Actor Bernard Hill: ‘ಟೈಟಾನಿಕ್’ ಸಿನಿಮಾದ ಕ್ಯಾಪ್ಟನ್ ನಟ ಬರ್ನಾರ್ಡ್ ಹಿಲ್ ನಿಧನ

Share the Article

Actor Bernard Hill: ಹಾಲಿವುಡ್ ನ ಸೂಪರ್ ಡೂಪರ್ ಜನಪ್ರಿಯ ಸಿನಿಮಾ ಟೈಟಾನಿಕ್ ನ ಕ್ಯಾಪ್ಟನ್ ನಟ ಬರ್ನಾರ್ಡ್ ಹಿಲ್ ನಿಧನರಾಗಿದ್ದಾರೆ. 79ರ ಪ್ರಾಯದ ಈ ನಟ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದು, ಇದೀಗ ನಿಧನರಾಗಿದ್ದಾರೆ. ಸಾಕಷ್ಟು ಹಾಲಿವುಡ್ ಚಿತ್ರಗಳಲ್ಲಿ ನಟಿಸಿರುವ ಬರ್ನಾರ್ಡ್ ಸುಮಾರು 11 ಬಾರಿ ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿಗಳನ್ನು ಪಡೆದಿದ್ದಾರೆ ಅನ್ನುವುದು ವಿಶೇಷ. ಬರ್ನಾರ್ಡ್ ನಿಧನಕ್ಕೆ ಕೇವಲ ಹಾಲಿವುಡ್ ಮಾತ್ರವಲ್ಲ, ಜಗತ್ತಿನ ಅನೇಕ ಸಿನಿ ತಂತ್ರಜ್ಞರು ಹಾಗೂ ಕಲಾವಿದರು ಮತ್ತು ಅಭಿಮಾನಿಗಲು ಕಂಬನಿ ಮಿಡಿದಿದ್ದಾರೆ.

ಇದನ್ನೂ ಓದಿ: H D Revanna: ಎಚ್ ಡಿ ರೇವಣ್ಣ ಇದೀಗ ‘ಕೈದಿ ನಂಬರ್ 4567’ !!

ಟೈಟಾನಿಕ್ ಸಿನಿಮಾದಲ್ಲಿ ಅವರು ಟೈಟಾನಿಕ್ ಹಡಗಿನ ಕ್ಯಾಪ್ಟನ್ ಪಾತ್ರ ವಹಿಸಿದ್ದರು. ‘ದಿ ಲಾರ್ಡ್ ಆಫ್ ದಿ ರಿಂಗ್ಸ್’ ಎಂಬ ಎರಡನೇ ಚಿತ್ರ, 2002 ರ ‘ದಿ ಟು ಟವರ್ಸ್’, ಥಿಯೋಡೆನ್, ಕಿಂಗ್ ಆಫ್ ರೋಹನ್ ಮುಂತಾದ ಅದ್ಭುತ ಪಾತ್ರವನ್ನು ಸಾಕಾರಗೊಳಿಸಿದರು. ನಂತರದ ವರ್ಷ, ಅವರು 11 ಆಸ್ಕರ್‌ಗಳನ್ನು ಗಳಿಸಿದ ಸಿನಿಮೀಯ ಮೇರುಕೃತಿ ‘ದಿ ರಿಟರ್ನ್ ಆಫ್ ದಿ ಕಿಂಗ್’ ನಲ್ಲಿ ಪಾತ್ರ ಮಾಡಿದ್ದರು ಹಿಲ್ ರವರು.

ಇದನ್ನೂ ಓದಿ: Bengaluru: ಅಕ್ಕನ ಮನೆಗೆ ಕನ್ನ ಹಾಕಿದ ತಂಗಿ, ಲಕ್ಷಾಂತರ ಮೌಲ್ಯದ ಚಿನ್ನ ಹಣ ಕಳವು, ಬಂಧನ

Leave A Reply