IPL-2024: ಲಕ್ನೋ ಸೂಪರ್ ಜೈಂಟ್ಸ್ ಭೀಕರ ಸೋಲು : ಕೆಎಲ್ ರಾಹುಲ್ ವಿರುದ್ದ ಲಕ್ನೋ ಮಾಲೀಕ ಕೋಪ
K L Rahul IPL Match-2024: ಬುಧವಾರ ಐಪಿಎಲ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಲಕ್ನೋ ಸೂಪರ್ ಜೈಂಟ್ಸ್ (lucknow super giants) ಸನ್ ರೈಸರ್ಸ್ ಬೌಲರ್ ಗಳು ಹಾಗೂ ಫೀಲ್ಡರ್ ಗಳ ಅದ್ಭುತ ಪ್ರದರ್ಶನದಿಂದಾಗಿ ಲಕ್ನೋ ನಿಗದಿತ 20 ಓವರ್ ಗಳಲ್ಲಿ ನಾಲ್ಕು ವಿಕೆಟ್ ನಷ್ಟಕ್ಕೆ 165 ರನ್ ಗಳಿಗೆ ಮಾತ್ರ ಸೀಮಿತವಾಯಿತು. ಕೆಎಲ್ ರಾಹುಲ್ (KL Rahul)(29) ಮತ್ತು ಕೃನಾಲ್ ಪಾಂಡ್ಯ(krunal pandya)(24) ಸಾಧಾರಣ ಸ್ಕೋರ್ ಗಳಿಸಿದರು. ನಿಕೋಲಸ್ ಪೂರನ್(Nikolas puran)(26 ಎಸೆತಗಳಲ್ಲಿ 48*) ಮತ್ತು ಆಯುಷ್ ಬಡೋನಿ(Aush badoni) (30 ಎಸೆತಗಳಲ್ಲಿ 55*) ಮಿಂಚಿದರು.
ಆದರೆ, ಲಖನೌ (lucknow super giants) ನೀಡಿದ ಈ ಗುರಿಯನ್ನು ಸನ್ ರೈಸರ್ಸ್ ಹೈದರಾಬಾದ್ ತಂಡವು ಗಾಳಿಗೆ ತೂರಿತು. ಆರಂಭಿಕರಾದ ಅಭಿಷೇಕ್ ಶರ್ಮಾ(Abishek Sharma)(28 ಎಸೆತಗಳಲ್ಲಿ 75) ಮತ್ತು ಟ್ರಾವಿಸ್ ಹೆಡ್ (30 ಎಸೆತಗಳಲ್ಲಿ 89) ರನ್‌ಗಳ ಮಹಾಪೂರವೇ ಹರಿದು ಸನ್‌ರೈಸರ್ಸ್ ತಂಡವನ್ನು 10 ವಿಕೆಟ್‌ಗಳಿಂದ ಗೆದ್ದುಕೊಂಡರು. ಅವರನ್ನು ಕಟ್ಟಿಹಾಕಲು ಲಖನೌ ನಾಯಕ ಕೆಎಲ್ ರಾಹುಲ್ ಮಾಡಿದ ತಂತ್ರಗಳು ಫಲ ಕೊಡಲಿಲ್ಲ.
ಈ ಹಿನ್ನಲೆಯಲ್ಲಿ ಭಾರೀ ಸೋಲಿನ ಬಳಿಕ ಲಖನೌ(lucknow super giants) ಮಾಲೀಕ ಸಂಜೀವ್ ಗೋಯೆಂಕಾ ಕೆಎಲ್ ರಾಹುಲ್ ಜೊತೆ ವಾಗ್ವಾದಕ್ಕಿಳಿದರು, ಎಲ್ಲರೂ ನೋಡುತ್ತಿರುವಾಗಲೇ ರಾಹುಲ್ ಅವರನ್ನು ಸೀರಿಯಸ್ ಆಗಿ ಕ್ಲಾಸ್ ತೆಗೆದುಕೊಂಡರು.
ನಾಯಕನ ವಿವರಣೆಯನ್ನು ನಿರ್ಲಕ್ಷಿಸಿದ ಮಾಲೀಕ ನನಗೆ’ಸಮಾಜಾಯಿಸಿ ಹೇಳಬೇಡ, ನಾನು ಅದನ್ನು ಸಹಿಸುವುದಿಲ್ಲ. ಈ ಮ್ಯಾಚ್ ಎಷ್ಟು ಮುಖ್ಯವೆಂದು ನಿಮಗೆ ತಿಳಿದಿಲ್ಲವೇ? ಎಂಬ ರೀತಿಯಲ್ಲಿ ಮಾತನಾಡಿರುವ ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗುತ್ತಿದೆ.
ಇವರಿಬ್ಬರ ನಡುವಿನ ಮಾತುಕತೆಯ ಬಗ್ಗೆ ಸ್ಪಷ್ಟತೆ ಇಲ್ಲದಿದ್ದರೂ ಸಾಮಾಜಿಕ ಜಾಲತಾಣಗಳಲ್ಲಿ ಭಿನ್ನಾಭಿಪ್ರಾಯಗಳು ವ್ಯಕ್ತವಾಗುತ್ತಿವೆ. ಕೆಲವರು ಸಂಜೀವ್ ಗೋಯೆಂಕಾ(Sanjiv goenka) ಅವರ ವರ್ತನೆಯನ್ನು ಟೀಕಿಸುತ್ತಿದ್ದರೆ, ಇನ್ನು ಕೆಲವರು ಇದು ಸರಿ ಎಂದು ಕಮೆಂಟ್ ಮಾಡುತ್ತಿದ್ದಾರೆ. ಮೈದಾನದಲ್ಲಿ ಆಟಗಾರನನ್ನು ಅಮಾನತುಗೊಳಿಸುವ ಹಕ್ಕು ಫ್ರಾಂಚೈಸಿ ಮಾಲೀಕರಿಗೆ ಇಲ್ಲ ಮತ್ತು ಇದು ತುಂಬಾ ಕೆಟ್ಟದಾಗಿದೆ ಎಂದು ನೆಟ್ಟಿಗರು ಬೇಸರ ವ್ಯಕ್ತಪಡಿಸಿದ್ದಾರೆ.
ಕ್ರೀಡೆಯಲ್ಲಿ ಸೋಲು-ಗೆಲುವು ಸಹಜ, ಆಟಗಾರರನ್ನು ದೂಷಿಸುವಂತಿಲ್ಲ ಎಂದು ನೆಟ್ಟಿಗರು ಟೀಕಿಸಿದ್ದಾರೆ. ಆದರೆ ಈ ಘಟನೆಯೊಂದಿಗೆ ಕೆಎಲ್ ರಾಹುಲ್ ಲಕ್ನೋ ಸೂಪರ್ ಜೈಂಟ್ಸ್ ತೊರೆಯುತ್ತಾರೆ ಎಂಬ ಪ್ರಚಾರ ವೇಗ ಪಡೆದುಕೊಂಡಿದೆ. ಮುಂದಿನ ವರ್ಷ ಮೆಗಾ ಹರಾಜು ನಡೆಯುವ ಹಿನ್ನೆಲೆಯಲ್ಲಿ ರಾಹುಲ್ (kl Rahul)ಮತ್ತೊಂದು ತಂಡವನ್ನು ನೋಡಿಕೊಳ್ಳಲಿದ್ದಾರೆ ಎಂದು ನೆಟಿಜನ್ ಗಳು ಕಾಮೆಂಟ್ ಮಾಡುತ್ತಿದ್ದಾರೆ