Tourism Place: ಚಿಕ್ಕಮಗಳೂರಿನಲ್ಲಿ ಈ ಎರಡು ದಿನ ಎಲ್ಲಾ ಹೋಂ ಸ್ಟೇ, ರೆಸಾರ್ಟ್‌ ಕ್ಲೋಸ್!

Tourism Place: ಕಾಫಿನಾಡಿನ ಪ್ರಕೃತಿ ಸೌಂದರ್ಯ ವೀಕ್ಷಿಸಲು ತೆರಳುವವರು ಈ ಸುದ್ದಿಯನ್ನು ಓದಲೇಬೇಕು. ಯಾಕೆಂದರೆ ಈ ಎರಡು ದಿನಗಳ ಕಾಲ ಅಲ್ಲಿನ ಎಲ್ಲ ಹೋಂ ಸ್ಟೇ, ರೆಸಾರ್ಟ್‌ಗಳು ತನ್ನ ಕಾರ್ಯಚಟುವಟಿಕೆ ಸ್ಥಗಿತಗೊಳಿಸುವಂತೆ ಚಿಕ್ಕಮಗಳೂರು ಜಿಲ್ಲಾಡಳಿತ ಆದೇಶಿಸಿದೆ. ಚುನಾವಣೆ ಹಿನ್ನೆಲೆ ಎಪ್ರಿಲ್‌ 25, 26 ರಂದು ಪ್ರವಾಸಿಗರಿಗೆ ಬುಕ್ಕಿಂಗ್ ಬಂದ್ ಮಾಡುವಂತೆ ಡಿಸಿ ಮೀನಾ ನಾಗರಾಜ್ ಆದೇಶಿಸಿದ್ದಾರೆ.

ಇದನ್ನೂ ಓದಿ: Fashion Tips: ಅಸಲಿ ಮತ್ತು ನಕಲಿ ಬೆಳ್ಳಿ ಆಭರಣಗಳ ನಡುವೆ ಅಸಲಿ ಬೆಳ್ಳಿ ಪತ್ತೆ ಮಾಡುವುದು ಹೇಗೆ?

ಆದ್ದರಿಂದ ಈ 2 ದಿನ ಚಿಕ್ಕಮಗಳೂರಲ್ಲಿ ಯಾವುದೇ ಹೋಂ ಸ್ಟೇ, ರೆಸಾರ್ಟ್‌ಗಳು ತೆರೆದಿರುವುದಿಲ್ಲ. ಹೀಗಾಗಿ ಎಲ್ಲ ಮಾದರಿಯ ಬುಕ್ಕಿಂಗ್‌ ಕೂಡಾ ಸ್ಥಗಿತಗೊಳಿಸಲಾಗಿದೆ. ಜೊತೆಗೆ, ಹೊರ ಜಿಲ್ಲೆಯಿಂದ ಬರುವ ಯಾವುದೇ ಪ್ರವಾಸಿಗರಿಗೆ ಹೋಟೆಲ್‌ ಸಹಿತ ಹೋಂ ಸ್ಟೇ, ರೆಸಾರ್ಟ್‌ಗಳಲ್ಲಿ ವಾಸ್ತವ್ಯ ಅನುವು ಮಾಡಿಕೊಡದಂತೆ ಜಿಲ್ಲಾಡಳಿತ ಆದೇಶಿಸಿದೆ.

DAILY PRIZE DRAW
23:59:59
Daily Prize
Enter Now and Earn $50
View this ad to enter today's drawing
1,453 entries today

ಇದನ್ನೂ ಓದಿ: Snake Free State: ಭಾರತದ ಈ ರಾಜ್ಯಕ್ಕೆ ‘ಸ್ನೇಕ್ ಫ್ರೀ’ ರಾಜ್ಯ ಸ್ಥಾನಮಾನ

ರಾಜ್ಯದ ಎಲ್ಲ ಭಾಗಗಳಲ್ಲಿ ಅತ್ಯಧಿಕ ಮತದಾನ ದಾಖಲಿಸುವ ನಿಟ್ಟಿನಲ್ಲಿ ಈ ಕ್ರಮವನ್ನ ಕೈಗೊಳ್ಳಲಾಗಿದೆ. ಲೋಕಸಭೆ ಚುನಾವಣೆಯಲ್ಲಿ ಯಾರೊಬ್ಬರೂ ಮತದಾನದಿಂದ ಹೊರಗುಳಿಯಬಾರದು ಎಂಬ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.

Leave A Reply

Your email address will not be published.