹಾಲನ್ನು ಪಾತ್ರೆಗೆ ಹಾಕಿ ಕಾಯಿಸಲು ಇಡಿ. ಆಗ ಹಾಲು ತಳಕ್ಕೆ ಅಂಟಿಕೊಳ್ಳುವುದಿಲ್ಲ ಮತ್ತು ಸೀದು ಹೋದ ವಾಸನೆ ಬರುವುದಿಲ್ಲ.
ಇನ್ನು ಹಾಲು ಉಕ್ಕುವುದನ್ನು ತಡೆಯಲು ನೀವು ಬೆಣ್ಣೆಯನ್ನು ಕೂಡ ಸೇರಿಸಬಹುದು. ಇದಕ್ಕಾಗಿ ಪಾತ್ರೆಯ ಅಂಚುಗಳ ಮೇಲೆ ಬೆಣ್ಣೆಯನ್ನು ಹಚ್ಚಿ. ಜೊತೆಗೆ ಪ್ಯಾನ್ ಸುತ್ತಲೂ ಬೆಣ್ಣೆಯನ್ನು ಹಚ್ಚಲು ಮರೆಯಬೇಡಿ. ಹೀಗೆ ಮಾಡುವುದರಿಂದ ಹಾಲು ಉಕ್ಕಿ ಬರುವುದು ಮತ್ತು ಪಾತ್ರೆಗೆ ಅಂಟಿಕೊಳ್ಳುವುದನ್ನು ತಪ್ಪಿಸಬಹುದು.
ಮುಖ್ಯವಾಗಿ 10 ನಿಮಿಷಗಳಿಗಿಂತ ಹೆಚ್ಚು ಕಾಲ ಹಾಲನ್ನು ಕುದಿಸಬೇಡಿ. ಮಧ್ಯಮ ಉರಿಯಲ್ಲಿ 5-10 ನಿಮಿಷಗಳ ಕಾಲ ಹಾಲನ್ನು ಕುದಿಸುವುದು ಉತ್ತಮ. ಇದರ ಹೊರತು ಹಾಲು ಬಿಸಿ ಮಾಡುವಾಗ ಹಾಲು ಇರುವ ಪಾತ್ರೆಯ ಮೇಲೆ ಮರದ ಚಮಚ ಇರಿಸಿ. ಇದರಿಂದಾಗಿ ಹಾಲು ಪಾತ್ರೆಯ ಹೊರಗೆ ಬೀಳುವುದಿಲ್ಲ.