Sullia: ಸುಳ್ಯದಲ್ಲಿ ಮೊಬೈಲ್ ರೀಚಾರ್ಜ್‌ಗೆಂದು ಬಂದಿದ್ದ ಹಿಂದೂ ಯುವತಿಯ ಫೋಟೋ ತೆಗೆದ ಅನ್ಯಕೋಮಿನ ಯುವಕ; ದೂರು ದಾಖಲು

Sullia: ಗಾಂಧಿನಗರದ ಏರ್‌ಟೆಲ್ ಮಳಿಗೆಗೆ ಕರೆನ್ಸಿ ರೀಚಾರ್ಜ್ ಮಾಡಲೆಂದು ಬಂದ ಯುವತಿಯೋರ್ವಳ ಫೋಟೋ ಕ್ಲಿಕ್ಕಿಸಿದ ಅನ್ಯಕೋಮಿನ ಯುವಕನ ಮೇಲೆ ಯುವತಿಯ ಮನೆಯವರು ಪೊಲೀಸ್‌ಗೆ ದೂರು ನೀಡಿದ ಘಟನೆಯೊಂದು ಸೋಮವಾರ ನಡೆದಿದೆ.
ಇದನ್ನೂ ಓದಿ: SSLC Result: ಎಸ್ಸೆಸ್ಸೆಲ್ಸಿ ಫಲಿತಾಂಶ ಮೇ 9 ಕ್ಕೆ ಪ್ರಕಟ
ಹಿಂದೂ ಯುವತಿ ಗಾಂಧಿನಗರದಲ್ಲಿ ಇರುವ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದು, ಮೊಬೈಲ್ ರಿಚಾರ್ಜ್ ಮಾಡಲೆಂದು ಹೋದಾಗ, ಕುಳಿತುಕೊಳ್ಳುವಂತೆ ಹೇಳಿದ ಯುವಕ ಆಕೆಗೆ ಅರಿವಿಲ್ಲದಂತೆ ಫೊಟೋ ಕ್ಲಿಕ್ಕಿಸಿದ್ದಾನೆ. ಇದನ್ನು ಗಮನಿಸಿದ ಯುವತಿ ಆಕ್ಷೇಪ ವ್ಯಕ್ತಪಡಿಸಿದ್ದಾಳೆ. ನಂತರ ಆತನ ಮೊಬೈಲನ್ನು ಕಸಿದು ನೋಡಿದಾಗ ತನ್ನ ಫೋಟೋ ಇರುವುದು ಕಂಡಿದ್ದು, ಅದನ್ನು ಡಿಲೀಟ್ ಮಾಡಿದ್ದಾಳೆ. ನಂತರ ತನ್ನ ಮನೆಗೆ ಬಂದು ವಿಷಯ ತಿಳಿಸಿದ್ದಾಳೆ.
ಇದನ್ನೂ ಓದಿ: NABARD: ರೈತರಿಗೆ ನೇರ ಸಾಲ ಇಲ್ಲ
ಅನಂತರ ಮನೆಯವರು ಸುಳ್ಯ ಠಾಣೆಗೆ ದೂರು ನೀಡಿದ್ದು, ಪೊಲೀಸರು ಯುವಕನನ್ನು ಕರೆ ತಂದು ವಿಚಾರಣೆ ನಡೆಸಿದ್ದಾರೆ. ವಿಷಯ ತಿಳಿದು ಹಿಂದೂ ಕಾರ್ಯಕರ್ತರು ಠಾಣೆಯೆದುರು ಜಮಾಯಿಸಿದ ಘಟನೆ ಕೂಡಾ ನಡೆದಿದೆ.