Hassan: ಮನೆಯಂಗಳದಲ್ಲೇ ಎರಡು ಆನೆಗಳ ಕಾದಾಟ; ವೀಡಿಯೋ ವೈರಲ್‌

Share the Article

Hassan: ಸಾಮಾನ್ಯವಾಗಿ ಆನೆಗಳ ಕಾದಾಟವೆಂದರೆ ಎಲ್ಲರೂ ಭಯಭೀತರಾಗಿ ನೋಡುವುದೇ ಹೆಚ್ಚು. ಆದರೆ ಅಂತಹ ಒಂದು ಘಟನೆಯೊಂದು ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಅರೇಹಳ್ಳಿ ಹೋಬಳಿಯ ಹುಲ್ಲೇಮಕ್ಕಿ ಗ್ರಾಮದ ಯೂನುಸ್‌ ಎಂಬುವವರ ಮನೆಯ ಸಮೀಪ ನಡೆದಿದೆ.

ಎರಡು ಕಾಡಾನೆಗಳು ಸುಮಾರು ಅರ್ಧ ಗಂಟೆಗಳ ಕಾಲ ಕಾದಾಟ ಮನೆಯಂಗಳದಲ್ಲೇ ಕಾದಾಟ ನಡೆಸಿದೆ. ಕರಡಿ ಹಾಗೂ ಕ್ಯಾಪ್ಟನ್‌ ಎಂಬ ಎರಡು ಕಾಡಾನೆಗಳೇ ಈ ಕಾದಾಟ ನಡೆಸಿದ್ದು.

ಇದನ್ನೂ ಓದಿ: ಪಿರಿಯಡ್ಸ್ ಸಮಯದಲ್ಲಿ ಭಾರೀ ರಕ್ತಸ್ರಾವ, ನೋವು ಕಡಿಮೆ ಮಾಡುವುದು ಹೇಗೆ ? : ಹೀಗೆ ಮಾಡಿ ನೋವು ಮಾಯವಾಗುತ್ತೆ

ಈ ಘಟನೆ ನಡೆದಿರುವುದು ಸೋಮವಾರ ಮಧ್ಯಾಹ್ನ ಸುಮಾರು 1 ಗಂಟೆಯ ಹೊತ್ತಿದೆ. ಕಾದಾಟ ಕಂಡು ಮನೆಯ ಮಾಲೀಕರು ಅರಣ್ಯ ಇಲಾಖೆಗೆ ಕರೆ ಮಾಡಿ ವಿಷಯ ತಿಳಿಸಿದ್ದು, ಕೂಡಲೇ ಅರಣ್ಯ ಇಲಾಖೆ ಹಾಗೂ ಆನೆ ಕಾರ್ಯ ಪಡೆ ಸಿಬ್ಬಂದಿಗಳು ಸ್ಥಳಕ್ಕೆ ಬಂದು ಹರಸಾಹಸದಿಂದ ಕಾಡಾನೆಗಳನ್ನು ಕಡಿವಾಣಕ್ಕೆ ತೆಗೆದುಕೊಂಡು ಎರಡು ಆನೆಯನ್ನೂ ಬೇರ್ಪಡಿಸಿ ಹಿಮ್ಮೆಟ್ಟಿಸಿದ್ದಾರೆ.

ಕಾಡಾನೆಗಳ ಕಾದಾಟದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಇದನ್ನೂ ಓದಿ: Vastu Tips: ಬೆಡ್ ರೂಮ್ ವಾಸ್ತು ಹೀಗಿದ್ದರೆ ಸಾಕು, ದಂಪತಿಗಳು ಯಾವಾಗ್ಲೂ ಖುಷಿ ಖುಷಿಯಾಗಿ ಇರ್ತಾರೆ!

Leave A Reply

Your email address will not be published.