Home News Raju Kage: ಹಿಂದೂ ಕಾರ್ಯಕರ್ತರು ಗತಿಯಿಲ್ಲದವರು, ಭಿಕ್ಷುಕರು – ನಾಲಗೆ ಹರಿಬಿಟ್ಟ ಕಾಂಗ್ರೆಸ್ ಶಾಸಕ ರಾಜು...

Raju Kage: ಹಿಂದೂ ಕಾರ್ಯಕರ್ತರು ಗತಿಯಿಲ್ಲದವರು, ಭಿಕ್ಷುಕರು – ನಾಲಗೆ ಹರಿಬಿಟ್ಟ ಕಾಂಗ್ರೆಸ್ ಶಾಸಕ ರಾಜು ಕಾಗೆ !!

Raju Kage

Hindu neighbor gifts plot of land

Hindu neighbour gifts land to Muslim journalist

Raju Kage: ಲೋಕಸಭಾ ಚುನಾವಣೆಯ ಪ್ರಚಾರದ ವೇಳೆ ಪ್ರಧಾನಿ ನರೇಂದ್ರ ಮೋದಿವವರು ನಾಳೆ ಸತ್ತರೆ ಮತ್ಯಾರೂ ಪ್ರಧಾನಿ ಆಗೋದಿಲ್ಲವೇನು ಎಂದು ಪ್ರಶ್ನಿಸಿ ವಿವಾದಕ್ಕೆ ಕಾರಣವಾಗಿದ್ದ ಕಾಂಗ್ರೆಸ್ ಶಾಸಕ ರಾಜು(Raju Kage) ಕಾಗೆ ಇದೀಗ ಹಿಂದೂ ಕಾರ್ಯಕರ್ತರನ್ನು ಕೆಣಕಿ ಉದ್ಧಟತನದ ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ: Education Board : ನೋಟ್ ಬುಕ್, ಸಮವಸ್ತ್ರ ಖರೀದಿಸಲು ಒತ್ತಾಯಿಸುವಂತಿಲ್ಲ – ಶಾಲೆಗಳಿಗೆ ಸರ್ಕಾರದ ಸೂಚನೆ !!

ಹೌದು, ಬೆಳಗಾವಿ(Belagavi) ಜಿಲ್ಲೆಯ ಕಾಗವಾಡ ತಾಲೂಕಿನ ಜುಗುಳ ಗ್ರಾಮದಲ್ಲಿ ಪ್ರಿಯಾಂಕಾ ಜಾರಕಿಹೊಳಿ(Priyanka Jarkiholi) ಪರ ಪ್ರಚಾರ ನಡೆಸಿ ಮಾತನಾಡುವ ಸಂದರ್ಭದಲ್ಲಿ ಹಿಂದು ಕಾರ್ಯಕರ್ತರಿಗೆ(Hindu Karyakartaru) ‘ಬಿಕಾರ್‌ಚೋಟ್’ ಎನ್ನುವ ಮೂಲಕ ರಾಜು ಕಾಗೆ ನಾಲಗೆ ಹರಿಬಿಟ್ಟಿದ್ದಾರೆ. ಅಂದ್ರೆ ಹಿಂದೂ ಕಾರ್ಯಕರ್ತರು ಗತಿ ಇಲ್ಲದ ಭಿಕ್ಷುಕರು ಎಂದು ಶಾಸಕ ರಾಜು ಕಾಗೆ ಉದ್ಧಟತನ ತೋರಿದ್ದಾರೆ. ಕಾಗೆ ಹೇಳಿಕೆಗೆ ಭಾರೀ ಆಕ್ರೋಶ ವ್ಯಕ್ತವಾಗಿದೆ.

ಇದನ್ನೂ ಓದಿ: Devils Cry Revealed: ಮಗುವಿನ ಕೋಣೆಯಲ್ಲಿ ಕೇಳುತ್ತಿತ್ತು ದೆವ್ವದ ಸದ್ದು – ಭ್ರಮೆ ಎಂದ ಹೆತ್ತವರನ್ನೇ ಬೆಚ್ಚಿಬೀಳಿಸಿತು ಸತ್ಯ ಸಂಗತಿ !!

ಬಳಿಕ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಅವರು ಜನರ ಸಮಸ್ಯೆಗಳಿಗೆ ಪರಿಹಾರ ನೀಡಿದರೆ ನಾವೂ ದೇವಸ್ಥಾನಗಳನ್ನು ನಿರ್ಮಿಸುತ್ತೇವೆ. ಬಿಜೆಪಿ ಕಾರ್ಯಕರ್ತರಿಗೆ ‘ಜೈ ಶ್ರೀರಾಮ್’ ಎಂದು ಘೋಷಣೆ ಕೂಗಲು ಮಾತ್ರ ಗೊತ್ತು ಎಂದು ಕಿಡಿಕಾರಿದ್ದಾರೆ.