Accident: ಟ್ರಕ್ ಮತ್ತು ಕಾರಿನ ನಡುವೆ ಬೀಕರ ರಸ್ತೆ ಅಪಘಾತ : ಕಾರಿನಲ್ಲಿದ್ದ ಇಬ್ಬರು ಮಕ್ಕಳು ಸೇರಿ 7 ಜನ ಸಜೀವ ದಹನ

Accident: ದೇಶದಾದ್ಯಂತ ಇತ್ತೀಚಿಗೆ ಅಪಘಾತ ಪ್ರಕರಣಗಳು ಹೆಚ್ಚಾಗಿ ದಾಖಲಾಗುತ್ತಿವೆ. ಭಾನುವಾರರದಂದು ಟ್ರಕ್ ಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಕಾರಿಗೆ ಬೆಂಕಿ ಹೊಂದಿಕೊಂಡು, ಇಬ್ಬರು ಮಕ್ಕಳು ಸೇರಿದಂತೆ ಏಳು ಮಂದಿ ಸಜೀವ ದಹನವಾಗಿರುವ ಘಟನೆ ರಾಜಸ್ಥಾನದ ಚುರು ಜಿಲ್ಲೆಯ, ಚುರು-ಸಲಸರ್ ರಾಜ್ಯ ಹೆದ್ದಾರಿಯಲ್ಲಿ ನಡೆದಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

 

ಇದನ್ನೂ ಓದಿ: Parliment Election: ಕಾಂಗ್ರೆಸ್ ಅಭ್ಯರ್ಥಿಯ ಪ್ರಚಾರಕ್ಕೆ ಜನರೇ ಸಂಗ್ರಹಿಸಿ ಕೊಟ್ಟರು 50 ಲಕ್ಷ !!

ಈ ಕುಟುಂಬವು ಸಲಾಸ‌ರ್ ಬಾಲಾಜಿ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದ ಬಳಿಕ ಮತ್ತೆ ತಮ್ಮ ಊರಿಗೆ ಹಿಂದಿರುಗುತ್ತಿದ್ದರು ಎಂದು ಪೊಲೀಸ ಅಧಿಕಾರಿ ಸುಭಾಷ್ ಬಿಕಾರಿಯಾ ತಿಳಿಸಿದ್ದಾರೆ. ಅಪಘಾತದ ಮಾಹಿತಿ ಪಡೆದ ನಂತರ ಪೊಲೀಸರು ತಕ್ಷಣ ಸ್ಥಳಕ್ಕೆ ಧಾವಿಸಿ ಅಗ್ನಿಶಾಮಕ ದಳಕ್ಕೆ ಕರೆ ಮಾಡಿ ಬೆಂಕಿಯನ್ನು ನಂದಿಸಿದರು ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ: Amith Shah: ಮೀಸಲಾತಿಯನ್ನು ಎಂದೂ ರದ್ದು ಮಾಡಲ್ಲ, ಅದು ಶಾಶ್ವತ – ಅಮಿತ್ ಶಾ ಸ್ಪಷ್ಪನೆ !!

ಕಾರು ಚಾಲಕ ಟ್ರಕ್ ಅನ್ನು ಓವರ್ ಟೇಕ್ ಮಾಡಲು ಯತ್ನಿಸಿದ್ದು, ಈ ವೇಳೆ ಇದ್ದಕ್ಕಿದ್ದಂತೆ ಮತ್ತೊಂದು ವಾಹನ ಎದುರಿಗೆ ಬಂದ ಕಾರಣ ಗಾಡಿಯನ್ನು ನಿಯಂತ್ರಿಸಲಾಗದೆ ಟ್ರಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿ ಸ್ಥಳದಲ್ಲಿಯೇ ಬೆಂಕಿ ಹೊತ್ತಿಕೊಂಡು ಕಾರು ಹತ್ತಿ ಉರಿದಿದೆ.

ಅಲ್ಲಿಯ ಸ್ಥಳೀಯ ನಿವಾಸಿಗಳು ಕಾರಿನಲ್ಲಿ ಇದ್ದವರನ್ನು ಉಳಿಸಲು ಯತ್ನಿಸಿದ್ದು, ಆದರೆ ಬೆಂಕಿಯ ಕೆನ್ನಾಲಗೆ ದಗದಗನೆ ಹತ್ತಿ ಉರಿಯುತ್ತಿದ್ದರಿಂದ ಕಾರಿನಲ್ಲಿದ್ದವರನ್ನು ರಕ್ಷಿಸಲು ಸಾಧ್ಯವಾಗಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಈ ದುರ್ಘಟನೆಯಲ್ಲಿ ಸಾವನ್ನಪ್ಪಿದವರನ್ನು ಉತ್ತರ ಪ್ರದೇಶದ ಮೀರತ್ ನಗರದ ನಿವಾಸಿಗಳಾದ ನೀಲಂ ಗೋಯಲ್, ಅಶುತೋಷ್ ಗೋಯಲ್, ಮಂಜು ಬಿಂದಾಲ್, ಹಾರ್ದಿಕ್ ಬಿಂದಾಲ್, ಸ್ವಾತಿ ಬಿಂದಾಲ್, ದೀಕ್ಷಾ ಮತ್ತು ನಾಲ್ಕು ವರ್ಷದ ಮಗು ಎಂದು ಗುರುತಿಸಲಾಗಿದೆ.

Leave A Reply

Your email address will not be published.